ಮುಡಿಪು: ನವಸಾಕ್ಷರರ ಸಂಘಟನೆಯ 33ನೇ ವರ್ಷದಜಿಲ್ಲಾ ಮಟ್ಟದ ಅಕ್ಷರೋತ್ಸವ
ಮಂಗಳೂರು,ಡಿ.19;ತಮ್ಮ ಸಂಘಟನೆ ಅಕ್ಷರ ಅರಿವು- ಅಭಿವೃದ್ಧಿ, ಕಲಿಕೆ-ದುಡಿಮೆ-ಬದುಕು ಒಂದಾಗಿಸಿದೆ. ಸ್ವಯಂ ಪರಿವರ್ತನೆಯಿಂದ ಸಮಾಜದ ಪರಿವರ್ತನೆಗೆ ಪ್ರೇರೇಪಿಸಿದೆ ಎಂದು ನವ ಸಾಕ್ಷರರು ಗುರುವಾರ ಮುಡಿಪು ಜೀವನ ಶಿಕ್ಷಣ ಕೇಂದ್ರದಲ್ಲಿ ನವಸಾಕ್ಷರರ ಸಂಘಟನೆಯ 33ನೇ ವರ್ಷದಜಿಲ್ಲಾ ಮಟ್ಟದ ಅಕ್ಷರೋತ್ಸವ- ಸ್ವಚ್ಛತಾ ಉತ್ಸವದ ಅನುಭವ ಕಥನದಲ್ಲಿ ತಿಳಿಸಿದ್ದಾರೆ.
ದ.ಕ ಜಿಲ್ಲಾ ಮಟ್ಟದ ಅಕ್ಷರೋತ್ಸವ- ಸ್ವಚ್ಛತಾ ಉತ್ಸವವನ್ನು ಬೀರಿಗ ಅಂಗನ ವಾಡಿಯ ಪುಟಾಣಿಗಳು ದೀಪ ಬೆಳಗಿಸಿ ಉತ್ಸವಕ್ಕೆ ಚಾಲನೆ ನೀಡಿದರು ಮತ್ತು ಮೂವರು ಪುಟಾಣಿಗಳು ಸಾಕ್ಷರತೆಯ ಸಂದೇಶ ನೀಡುವ ಮೂಲಕ ದಕ್ಷಿಣ ಕನ್ನಡ ಜಿಲ್ಲಾ ನವ ಸಾಕ್ಷರರ 33ನೆ ಅಕ್ಷರ ಉತ್ಸವ ವಿಶೇಷ ರೀತಿಯಲ್ಲಿ ಉದ್ಘಾಟನೆ ಗೊಂಡಿತು.
ನವಸಾಕ್ಷರರು ಮಾತನಾಡುತ್ತಾ, ಸಾಕ್ಷರತೆ, ತಮ್ಮ ಬದುಕು, ದುಡಿಮೆ ಒಂದಾಗಿಸಿದ ಸಂಘಟನೆಯ ಬಗ್ಗೆ ವಿವರಿಸಿದರು. ಸಾಕ್ಷರತೆಯಿಂದ ನನ್ನ ಬದುಕು ಬದಲಾಗಿದೆ,ಗಂಡನ ಕುಡಿತ ಬಿಡಿಸಿದೆ,ಬಳಿಕ ಹಲವಾರು ಜನ ಕುಡಿತದ ದಾಸ್ಯಕ್ಕೆ ಒಳಗಾದವರನ್ನು ಬಿಡಿಸಿ ಹೊಸ ಬದುಕು ಕಟ್ಟಿಕೊಂಡ ಬಗ್ಗೆ ಯಶೋಧ ಲಾಯಿಲ ಅಭಿಪ್ರಾಯ ಹಂಚಿಕೊಂಡರು.
ಆದಿವಾಸಿ ರಾಮ ಕೊರಗ ಮಾತನಾಡುತ್ತಾ, ನಾನು ಕುಡಿತ ಬಿಟ್ಟು ನನ್ನ ಆತ್ಮ ಬದಲಾಗಿದೆ. ನಾನು ಹೊಸ ಬದುಕನ್ನು ಕಂಡು ಕೊಂಡಿ ದ್ದೇನೆ ಎಂದರು. ವೇದಿಕೆಯಲ್ಲಿ ಗಿರಿ ಸಿರಿ ಗಿರಿಹನ ತಂಡದ ವರಿಂದ ಡೋಲು ವಾದನದೊಂದಿಗೆ ಕುಣಿತ ಉತ್ಸವಕ್ಕೆ ಮೆರುಗು ನೀಡಿತು.ಉಚಿತ ಆಯುರ್ವೇದ ಆರೋಗ್ಯ ಶಿಬಿರವನ್ನು ಡಾ.ಸಂತೋಷ್ ಉದ್ಘಾಟಿಸಿದರು.ಮಾನವ ಗ್ರಂಥಾಲಯದ ಪುಸ್ತಕ ಗ್ರಂಥಾಲಯವನ್ನು ವಾಣಿಜ್ಯ ಲೆಕ್ಕ ಪರಿಶೋಧಕರಾದ ಪುಂಡರೀ ಕಾಕ್ಷ ಉದ್ಘಾಟಿಸಿದರು.
ಸಮಾರಂಭದಲ್ಲಿ ಅತಿಥಿ ಗಣ್ಯರಿಂದ ಸಾಕ್ಷರತಾ ಸಂದೇಶ, ಸಾಧಕರ ಮಾತುಗಳು, ಸುಸ್ಥಿರ ಸಾಕ್ಷರತೆ ಸುಸ್ಥಿರ ಸ್ವಚ್ಛತೆ, ಸೌರಶಕ್ತಿ-ಸ್ವ ಉದ್ಯೋಗ, ಸುಸ್ಥಿರ ಜೀವನೋ ಪಾಯ-ಸುಸ್ಥಿರ ಅಭಿವೃದ್ಧಿ ಕುರಿತು ಸಂವಾದ ಸಂಕಲ್ಪ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಸ್ವರಾಜ್ ಸಂತೆ-ಹಳ್ಳಿಮನೆ ಉತ್ಪನ್ನಗಳ ಪ್ರದರ್ಶನ ಮಾರಾಟ ವ್ಯವಸ್ಥೆ ಯನ್ನು ಬಾಳೆಪುಣಿ ಜನಜೀವನ ಸಮಿತಿಯ ಅಧ್ಯಕ್ಷ ರಮೇಶ್ ಶೇಣವ ಉದ್ಘಾಟಿಸಿದರು.ಶಾರದಾ ಆಯುರ್ವೇದ ವೈದ್ಯಕೀಯ ಕಾಲೇಜು ಆಸ್ಪತ್ರೆಯಉಚಿತ ಆಯುರ್ವೇದ ಆರೋಗ್ಯ ಶಿಬಿರವನ್ನು ಡಾ.ಸಂತೋಷ್ ಮತ್ತು ರಾಧಾಕೃಷ್ಣ ರೈ ಉಮಿಯಾ ಉದ್ಘಾಟಿ ಸಿದರು.ಮಾನವ ಗ್ರಂಥಾಲಯದ ಪುಸ್ತಕ ಗ್ರಂಥಾಲಯವನ್ನು ವಾಣಿಜ್ಯ ತೆರಿಗೆ ಸಲಹೆಗಾರ ಪುಂಡರೀಕಾಕ್ಷ ಉದ್ಘಾಟಿಸಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ವಯಸ್ಕರ ಶಿಕ್ಷಣಾಧಿಕಾರಿ ಫಾತಿಮಾ,ಇರಾ ಗ್ರಾಮ ಪಂಚಾಯತ್ ಅಧ್ಯಕ್ಷ ಉಮ್ಮರ್ , ಸಾಮಾಜಿಕ ಕಾರ್ಯ ಕರ್ತ ರಾದ ಇಬ್ರಾಹಿಂ ನಡುಪದವು, ಅಬೂಬಕ್ಕರ್, ಸೆಮಿಮಾ,ಇಸ್ಮಾಯಿಲ್ ಕಣಂತೂರು,ರಾಮ ಕೊರಗ,ದ.ಕ ಜಿಲ್ಲಾ ಉಸ್ತುವಾರಿ ಸಚಿವರ ಅಪ್ತ ಸಹಾಯಕ ರಾದ ಚಂದ್ರಶೇಖರ ಪಾತೂರು ಮಂಗಳೂರು ವಿಶ್ವ ವಿದ್ಯಾನಿಲ ಯದ ಉಪನ್ಯಾಸಕಿ ಡಾ.ಯಶಸ್ವಿನಿ,ಹೂ ಹಾಕುವ ಕಲ್ಲು ಶಾಲೆಯ ಮುಖ್ಯೋಪಾ ಧ್ಯಾಯಿನಿ ವಿಜಯ ಲಕ್ಷ್ಮೀ , ಹಿರಿಯ ಪತ್ರಕರ್ತ ರಾದ ಪುಷ್ಪ ರಾಜ್ ಬಿ.ಎನ್,ಅನ್ಸಾರ್ ಇನೋಳಿ,ಸೆಲ್ಕೊ ಫೌಂಡೇಶನ್ ನ ಅಧಿಕಾರಿ ವಿನೋದ್ ಮೊದಲಾದವರು ಉಪಸ್ಥಿತರಿದ್ದರು.
ಜನ ಶಿಕ್ಷಣ ಟ್ರಸ್ಟ್ ನ ನಿರ್ದೇಶಕರಾದ ಶೀನ ಶೆಟ್ಟಿ, ಕೃಷ್ಣ ಮೂಲ್ಯ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಜನ ಶಿಕ್ಷಣ ಟ್ರಸ್ಟ್, ಶಾರದಾ ಆಯುರ್ವೇದ ವೈದ್ಯಕೀಯ ಕಾಲೇಜು ಆಸ್ಪತ್ರೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಗ್ರಾಮ ವಿಕಾಸ ಕೇಂದ್ರಗಳು, ಗ್ರಾಮ ಪಂಚಾಯತ್ ಗಳು, ಸ್ಮೈಲ್ ಟ್ರಸ್ಟ್, ನವ ಸಾಕ್ಷರರ ಸಂಘ, ಜನ ಜೀವನ ಬಾಳೆಪುಣಿ, ಚಿತ್ತಾರ ಬಳಗ, ಮಂಗಳ ಗಂಗೋತ್ರಿ ಲಯನ್ಸ್ ಕ್ಲಬ್, ಸಾಂತ್ವನ ಬಳಗ, ಸೆಲ್ಕೊ ಫೌಂಡೇಶನ್, ರಾಷ್ಟ್ರೀಯ ಸೇವಾ ಯೋಜನೆ ಸಪ್ರದ ಕಾಲೇಜು ಮುಡಿಪು ಸಮಾಜ ಕಾರ್ಯ ಕಾಲೇಜು,ಆದಿವಾಸಿ ಅಭಿವೃದ್ಧಿ ಸಂಘ, ಸುಗ್ರಾಮ ಜಾಗೃತಿ ವೇದಿಕೆ, ಪ್ರಜ್ಞಾವಿ.ಟಿ.ಸಿ, ಸಂಜೀವಿನಿ ಒಕ್ಕೂಟಗಳ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.