ಸುಳ್ಯ: ರಸ್ತೆ ಅಪಘಾತದಲ್ಲಿ ಗ್ರಾಪಂ ಸದಸ್ಯ ಮೃತ್ಯು

Update: 2024-07-22 05:52 GMT

ಸುಳ್ಯಮ ಜು.22: ದ್ವಿಚಕ್ರ ವಾಹನ ಮತ್ತು ಬಸ್ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಮೃತಪ್ಟ ಘಟನೆ ಇಂದು ಬೆಳಗ್ಗೆ ಸೋಣಂಗೇರಿಯ ಸುತ್ತುಕೋಟೆ ಬಳಿ ನಡೆದಿದೆ.

ನೆಲ್ಲೂರು ಕೆಮ್ರಾಜೆ ಗ್ರಾಮ ಪಂಚಾಯತ್ ಸದಸ್ಯ ಹಾಗೂ ಪಿಗ್ಮಿ ಸಂಗ್ರಾಹಕರಾಗಿದ್ದ ರಾಮಚಂದ್ರ ಪ್ರಭು(65) ಮೃತಪಟ್ಟವರು.

ರಾಮಚಂದ್ರ ಪ್ರಭು ತನ್ನ ದ್ವಿಚಕ್ರ ವಾಹನದಲ್ಲಿ ಸುಳ್ಯಕ್ಕೆ ಬರುತ್ತಿದ್ದ ವೇಳೆ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಮಧ್ಯೆ ಸುತ್ತುಕೋಟೆ ಬಳಿ ಅಪಘಾತ ಸಂಭವಿಸಿದೆ. ಗಂಭೀರ ಗಾಯಗೊಂಡಿದ್ದ ರಾಮಚಂದ್ರರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗ ಮಧ್ಯೆ ಅವರು ಮೃತಪಟ್ಟರೆಂದು ತಿಳಿದು ಬಂದಿದೆ.

ಮೃತರು ಪತ್ನಿ, ಓರ್ವ ಪುತ್ರನನ್ನು ಅಗಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News