ಮೂಡುಬಿದಿರೆ: ʼಫಾರ್ಚೂನ್ ನೀತಿ ಹೈಟ್ಸ್ʼ ವಾಣಿಜ್ಯ ಮತ್ತು ವಸತಿ ಸಮುಚ್ಚಯ ಉದ್ಘಾಟನೆ

Update: 2024-12-01 16:44 GMT

ಮೂಡುಬಿದಿರೆ: ಫಾರ್ಚೂನ್ ಪ್ರೊಮೋಟರ್ಸ್ ಅವರ ನೂತನ ʼಫಾರ್ಚೂನ್ ನೀತಿ ಹೈಟ್ಸ್ʼ ವಾಣಿಜ್ಯ ಮತ್ತು ವಸತಿ ಸಮುಚ್ಚಯವು ರವಿವಾರ ಮೂಡುಬಿದಿರೆ ಪುರಸಭೆ ಕಾರ್ಯಾಲಯದ ಮುಂಭಾಗದಲ್ಲಿ ಉದ್ಘಾಟನೆಗೊಂಡಿತು‌.

ಸಮುಚ್ಚಯವನ್ನು ಮಾಜಿ ಸಚಿವ ಅಭಯ ಚಂದ್ರ ಜೈನ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಬೆಳೆಯುತ್ತಿರುವ ಮೂಡುಬಿದಿರೆಗೆ ಇಂತಹಾ ಸಮುಚ್ಚಯಗಳ ಅಗತ್ಯತೆ ತುಂಬಾ ಇದೆ. ಫಾರ್ಚೂನ್ ಸಂಸ್ಥೆ ತಮ್ಮ ಸಮುಚ್ಚಯಗಳ‌ ಮೂಲಕ ಮೂಡುಬಿದಿರೆಯನ್ನು ಸುಂದರಗೊಳಿಸಿದೆ ಎಂದು ನುಡಿದರು.


ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಮೂಡಬಿದಿರೆ ಆಳ್ವಾಸ್ ವಿದ್ಯಾಸಂಸ್ಥೆಯ ಮುಖ್ಯಸ್ಥ ಡಾ. ಮೋಹನ್ ಆಳ್ವ ಅವರು, ಪಾರ್ಚೂನ್ ಪ್ರೊಮೋಟರ್ಸ್ ಈವರೆಗೆ ಹಲವು ವಸತಿ, ವಾಣಿಜ್ಯ ಸಂಕೀರ್ಣಗಳನ್ನು ಮಾಡಿದ್ದು, ಎಲ್ಲೂ ಅವರು ಗುಣಮಟ್ಟದಲ್ಲಿ ರಾಜಿ ಮಾಡಿಕೊಂಡಿಲ್ಲ. ಈ ಸಂಸ್ಥೆಯ ಪ್ರಾಮಾಣಿಕತೆಯೇ ಅವರನ್ನು ದೇಶ ವಿದೇಶದಲ್ಲಿ ಜನರು ಗುರುತಿಸಲು ಸಹಕಾರಿಯಾಗಿದೆ ಎಂದು ಶುಭಹಾರೈಸಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಅವರು ಮಾತನಾಡಿ, ಫಾರ್ಚೂನ್ ಸಂಸ್ಥೆಯ ನೂತನ ಸಮುಚ್ಚಯ ನೀತಿ ಹೈಟ್ಸ್ ಮೂಡುಬಿದಿರೆಯ ಸೌದರ್ಯಕ್ಕೆ ಮತ್ತೊಂದು ಗರಿ. ಈ ಸಂಸ್ಥೆಯು ಅವಿಭಜಿತ ದ.ಕ., ಉಡುಪಿ ಜಿಲ್ಲೆಯಲ್ಲಿ ಅಗ್ರಗಣ್ಯ ಸ್ಥಾನಕ್ಕೇರಲಿ ಎಂದು ಶುಭ ಹಾರೈಸಿದರು.


ಇದೇ ಸಂದರ್ಭ ಫಾರ್ಚೂನ್ ನೀತಿ ಹೈಟ್ಸ್ ವಾಣಿಜ್ಯ ಮತ್ತು ವಸತಿ ಸಮುಚ್ಚಯ ನಿರ್ಮಾಣದಲ್ಲಿ ಸಹಕರಿಸಿದ ಇಂಜಿನಿಯರ್, ಗುತ್ತಿಗೆದಾರರನ್ನು ಸನ್ಮಾನಿಸಿ, ಗೌರವಿಸಲಾಯಿತು.

ಮೂಡುಬಿದಿರೆ ಚರ್ಚ್ ನ ಧರ್ಮಗುರು ರೆ.ಫಾ. ಜನಿಲ್ ಡಿಸೋಜಾ, ಮೂಡುಬಿದಿರೆ ಪುರಸಭೆಯ ಅಧ್ಯಕ್ಷೆ ಜಯಶ್ರೀ ಕೇಶವ, ಮುಖ್ಯಾಧಿಕಾರಿ ಇಂದು ಎಂ., ಎಂಸಿಎಸ್ ಬ್ಯಾಂಕ್ ಅಧ್ಯಕ್ಷ ಬಾಹುಬಲಿ ಪ್ರಸಾದ್ ಎಂ., ಮೂಡ ಅಧ್ಯಕ್ಷ ಹರ್ಷವರ್ದನ್ ಪಡಿವಾಳ್, ಪುರಸಭೆ ಸದಸ್ಯ ರಾಜೇಶ್ ನಾಯ್ಕ್, ಕುಲದೀಪ್ ಎಂ.ಚೌಟ, ಉದ್ಯಮಿ ಶ್ರೀಪತಿ ಭಟ್, ಜಗದೀಶ ಶೇಣವ, ಮುಡುಬಿದಿರೆ ಪೊಲೀಸ್ ನಿರೀಕ್ಷ ಸಂದೀಪ್ , ದಾಮೋದರ ಶೆಣೈ, ಫಾರ್ಚೂನ್ ಪ್ರೊಮೋಟರ್ಸ್ ನ ಪಾಲುದಾರರಾದ ಅಬುಲ್ ಅಲಾ ಪುತ್ತಿಗೆ, ಮಹೇಂದ್ರ ವರ್ಮ, ರೋನಿ, ಟೆನ್ನಿಸ್ ಪಿರೇರಾ ಮೊದಲಾದವರು ಉಪಸ್ಥಿತರಿದ್ದರು.

















Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News