ಮಂಗಳೂರು| ಬಂಧನಕ್ಕೊಳಗಾದ ಎಂಸಿಸಿ ಬ್ಯಾಂಕ್ ಅಧ್ಯಕ್ಷ ಆಸ್ಪತ್ರೆಗೆ ದಾಖಲು

Update: 2024-12-19 18:52 GMT

ಸಾಂದರ್ಭಿಕ ಚಿತ್ರ

ಮಂಗಳೂರು,ಡಿ.19: ಎಂಸಿಸಿ ಬ್ಯಾಂಕ್‌ನಿಅದ ಸಾಲ ಪಡೆದ ಮನೋಹರ ಪಿರೇರಾ ಆತ್ಮಹತ್ಯೆ ಪ್ರಕರಣದಲ್ಲಿ ಬಂಧಿತ ನಾಗಿದ್ದ ಬ್ಯಾಂಕ್‌ನ ಅಧ್ಯಕ್ಷ ಅನಿಲ್ ಲೋಬೊರ ಆರೋಗ್ಯದಲ್ಲಿ ಏರುಪೇರಾದ ಕಾರಣ ಆಸ್ಪತ್ರೆಗೆ ದಾಖಲಿಸಲು ನ್ಯಾಯಾಲಯ ಶಿಫಾರಸು ಮಾಡಿದೆ.

ಮನೋಹರ ಪಿರೇರಾ 10 ವರ್ಷದ ಹಿಂದೆ ಎಂಸಿಸಿ ಬ್ಯಾಂಕ್‌ನಿಅದ ಸಾಲ ಪಡೆದು ಮನೆ ಖರೀದಿಸಿ ವಾಸಿಸುತ್ತಿದ್ದರು. ಸಾಲ ಮರು ಪಾವತಿಸದ ಕಾರಣ ಎರಡು ವರ್ಷಗಳ ಹಿಂದೆ ಈ ಮನೆಯನ್ನು ಬ್ಯಾಂಕ್ ಜಪ್ತಿ ಮಾಡಿತ್ತು. ಇದರಿಂದ ಮನೋಹರ ಪಿರೇರಾ ತೀವ್ರ ಮಾನಸಿಕ ಸಮಸ್ಯೆ ಅನುಭವಿಸಿದ್ದರು. ಅಲ್ಲದೆ ಇದರಿಂದ ಮನನೊಂದು ಮನೋಹರ ಪಿರೇರ ಎಂಸಿಸಿ ಬ್ಯಾಂಕ್ ಅಧ್ಯಕ್ಷನ ಮೇಲೆ ಆರೋಪ ಹೊರಿಸಿ ಆಡಿಯೋವೊಂದನ್ನು ಹರಿಯಬಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು5.

ಬುಧವಾರ ಅನಿಲ್ ಲೋಬೊನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ. ಆದರೆ ಅನಿಲ್ ಲೋಬೊರ ಆರೋಗ್ಯದಲ್ಲಿ ಏರುಪೇರಾದ ಕಾರಣ ಆಸ್ಪತ್ರೆಗೆ ದಾಖಲಿಸಲು ನ್ಯಾಯಾಲಯ ನಿರ್ದೇಶನ ನೀಡಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News