ದಾವಣಗೆರೆ | ಮತದಾರರು ಕಾಂಗ್ರೆಸ್ ಪಕ್ಷದ ಕೈ ಹಿಡಿದಿದ್ದಾರೆ : ಸಚಿವ ಎಸ್.ಎಸ್ ಮಲ್ಲಿಕಾರ್ಜುನ್
ದಾವಣಗೆರೆ: ರಾಜ್ಯದಲ್ಲಿನ ಮೂರೂ ಕ್ಷೇತ್ರಗಳ ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಅಭೂತ ಪೂರ್ವ ಸಾಧನೆಯನ್ನು ಮಾಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಿಗ್ಗಾಂವಿ ಸವಣೂರು ಉಪಚುನಾವಣೆಯ ಉಸ್ತುವಾರಿಗಳಾದ ಎಸ್.ಎಸ್ ಮಲ್ಲಿಕಾರ್ಜುನ್ ಅವರು ತಿಳಿಸಿದ್ದಾರೆ.
ಗೃಹ ಕಚೇರಿಯಲ್ಲಿ ಉಪಚುನಾವಣೆಯ ಸಂಬಂಧ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವು ರಾಜ್ಯದ ಜನತೆಗೆ ಕೊಟ್ಟ ಮಾತಿನಂತೆ ನಡೆದುಕೊಂಡಿದೆ. ಐದು ಗ್ಯಾರೆಂಟಿ ಯೋಜನೆಗಳು ಜನಪರ ಕಾರ್ಯಕ್ರಮಗಳಾಗಿವೆ ಎಂಬುದು ಪ್ರಸ್ತುತ ಸಂಡೂರು, ಚನ್ನಪಟ್ಟಣ, ಹಾಗೂ ಶಿಗ್ಗಾವಿ- ಸವಣೂರು ಉಪಚುನಾವಣೆಯಲ್ಲಿ ಮತದಾರರೇ ನಿರೂಪಿಸಿದ್ದಾರೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಸೇರಿದಂತೆ ಪಕ್ಷದ ಪ್ರತಿ ನಾಯಕರು ಮೂರೂ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ನಿರಂತರ ಪ್ರಚಾರ ಮಾಡಿದ್ದೇವು. ಪ್ರಚಾರದ ವೇದಿಕೆಗಳು, ಸಭೆಗಳಲ್ಲಿಯೇ ಮತದಾರರು ಗ್ಯಾರೆಂಟಿ ಯೋಜನೆಗಳ ಉಪಯೋಗಗಳನ್ನು ತಿಳಿಸಿದ್ದರು. ಗೃಹ ಲಕ್ಷ್ಮಿ ಯೋಜನೆಯಿಂದ ಬಂದ ಹಣದಲ್ಲಿ ಕೆಲ ಮಹಿಳೆಯರು ಗೃಹೋಪಯೋಗಿ ವಸ್ತುಗಳನ್ನು ಖರೀದಿಸಿರುವುದು ತಿಳಿಸಿದರು.
ನಮ್ಮ ಕಾಂಗ್ರೆಸ್ ಸರಕಾರವು ನುಡಿದಂತೆ ನಡೆದಿದಿದ್ದು ಮತದಾರರು ಮೂರು ಉಪಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷವನ್ನು ಬೆಂಬಲಿಸಿದೇ ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತಂದ ಕಾಂಗ್ರೆಸ್ ಪಕ್ಷದ ಕೈ ಹಿಡಿದಿದ್ದಾರೆ. ಮತದಾರರರಿಗೆ ನಮ್ಮ ಕಾಂಗ್ರೆಸ್ ಪಕ್ಷವು ಸದಾ ಚಿರ ಋಣಿಯಾಗಿರುವುದು ಎಂದು ತಿಳಿಸಿದರು.