ವಕ್ಫ್ ಕೇವಲ ಸೊತ್ತಲ್ಲ, ಅದು ಮುಸ್ಲಿಮರ ಭಾವನೆಯಾಗಿದೆ: ಅಡ್ವಕೇಟ್ ಇಸ್ಮಾಈಲ್

Update: 2024-10-20 13:43 GMT

ಮಂಗಳೂರು: ಕರ್ನಾಟಕ ಸಲಫಿ ಅಸೋಸಿಯೇಷನ್, ಮಂಗಳೂರು ಇದರ ವತಿಯಿಂದ ಮಂಗಳೂರಿನ ಹಿರಾ ಕನ್ವೆನ್ಷನ್ ಹಾಲ್ ನಲ್ಲಿ ಅ.20ರಂದು ಮಹಲ್ಲ್‌ ಸಂಗಮ ಜರಗಿತು.

ವಕ್ಫ್ ಕಾಯಿದೆಯ ನಿಯಮಗಳನ್ನು ವಿವರಿಸಿದ ಅಡ್ವಕೇಟ್ ಇಸ್ಮಾಈಲ್ ಅವರು ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ವಕ್ಫ್ ತಿದ್ದುಪಡಿ ಕಾಯಿದೆಯ ಅಪಾಯಗಳನ್ನು ವಿವರಿಸುತ್ತಾ ವಕ್ಫ್ ಮುಸ್ಲಿಮರ ಭಾವನೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಅಬೂಬಕ್ಕರ್ ನಝೀರ್ ಸಲಫಿ ಮಾತನಾಡಿ, ಮಸ್ಜಿದ್ ನಿರ್ವಹಣೆ ಮಾಡುವವರ ಲಕ್ಷಣಗಳನ್ನು ವಿವರಿಸಿದರು. ಮಹಲ್ಲ್‌ ವ್ಯವಸ್ಥೆಯ ಚರಿತ್ರೆ ಮತ್ತು ವರ್ತಮಾನವನ್ನು ಕೆಎಸ್ಎ ಅಧ್ಯಕ್ಷರಾದ ಡಾ. ಹಫೀಝ್ ಸ್ವಲಾಹಿ ವಿವರಿಸಿದರು.

ಮಹಲ್ಲ್‌ ಸಬಲೀಕರಣ ಹೇಗೆ ಮಾಡಬಹುದು ಎಂದು ಕೆಎಸ್ಎ ಸಲಹಾ ಸಮಿತಿ ಅಧ್ಯಕ್ಷರಾದ ಇಜಾಯ್ ಸ್ವಲಾಹಿ ಪ್ರಸ್ತುತ ಪಡಿಸಿದರು. ಮದ್ರಸ ಶಿಕ್ಷಣದ ಪ್ರಾಮುಖ್ಯತೆಯನ್ನು ಕೆ ಎಸ್ ಎ ಶಿಕ್ಷಣ ಮಂಡಳಿ ಅಧ್ಯಕ್ಷರಾದ ಹಸೈನಾರ್ ಸ್ವಲಾಹಿ ವಿವರಿಸಿದರು. ಖಲೀಲ್ ತಲಪಾಡಿ ಸ್ವಾಗತಿಸಿದರು. ಯಾಸಿರ್ ಅಲ್ ಹಿಕಮಿ ದನ್ಯವಾದ ಅರ್ಪಿಸಿದರು.

ಕೆ ಎಸ್ ಎ ಕೋಶಾಧಿಕಾರಿ ಸಯ್ಯದ್ ಶಾಝ್ ವೇದಿಕೆಯಲ್ಲಿದ್ದರು.



Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News