ರೈತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಡಿ.13ರಂದು ಸುವರ್ಣಸೌಧಕ್ಕೆ ಮುತ್ತಿಗೆ: ಕೋಡಿಹಳ್ಳಿ ಚಂದ್ರಶೇಖರ್
ದಾವಣಗೆರೆ : ರೈತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಡಿ.13 ರಂದು ಬೆಳಗ್ಗೆ 10.30 ಕ್ಕೆ ಬೆಳಗಾವಿ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷಿಕಾಯ್ದೆ ರದ್ದುಗೊಳಿಸಲಿಲ್ಲ ಇದರಿಂದಾಗಿ 10 ಲಕ್ಷ ರೈತರು ಕೃಷಿ ಭೂಮಿಯಿಂದ ಹೊರ ಹೋಗಿದ್ದಾರೆ. ಕಳೆದ 75 ವರ್ಷದಿಂದ ಸುಮಾರು 10 ಲಕ್ಷ ರೈತರು ಬಗರ್ ಹುಕುಂ ಮಾಡಿಕೊಂಡು ಬಂದಿದ್ದಾರೆ. ಅವರನ್ನು ಸಕ್ರಮಗೊಳಿಸಬೇಕು.ಅರಣ್ಯ ಇಲಾಖೆ ಕಾಡಿನ ಅಂಚಿನಲ್ಲಿ ಉಳುಮೆ ಮಾಡಿಕೊಂಡಿದ್ದ ರೈತರನ್ನು ಹೊರದೂಡುವ ಕೆಲಸ ಮಾಡುತ್ತಿದೆ. ಇದು ಕೂಡಲೇ ನಿಲ್ಲಬೇಕು. ಉಚ್ಚನ್ಯಾಯಾಲಯ 3 ಎಕರೆ ಹಂಗಾಮಿ ಮಾಡಿದ್ದರೆ ಹೊರಹಾಕಬಾರದು ಎಂದು ತಿಳಿಸಿದೆ. ಸರ್ಕಾರ ಕೂಡ ಆದೇಶ ಮಾಡಿದೆ ಆದರೂ ಸಕ್ರಮ ಮಾಡಿಲ್ಲ ಎಂದರು.
ಎಂ.ಎಸ್.ಪಿ. ಶಾಸನಬದ್ಧಗೊಳಿಸಲು ಯಾವುದೇ ತೀರ್ಮಾನವಿಲ್ಲದೇ ಇರುವ ಇವರು ಕೃಷಿ ಮಾರುಕಟ್ಟೆಯಲ್ಲಿ ವರ್ಷದ ಕೆಲಸದ ಎಲ್ಲಾ ದಿನದಲ್ಲಿ ಖರೀದಿ ಕೇಂದ್ರ ತೆರದಿರಬೇಕು, 10,000 ಕೋಟಿ ಆವರ್ತ ನಿಧಿ ಸ್ಥಾಪಿಸಿ ಎಲ್ಲಾ ಬೆಳೆ ಖರೀದಿಸಬೇಕೆಂದರು. ಕೇಂದ್ರ ಸರ್ಕಾರ ಕಬ್ಬಿನ ಸಕ್ಕರೆ ಪ್ರಮಾಣವನ್ನು 9.5 ರಿಂದ 10.5 ಕ್ಕೆ ಹೆಚ್ಚುವರಿ ಮಾಡಿ 10 ಕೆ.ಜಿ ಸಕ್ಕರೆ ವಂಚನೆ ಮಾಡಿದೆ. ಇದರಿಂದಾಗಿ ಕಾರ್ಖಾನೆಯವರಿಗೆ ಲಾಭ ಮಾಡಿದಂತಾಗಿದೆ. ಸಕ್ಕರೆ ಪಸೇರ್ಂಟೇಜ್ ನಿರ್ಧಾರ ಮಾಡುವುದು ಕಾರ್ಖಾನೆ ಮಾಲೀಕರು ಎಂದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ದೊಡ್ಡ ಕಾರ್ಪೊರೆಟ್ ಕಂಪನಿಗಳನ್ನು ತೆರವು ಮಾಡಿಸುವುದಿಲ್ಲ. ಆದರೆ ರೈತರಿಗೆ ಮಾತ್ರ ತೊಂದರೆ ಮಾಡುತ್ತಾರೆ ಇದು ಖಂಡನೀಯ ಎಂದರು.
ಖಾಸಗೀಕರಣದ ಕಡೆ ಬಿಜೆಪಿ ಹಾಗೂ ಕಾಂಗ್ರೆಸ್ ಅಜೆಂಡಾ ಒಂದೇ ರೀತಿಯಿದೆ. ಸರ್ಕಾರಿ ಸಂಸ್ಥೆಯನ್ನು ಎಲ್ಲಾ ಖಾಸಗಿ ಒಡೆತನಕ್ಕೆ ನೀಡುವ ಪ್ರಕ್ರಿಯೆ ಮಾಡಲಾಗುತ್ತಿದೆ. 2023 ರ ಆಗಸ್ಟ್ ಒಂದು ಆದೇಶ ಬರುತ್ತದೆ ರೈತರಿಗೆ ಸೋಲಾರ್ ಉಪಯೋಗ ಪಡೆಯಲು. ಸೆಂಟ್ರಲ್ ಹಾಗೂ ಸ್ಟೇಟ್ ಸಬ್ಸಿಡಿ ನೀಡಲಾಗುವುದು ಸೋಲಾರ್ ಗೆ ಪರಿವರ್ತನೆಯಾಗಿ ಎನ್ನುತ್ತಾರೆ ಆದರೆ ಇದರಿಂದ ರೈತರಿಗೆ ಹಾನಿಯೇ ಹೆಚ್ಚು. ಬೆಸ್ಕಾಮ್ ಬೆಂಗಳೂರಿನಲ್ಲಿ ಒಂದು ಕಾರ್ಯಕ್ರಮ ಘೋಷಣೆ ಮಾಡಿದೆ ಹೊಸದಾಗಿ ಕಟ್ಟಿದ ಮನೆಗೆ ಹೊಸ ವಿದ್ಯುತ್ ಸರ್ವೀಸ್ ಗೆ ಪ್ರೀಪೇಯ್ಡ್ ಪಡೆಯಬೇಕು ಅಲ್ಲಿ ಮೀಟರ್ ಫಿಕ್ಸ್ ಮಾಡಲಾಗುವುದು. ಅಂದರೆ ದುಡ್ಡು ಇರುವವರೆಗೂ ಕರೆಂಟ್ ಇರುತ್ತದೆ ಇದನ್ನು ಖಾಸಗಿಯವರು ನೋಡುತ್ತಾರೆ ಎಲ್ಲಾ ಸಂಸ್ಥೆಗಳು ಖಾಸಗೀಕರಣ ಮಾಡಲು ಹೊರಟಿರುವುದು ಖಂಡನೀಯ. ಬಂಡವಾಳಶಾಹಿಗಳಿಗೆ ಸರ್ಕಾರಿಸ್ವಾಮ್ಯದ ಸಂಸ್ಥೆ ಮಾರಾಟ ಮಾಡಲುಅವಕಾಶ ಕೊಡುವುದಿಲ್ಲ. ಈಗಾಗಲೇ ಮುಂಬೈನಗರದಲ್ಲಿ ಈ ವ್ಯವಸ್ಥೆ ಅದಾನಿಗ್ರೂಪ್ ಗೆ ಕೊಡಲಾಗಿದೆ ಅಲ್ಲಿ ಪ್ರೀಪೇಯ್ಟ್ ಕರೆಂಟ್ ನೀಡಲಾಗುತ್ತಿದೆ ಇದು ದೇಶದ ದುರಂತ ಎಂದರು.
ಸುದ್ದಿಗೋಷ್ಠಿಯಲ್ಲಿ ಭಕ್ತರಹಳ್ಳಿ ಬೈರೇಗೌಡ,ಶತಕೋಟಿ ಬಸಪ್ಪ,ಚಿನ್ನ ಸಮುದ್ರ ಶೇಖರ್ ನಾಯ್ಕ್,ಎನ್.ಬಸವರಾಜ್ ದಾಗಿನಕಟ್ಟೆ,ವಿಶ್ವನಾಥ್,ನಲ್ಕುದರೆ ಚನ್ನಬಸಪ್ಪ ಉಪಸ್ಥಿತರಿದ್ದರು.