ತುಳುಕೂಟ ಖತರ್: ವಾರ್ಷಿಕ ಸಾಮಾನ್ಯ ಸಭೆ, ನೂತನ ಆಡಳಿತ ಮಂಡಳಿ ರಚನೆ

Update: 2024-07-01 13:10 GMT

ಖತರ್‌: ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ಭಾರತೀಯ ದೂತಾವಾಸದ ಅಡಿಯಲ್ಲಿರುವ ಭಾರತೀಯ ಸಾಂಸ್ಕೃತಿಕ ಕೇಂದ್ರದ ಸಕ್ರಿಯ ಸಂಸ್ಥೆಗಳಲ್ಲಿ ಒಂದಾದ ತುಳುಕೂಟ ಖತರ್‌ನ ವಾರ್ಷಿಕ ಸಾಮಾನ್ಯ ಸಭೆ ಮತ್ತು 2024-25ನೇ ಸಾಲಿನ ನೂತನ ಆಡಳಿತ ಮಂಡಳಿಯ ಆಯ್ಕೆ ಪ್ರಕ್ರಿಯೆಯು ಇತ್ತೀಚೆಗೆ ಐಸಿಸಿ ಸಭಾಂಗಣದಲ್ಲಿ ನಡೆಯಿತು.

ಅಧ್ಯಕ್ಷ ಕಿರಣ್ ಆನಂದ್ ಎಲ್ಲರನ್ನೂ ಸ್ವಾಗತಿಸಿದರು ಮತ್ತು ಕಳೆದ ಸಾಲಿನಲ್ಲಿ ಕಾರ್ಯನಿರ್ವಹಿಸಿದ ಆಡಳಿತ ಮಂಡಳಿಯ ಸದಸ್ಯರುಗಳಾದ ಉಪಾಧ್ಯಕ್ಷೆ ಚೈತಾಲಿ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸಾಗರ್ ಕೋಟ್ಯಾನ್, ಖಜಾಂಜಿ ಉದಯ್ ಕುಮಾರ್ ಶೆಟ್ಟಿ ಶಿರ್ವ, ಸಾಂಸ್ಕೃತಿಕ ಕಾರ್ಯದರ್ಶಿ ಸಂಧ್ಯಾಲಕ್ಷ್ಮಿ ರೈ, ಸದಸ್ಯತ್ವ ಮತ್ತು ಸಾರ್ವಜನಿಕ ಸಂಪರ್ಕ ಸಂಚಾಲಕಿ ಧನಲಕ್ಷ್ಮೀ ರೈ, ಜೊತೆ ಕಾರ್ಯದರ್ಶಿ ಸುಧೀರ್ ಶೆಟ್ಟಿ, ಸಾಂಸ್ಕೃತಿಕ ಜೊತೆ ಕಾರ್ಯದರ್ಶಿ ಸುಪ್ರಿಯಾ ಭಟ್, ವ್ಯವಸ್ಥಾಪಕ ಸಂಚಾಲಕ ಮಂಜಪ್ಪ ಕರಿಗಾರ್, ಕ್ರೀಡಾ ಕಾರ್ಯದರ್ಶಿ ಅಶ್ವಿನ್ ಕೆ, ಕ್ರೀಡಾ ಜೊತೆ ಕಾರ್ಯದರ್ಶಿ ಇಮ್ರಾನ್ ಕೆ ಅವರುಗಳನ್ನು ನೆನಪಿನ ಕಾಣಿಕೆಯಿತ್ತು ಗೌರವಿಸಿದರು.

ಪ್ರಧಾನ ಕಾರ್ಯದರ್ಶಿ ಸಾಗರ್ ಕೋಟ್ಯಾನ್ ಕಳೆದ ಸಾಲಿನ ಕಾರ್ಯ ಚಟುವಟಿಕೆಗಳ ವಿವರವನ್ನು ನೀಡಿದರು. ಖಜಾಂಜಿ ಉದಯ ಕುಮಾರ್ ಶೆಟ್ಟಿ ಶಿರ್ವ ಲೆಕ್ಕಪತ್ರ ಮಂಡಿಸಿದರು.

ಪೋಷಕ, ಮಾಜಿ ಅಧ್ಯಕ್ಷರಾದ ಮೂಡಂಬೈಲ್ ರವಿ ಶೆಟ್ಟಿಯವರು ಪಸಕ್ತ ಸಮಿತಿಯನ್ನು ವಿಸರ್ಜಿಸಿ ನೂತನ ಸಮಿತಿಯ ಆಯ್ಕೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.

ಅನೇಕ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿರುವ ಅನುಭವಿ, ಯುವ ನಾಯಕ ಸಂದೇಶ್ ಆನಂದ್ ಅವರನ್ನು ಅಧ್ಯಕ್ಷರನ್ನಾಗಿ ಎಲ್ಲ ಸದಸ್ಯರ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

 ವಿಜಯ್‌ ರೈ ಕುಂಬ್ರ (ಉಪಾಧ್ಯಕ್ಷ)

ಅನಿಲ್ ಬೋಳೂ‌ರ್ (ಉಪಾಧ್ಯಕ್ಷ)

ಪ್ರವೀಣಾ ಪ್ರಕಾಶ್ ಶೆಟ್ಟಿ (ಪ್ರಧಾನ ಕಾರ್ಯದರ್ಶಿ ಹಾಗೂ ಸಾರ್ವಜನಿಕ ಸಂಪರ್ಕ)

ಜೀವನ್ ಪ್ರಕಾಶ್ (ಖಜಾಂಜಿ ಮತ್ತು ವಿಶೇಷ ಅಗತ್ಯಗಳ ಸೇವೆ)

ಸೌರಭ್ ಶೆಟ್ಟಿ (ಜತೆ ಕಾರ್ಯದರ್ಶಿ)

ವಿಜಯಾ ಶೆಟ್ಟಿ (ಕ್ರೀಡಾ ಕಾರ್ಯದರ್ಶಿ)

ಪ್ರಶಾಂತ್ ಗೌಡ (ಕ್ರೀಡಾ ಜೊತೆ ಕಾರ್ಯದರ್ಶಿ)

ದಿವ್ಯಶ್ರೀ (ಸಾಂಸ್ಕೃತಿಕ ಕಾರ್ಯದರ್ಶಿ)

ನಿಯಾಝ್ (ಸದಸ್ಯತ್ವ ಸಂಚಾಲಕರು)

ಮೋಹನ್ ರಾವ್ (ವ್ಯವಸ್ಥಾಪಕ ಸಂಚಾಲಕರು)

ಜೆರಾಲ್ಡ್ ಡಿಸೋಜಾ (ಮಾಧ್ಯಮ ಹಾಗೂ ಪರಿಸರ ಸಂಚಾಲಕರು) ಅವರನ್ನು ಇದೇ ಸಂದರ್ಭದಲ್ಲಿ ಆಯ್ಕೆ ಮಾಡಲಾಯಿತು.

ನಿಯೋಜಿತ ಅಧ್ಯಕ್ಷ ಸಂದೇಶ್ ಆನಂದ್ ಮಾತನಾಡಿ, ತುಳುಕೂಟದ ಬೆಳ್ಳಿ ಹಬ್ಬದ ಸಂಭ್ರಮದ ಸಂದರ್ಭದಲ್ಲಿ ಅಧ್ಯಕ್ಷನಾಗಿ ಸೇವೆ ಮಾಡುವ ಅವಕಾಶ ಸಿಕ್ಕಿರುವುದು ನನಗೆ ಮತ್ತು ನನ್ನ ಸಮಿತಿಗೆ ತುಂಬಾ ಹೆಮ್ಮೆಯ ಸಂಗತಿ, ಇದಕ್ಕೆ ಕಾರಣಕರ್ತರಾದ ಎಲ್ಲಾ ಸದಸ್ಯರಿಗೆ ಕೃತಜ್ಞತೆ ಸಲ್ಲಿಸುತ್ತಾ, ಮುಂದಿನ ದಿನಗಳಲ್ಲಿ ಎಲ್ಲ ಹಿರಿ ಕಿರಿಯರ ಜೊತೆಗೆ ತುಳುಕೂಟದ ಧ್ಯೇಯ ಉದ್ದೇಶಗಳನ್ನು ಗಮನದಲ್ಲಿಟ್ಟುಕೊಂಡು ಕೂಟದ ಕೀರ್ತಿಯನ್ನು ಇನ್ನಷ್ಟು ಎತ್ತರಕ್ಕೆ ಒಯ್ಯುವಲ್ಲಿ ನಮ್ಮ ಆಡಳಿತ ಸಮಿತಿಯು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳುವ ಭರವಸೆಯನ್ನು ನೀಡಿದರು.

ಇದೇ ಸಂದರ್ಭದಲ್ಲಿ ಬೆಳ್ಳಿಹಬ್ಬದ ನೂತನ ಲಾಂಛನ ಹಾಗೂ ತುಳುಕೂಟದ ಧ್ಯೇಯ ಗೀತೆಯನ್ನು ಎಲ್ಲಾ ಸದಸ್ಯರ ಸಮ್ಮುಖದಲ್ಲಿ ಅನಾವರಣಗೊಳಿಸಲಾಯಿತು.

ನಿಕಟಪೂರ್ವ ಅಧ್ಯಕ್ಷ ಹಾಗೂ ಸಲಹಾ ಸಮಿತಿಯ ಚೇರ್ಮನ್ ಕಿರಣ್ ಆನಂದ್, ಸಂಘದ ಸಲಹಾ ಸಮಿತಿಯ ಸದಸ್ಯರುಗಳಾದ ಮೂಡಂಬೈಲ್ ರವಿ ಶೆಟ್ಟಿ, ಚೈತಾಲಿ ಉದಯ್ ಶೆಟ್ಟಿ, ಅಸ್ಮತ್ ಆಲಿ, ರಾಮಚಂದ್ರ ಶೆಟ್ಟಿ, ಐಸಿಸಿ ಉಪಾಧ್ಯಕ್ಷ ಸುಬ್ರಹ್ಮಣ್ಯ ಹೆಬ್ಬಾಗಿಲು, ಐಸಿಬಿಎಫ್ ಉಪಾಧ್ಯಕ್ಷ ದೀಪಕ್ ಶೆಟ್ಟಿ, ಐಸಿಸಿ ಮಾಜಿ ಅಧ್ಯಕ್ಷೆ ಮಿಲನ್ ಅರುಣ್ ಸೇರಿದಂತೆ ತುಳುಕೂಟದ ಸ್ಥಾಪಕ ಸದಸ್ಯರುಗಳು ಹಾಗೂ ನೂರಾರು ಮಂದಿ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಹಿಂದಿನ ಸಮಿತಿಗೆ ಅಭಿನಂದಿಸಿ, ಹೊಸ ಸಮಿತಿಗೆ ಶುಭ ಹಾರೈಸಿದರು.

 

 

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News