ನ್ಯಾಶನಲ್ ಟ್ಯಾಲೆಂಟ್ ಸರ್ಚ್ ಪರೀಕ್ಷೆ ಬರೆದ ಕರಾವಳಿ ಕರ್ನಾಟಕದ ವಿದ್ಯಾರ್ಥಿಗಳು
ಮಂಗಳೂರು: ಅಸೊಸಿಯೇಷನ್ ಆಫ್ ಮುಸ್ಲಿಮ್ ಪ್ರೊಫೆಶನಲ್ಸ್ (ಎ.ಎಮ್.ಪಿ) ಸಂಘಟನೆ ನ್ಯಾಶನಲ್ ಟ್ಯಾಲೆಂಟ್ ಸರ್ಚ್ ಪರೀಕ್ಷೆಯನ್ನು 4 ವರ್ಷಗಳಿಂದ ರಾಷ್ಟ್ರೀಯ ಮಟ್ಟದಲ್ಲಿ ನಡೆಸುತ್ತಾ ಬಂದಿದೆ. ಮಾಹಿತಿ ಕೊರತೆಯಿಂದ ಕರಾವಳಿ ಕರ್ನಾಟಕದ ವಿದ್ಯಾರ್ಥಿಗಳು ಇದರ ಪ್ರಯೊಜನ ಪಡೆಯುತ್ತಿರಲಿಲ್ಲ.
ಈ ವರ್ಷ ʼನಮ್ಮ ನಾಡ ಒಕ್ಕೂಟʼ ಸಂಸ್ಥೆ ವಿದ್ಯಾರ್ಥಿ ಹಾಗೂ ಪೋಷಕರಲ್ಲಿ ಅರಿವು ಮೂಡಿಸುವ ಪರಿಶ್ರಮದಿಂದ ಸುಮಾರು ಒಂದು ಸಾವಿರ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಸಾಧ್ಯವಾಯಿತು.
ಕರಾವಳಿ ಕರ್ನಾಟಕದ ಬ್ಯಾರೀಸ್ ವಿದ್ಯಾಸಂಸ್ಥೆ ಕೋಡಿ ಕುಂದಾಪುರ, ತೌಹೀದ್ ವಿದ್ಯಾಸಂಸ್ಥೆ ಗಂಗೊಳ್ಳಿ, ಝಿಯಾ ಪಬ್ಲಿಕ್ ಸ್ಕೂಲ್ ಕಂಡ್ಲೂರ್, ಅಂಜುಮನ್ ಪದವಿ ಕಾಲೇಜು ಭಟ್ಕಳ, ಮನ್ಶರ್ ಪಿಯು ಕಾಲೇಜು ಬೆಳ್ತಂಗಡಿ, ಬರಾಕ ಸ್ಕೂಲ್ ಮಂಗಳೂರು ಇಲ್ಲಿನ ವಿದ್ಯಾರ್ಥಿಗಳು ನ್ಯಾಶನಲ್ ಟ್ಯಾಲೆಂಟ್ ಸರ್ಚ್ ಪರೀಕ್ಷೆ ಬರೆದರು.
ಮುಂದಿನ ವರ್ಷ ಹೆಚ್ಚಿನ ವಿದ್ಯಾರ್ಥಿಗಳು ಈ ನ್ಯಾಶನಲ್ ಟ್ಯಾಲೆಂಟ್ ಸರ್ಚ್ ಪರೀಕ್ಷೆಯ ಸದುಪಯೋಗವನ್ನು ಪಡೆಯಲು ಶೈಕ್ಷಣಿಕ ಸಂಸ್ಥೆಗಳು ತಮ್ಮ ಸಂಸ್ಥೆಗಳಲ್ಲಿ ಪರೀಕ್ಷೆ ಬರೆಯಲು ಅನುಕೂಲ ಮಾಡಬೇಕೆಂದು ನಮ್ಮ ನಾಡ ಒಕ್ಕೂಟದ ಅಧ್ಯಕ್ಷರಾದ ಮೊಹಮ್ಮದ್ ಸಲೀಮ್ ಮೂಡುಬಿದಿರೆ ಅವರು ಆಗ್ರಹಿಸಿದ್ದಾರೆ.
ಈ ಪರೀಕ್ಷೆಯ ಅರಿವು ಮೂಡಿಸಲು ಶಿಕ್ಷಣತಜ್ಞ ರಫೀಕ್ ಮಾಸ್ಟರ್, ಎನ್.ಎನ್.ಒ ಬೈಂದೂರು ಘಟಕದ ಅಧ್ಯಕ್ಷ ಅಬ್ದುಲ್ ಸಮಿ ಹಳಗೇರಿ, ಎನ್.ಎನ್.ಒ ವಿಜನರ್ಸ್ ಪದಾಧಿಕಾರಿ ಡಾ.ಮೊಹಮ್ಮದ್ ತಾಹಾ ಮತ್ತು ನಿಹಾಲ್ ಯೂಟ್ಯೂಬ್ ವೀಡಿಯೊ ರಚಿಸುವ ಮೂಲಕ ಸಹಕಾರಿಯಾದರು. ಶಿಕ್ಷಣ ಪ್ರೇಮಿ ಸಾಕಿಬ್ ಮಂಗಳೂರು ಈ ಯೋಜನೆಯ ರೂವಾರಿಯಾಗಿ ಪರಿಶ್ರಮಿಸಿದರು. ಎನ್.ಎನ್.ಒ ಕಮ್ಯುನಿಟಿ ಸೆಂಟರ್ ಮೂಲಕ ಹಲವಾರು ಮಸೀದಿಗಳಿಗೆ ಅಂಚೆ ಮೂಲಕ ಲೆಟರ್ ಕಳುಹಿಸಿ ಅರಿವು ಮೂಡಿಸಲಾಯಿತು.