ಬಿ.ವೈ. ವಿಜಯೇಂದ್ರ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೊಮ್ಮೆ ಚುನಾವಣೆ ಎದುರಿಸಲಿ ಎಂದ ಬಿಜೆಪಿ ಶಾಸಕ ಬಿ.ಪಿ. ಹರೀಶ್
ದಾವಣಗೆರೆ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜೇಯೇಂದ್ರ ಅವರು ತಮ್ಮ ಶಕ್ತಿ ಸಾಬೀತುಪಡಿಸಲು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೊಮ್ಮೆ ಚುನಾವಣೆ ಎದುರಿಸಿ ಗೆದ್ದು ಬರಲಿ ಎಂದು ಹರಿಹರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಬಿ.ಪಿ. ಹರೀಶ್ ಸವಾಲು ಹಾಕಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ರಾಜ್ಯದಲ್ಲಿ ಹೊಂದಾಣಿಕೆ ರಾಜಕಾರಣ ನಡೆಯುತ್ತಿದೆ. ಡಿ.ಕೆ. ಶಿವಕುಮಾರ್ ಹೇಳಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರಗೆ ಕಾಂಗ್ರೆಸ್ ನವರು ಭಿಕ್ಷೆ ನೀಡಿದ್ದರೆ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ವೈಯಕ್ತಿಕ ನೆಲೆಯಲ್ಲಿ ಗೆದ್ದು ಬರಲಿ ಎಂದರು.
ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿಕೆ ನೋಡಿದರೆ ಇದು ಹೊಂದಾಣಿ ರಾಜಕಾರಣಕ್ಕೆ ಸಾಕ್ಷಿ ಅಲ್ಲವೇ ಎಂದು ಪ್ರಶ್ನಿಸಿದರು.
ವಾಲ್ಮೀಕಿ ನಿಗಮ, ಮುಡಾ ಹಗರಣ ಮಾಡಿಲ್ಲ ಎನ್ನುವುದಕ್ಕಿಂತ ನೀವು ಸಹಭಾಗಿಯಾಗಿಲ್ಲವೇ ಎನ್ನುವ ಮಾತುಗಳೇ ಕೇಳಿ ಬರುತ್ತಿದೆ. ಎಲ್ಲಾ ರಾಜಕೀಯ ನಾಯಕರು ಜನರಿಗೆ ಮಾಡಿದ ದ್ರೋಹವಿದು ಎಂದರು.
ಎಲ್ಲಾ ರಾಜಕೀಯ ನಾಯಕರು ಒಳ ಒಪ್ಪಂದ ಮಾಡಿಕೊಂಡಿದ್ದಾರೆ. ಇವರ ತಪ್ಪು ಅವರು ಮುಚ್ಚುತ್ತಾರೆ ಅವರದ್ದನ್ನು ಇವರು ಮುಚ್ಚುತ್ತಾರೆ ಇಂದು ಖಂಡನೀಯ. ನಾಚಿಕೆಗೆಟ್ಟವರಂತೆ ಎಲ್ಲಾ ಪಕ್ಷದ ಮುಖಂಡರು ರಾಜಕೀಯ ಎಂದರೆ ಅಸಹ್ಯ ಪಡುವಂತೆ ವರ್ತಿಸುತ್ತಿದ್ದಾರೆ. ರಾಜ್ಯದಲ್ಲಿ ರಾಜಕಾರಣ ಅಸಹ್ಯದ ಪರಿಸ್ಥಿತಿಯಲ್ಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇನ್ನು ದಾವಣಗೆರೆಯಲ್ಲಿ ಕೃಷ್ಣ ಮೃಗ ವಿಚಾರದಲ್ಲಿ ಹೊಂದಾಣಿಕೆ ರಾಜಕಾರಣ ನಡೆದಿದೆ.ಅಸಹಾಯಕ ಪರಿಸ್ಥಿತಿಯಲ್ಲಿ ಜಿಲ್ಲಾ ಸಚಿವರು ಇದ್ದರು.ಆದರೆ ಅವರನ್ನು ಅಂದಿನ ಸಿಎಂ ಬೊಮ್ಮಾಯಿ ರಕ್ಷಣೆ ಮಾಡಿದರು. ಹೊಂದಾಣಿಕೆ ರಾಜಕೀಯ ಇರುವುದರಿಂದಲೇ ಒಬ್ಬರಿಗೊಬ್ಬರು ಕಚ್ಚಾಡುತ್ತಾ ಜನರಿಗೆ ತೋರಿಸುತ್ತಿದ್ದಾರೆಂದರು.
ಜಿಲ್ಲಾ ಉಸ್ತುವಾರಿ ಸಚಿವರು ಹರಿಹರ ತಾಲ್ಲೂಕಿನ ಗಡಿಭಾಗದ ಹಳ್ಳಗಳನ್ನು ಮುಚ್ಚಿದ್ದಾರೆ. ಗಡಿಲೈನ್ ಅಳಿಸಿದ್ದಾರೆ.ಈ ರೀತಿ ಅಕ್ರಮವೆಸಗಿದ್ದರು.ಈ ಬಗ್ಗೆ ಅಧಿವೇಶನದಲ್ಲಿ ದನಿಎತ್ತಿದಾಗ ಎಲ್ಲವೂ ಸರಿಯಿದೆ ಎಂದು ಉತ್ತರ ನೀಡಿದ್ದಾರೆ. ಆದರೀಗ ನನ್ನ ಹೋರಾಟಕ್ಕೆ ಜಯದೊರೆತಿದೆ ಮೊದಲಿನಂತೆ ನೈಸರ್ಗಿಕ ಹಳ್ಳಗಳನ್ನು ಸರಿಪಡಿಸಲಾಗಿದೆ ಎಂದರು.