ದಾವಣಗೆರೆ | ಬ್ಯಾಂಕ್ ನಲ್ಲಿದ್ದ 40 ಲಕ್ಷದ ಇನ್ಸೂರೆನ್ಸ್ ಬಾಂಡ್ ಆಸೆಗೆ ಸಂಬಂಧಿಯ ಕೊಲೆ; ಆರೋಪಿಗಳ ಬಂಧನ
ದಾವಣಗೆರೆ : ಆಕ್ಸಿಸ್ ಬ್ಯಾಂಕ್ ನಲ್ಲಿದ್ದ 40 ಲಕ್ಷದ ಇನ್ಸೂರೆನ್ಸ್ ಬಾಂಡ್ ದುರಾಸೆಗೆ ತನ್ನ ಸಂಬಂಧಿಯನ್ನು ಸ್ನೇಹಿತರ ಜೊತೆ ಸೇರಿ ಕೊಲೆ ಮಾಡಿದ್ದ ಆರೋಪಿಗಳನ್ನು ಅಜಾದ್‌ನಗರ ಪೊಲೀಸರು ಬಂಧಿಸಿದ್ದಾರೆ.
ಗಣೇಶ, ಅನಿಲ, ಶಿವಕುಮಾರ್, ಮಾರುತಿ ಬಂಧಿತ ಆರೋಪಿಗಳು. ನ.4 ರಂದು ಇಲ್ಲಿನ ಇಮಾಮ್ ನಗರದ ದುಗ್ಗೇಶಿ (32)ಎಂಬಾತನನ್ನು ಕೊಲೆ ಮಾಡಿ ಶವವನ್ನು ಮೃತ ವ್ಯಕ್ತಿಯ ಮನೆಯಲ್ಲಿ ತಂದು ಹಾಕಿ ಹೋಗಿರುವ ಬಗ್ಗೆ ತಂದೆ ಬಸವರಾಜಪ್ಪ ದೂರು ದಾಖಲಿಸಿದ್ದರು.
ಪ್ರಕರಣ ದಾಖಲಿಸಿಕೊಂಡ ಅಜಾದ್‌ನಗರ ಪೊಲೀಸರು ಆರೋಪಿಗಳ ಪತ್ತೆಗೆ ಎಎಸ್ಪಿ ವಿಜಯಕುಮಾರ ಎಂ ಸಂತೋಷ , ಮಂಜುನಾಥ ಜಿ , ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ಮಾರ್ಗದರ್ಶನದಲ್ಲಿ ಅಜಾದ್‌ನಗರ ಠಾಣೆಯ ಪೊಲೀಸ್ ನಿರೀಕ್ಷಕ ಅಶ್ವಿನ್ ಕುಮಾರ್ ಆರ್. ಜಿ., ಮತ್ತು ಸಿಬ್ಬಂದಿಗಳ ತಂಡ ಕೃತ್ಯ ನಡೆದ 24 ಗಂಟೆಯ ಒಳಗಡೆ ಕೊಲೆ ಆರೋಪಿತ ಬಂಧಿಸಿ ಕೃತ್ಯಕ್ಕೆ ಉಪಯೋಗಿಸಿದ ಪಲ್ಸರ್ ಬೈಕ್ ಸ್ವಾಧಿನಪಡಿಸಿಕೊಂಡಿದ್ದಾರೆ.
ಮೃತ ದುಗ್ಗೇಶ ದಾವಣಗೆರೆ ಆಕ್ಸಿಸ್ ಬ್ಯಾಂಕಿನಲ್ಲಿ 40 ಲಕ್ಷ ಮೌಲ್ಯದ ಇನ್ಸೂರೆನ್ಸ್ ಬಾಂಡ್ ಮಾಡಿಸಿದ್ದ, ಈ ಹಣದ ಆಸೆಗೆ ಸ್ನೇಹಿತರ ಜೊತೆ ಸೇರಿ ಉಸಿರುಗಟ್ಟಿಸಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.
ಕ್ಷಿಪ್ರ ಕಾರ್ಯಚರಣೆ ನಡೆಸಿ ಕೊಲೆ ನಡೆದ 24 ಗಂಟೆಯ ಒಳಗಡೆ ಆರೋಪಿತರನ್ನು ಬಂಧಿಸುವಲ್ಲಿ ಯಶಸ್ವಿಯಾದ ಅಧಿಕಾರಿಗಳು ಸೇರಿದಂತೆ ಆಜಾದ್ ನಗರ ಪೊಲೀಸ್ ಠಾಣೆಯ ಪಿಎಸ್ ಐ ಇಮ್ತಿಯಾಝ್ ಹಾಗೂ ಸಿಬ್ಬಂದಿಗಳಾದ ನರೇಶ್ ಎ.ಪಿ., ಮಂಜುನಾಥ ನಾಯ್ಕ್, ಕೃಷ್ಣ ನಂದ್ಯಾಲ್, ವೆಂಕಟೇಶ್ ಜಿ ಆರ್ , ಗುಗ್ಗರಿ ಲೋಕೇಶ್, ಖಾಜಾ ಹುಸೇನ್, ಸಲವುದ್ದೀನ್ , ಮಹಾಂತೆಶ್ ಕೆಳಗಿನಮನಿ ಮತ್ತು ಜಿಲ್ಲಾ ಪೊಲೀಸ್ ಕಚೇರಿಯ ಸಿಬ್ಬಂದಿಗಳಾದ ರಾಮಚಂದ್ರ ಜಾಧವ್, ರಾಘವೇಂದ್ರ, ಶಾಂತರಾಜ್ ಇವರುಗಳನ್ನು ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್ ಪ್ರಸಂಶೆ ವ್ಯಕ್ತಪಡಿಸಿದ್ದಾರೆ.