ದಾವಣಗೆರೆ | ಸಂಸದ ಜಿ.ಎಂ. ಸಿದ್ದೇಶ್ವರ ಪತ್ನಿ ಗಾಯತ್ರಿ ಅವರಿಗೆ ಟಿಕೆಟ್ ನೀಡಿರುವುದನ್ನು ವಿರೋಧಿಸಿ ಬಿಜೆಪಿ ಮುಖಂಡರ ಸಭೆ

Update: 2024-03-14 16:18 GMT

ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಹಾಲಿ ಸಂಸದ ಜಿ.ಎಂ. ಸಿದ್ದೇಶ್ವರ ಪತ್ನಿ ಗಾಯತ್ರಿ ಸಿದ್ದೇಶ್ವರ ಅವರಿಗೆ ನೀಡಿರುವುದನ್ನು ವಿರೋಧಿಸಿ ಬಿಜೆಪಿ ಮುಖಂಡರು ಸಭೆ ನಡೆಸಿದರು.

ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಅವರ ಶಿರಮಗೊಂಡನಹಳ್ಳಿ ನಿವಾಸದಲ್ಲಿ ಸೇರಿದ ನಾಯಕರು ದಾವಣಗೆರೆ ಲೋಕಸಭಾಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬದಲಾಗುವವರೆಗೂ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ವೇಳೆ ನೂರಾರು ಕಾರ್ಯಕರ್ತರು ಸಿದ್ದೇಶ್ವರ ಹಠಾವೋ ಘೋಷಣೆಗಳನ್ನು ಕೂಗಿದರು.

ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಹೊಸ ಮುಖಕ್ಕೆ ಅವಕಾಶ ನೀಡಿ ಎಂದು ವರಿಷ್ಠರಿಗೆ ಮನವಿ ಮಾಡಿದ್ದೇವು. ಆದರೆ, ಸಿದ್ದೇಶ್ವರ ಹೈಕಮಾಂಡ್ ಬಳಿ ಸುಳ್ಳು ಹೇಳಿ ಟಿಕೆಟ್ ತಂದಿದ್ದಾರೆ ಎಂದು ಕಿಡಿಕಾರಿದರು.

ಜಿಲ್ಲೆಯಲ್ಲಿ ಎಲ್ಲ ವಿಧಾನಸಭೆ ಕ್ಷೇತ್ರದಲ್ಲಿ ಗೆದ್ದರೆ ಗೆಲುವಿಗೆ ನಾನೇ ಕಾರಣ ಎಂದು ಹೇಳಿಕೊಳ್ಳುತ್ತಾರೆ. 2023ರಲ್ಲಿ ಎಲ್ಲ ಕ್ಷೇತ್ರದಲ್ಲೂ ಪಕ್ಷ ಸೋತಿದ್ದು, ಈ ಸೋಲಿನ ನೈತಿಕ ಹೊಣೆ ಹೊರಬೇಕು. ಗೂಂಡಾಗಳನ್ನು ಬಿಟ್ಟು ಹೆದರಿಸಿ ಗೂಂಡಾಗಿರಿ ಮಾಡುತ್ತಾರೆ ಎಂದರು.

ಸಂಸದ ಜಿಎಂ ಸಿದ್ದೇಶ್ವರ ಅಂದರೆ ಒಂದು ರೀತಿ ಸದ್ದಾಂ ಹುಸೇನ್. 20 ವರ್ಷ ಸಂಸದನಾಗಿ ಅವರದ್ದು ಸಾದನೆ ಏನು?.‌ ಎಷ್ಟೋ ಪ್ರಕರಣಗಳಲ್ಲಿ ಬಿ.ಫಾರ್ಮ್‌ ಕೊಟ್ಟ ಬಳಿಕ ಟಿಕೆಟ್ ರದ್ದಾಗಿವೆ. ಈಗಲೂ ನಮಗೆ ಭರವಸೆ ಇದೆ, ಗಾಯತ್ರಿ ಸಿದ್ದೇಶ್ವರ ಅವರಿಗೆ ನೀಡಿದ ಟಿಕೆಟ್ ವಾಪಸ್ ಪಡೆಯುತ್ತಾರೆ ಎಂಬ ವಿಶ್ವಾಸವಿದೆ ಹೇಳಿದರು.

ಕಾರ್ಯಕರ್ತರನ್ನ ಅತ್ಯಂತ ಕನಿಷ್ಟವಾಗಿ ಕಾಣುತ್ತಾರೆ.‌ದರ್ಪ ತೊರಿಸುತ್ತಾರೆ. ದಾವಣಗೆರೆಯಲ್ಲಿ ನಾನೊಬ್ಬನೇ ಗಂಡಸು ಎಂವ ವರ್ತನೆ ಇದೆ. ಇದೇ ಕಾರಣ ಅವರಿಗೆ ಅವರ ಕುಟುಂಬಕ್ಕೆ ಟಿಕೆಟ್ ಬೇಡ ಎಂಬುದು ನಮ್ಮವಾದ.

ಮಾಜಿ ಶಾಸಕ ಬಸವರಾಜ್ ನಾಯ್ಕ ಮಾತನಾಡಿ, ಮಾಯಕೊಂಡ ಕ್ಷೇತ್ರದಲ್ಲಿ ಬಿಜೆಪಿ ಸೋಲಿಗೆ ಅವರೇ ಕಾರಣ. ಜಿ.ಎಂ. ವಾಗೀಶ್ ಸ್ವಾಮಿ ಅವರಿಗೆ ಎಸ್ಸಿ ಸರ್ಟಿಫಿಕೇಟ್ ಕೊಡಿಸಿ ಚುನಾವಣೆಗೆ ನಿಲ್ಲಿಸಿದರು. ಇರುವ ಒಂದು ಎಸ್ಸಿ ಕ್ಷೇತ್ರವನ್ನು ಗೆಲ್ಲಿಸಿಕೊಳ್ಳಲು ಆಗಲಿಲ್ಲ ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News