ಮಾಜಿ ಸಚಿವೆ ನಾಗಮ್ಮ ಕೇಶವಮೂರ್ತಿ ನಿಧನ

Update: 2024-03-16 17:26 GMT

ದಾವಣಗೆರೆ: ಮಾಜಿ ಸಚಿವೆ ನಾಗಮ್ಮ ಕೇಶವಮೂರ್ತಿ (90) ಅವರು ಶನಿವಾರ ನಗರದ ಪಿ.ಜೆ.ಬಡಾವಣೆಯಲ್ಲಿರುವ ನಿವಾಸದಲ್ಲಿ ನಿಧನ ಹೊಂದಿದ್ದಾರೆ. ಕೆಲ ದಿನಗಳಿಂದ ವಯೋಸಹಜ ಕಾಯಿಲೆಯಿಂದ ಅವರು ಬಳಲುತ್ತಿದ್ದರು. ನಾಳೆ ದಾವಣಗೆರೆಯ ಪಿ.ಬಿ.ರಸ್ತೆಯ ವೈಕುಂಠಧಾಮದಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ.

ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿದ್ದ ಅವರು, 1993ರ ಜನವರಿ 22ರಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆಯ ಸಚಿವೆಯಾದರು. ಕೆಪಿಸಿಸಿ ಉಪಾಧ್ಯಕ್ಷರಾಗಿ, ಜನರಲ್ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸಿದ ನಾಗಮ್ಮ ಕೇಶವಮೂರ್ತಿ ಅವರದ್ದು ರಾಜಕೀಯದಲ್ಲಿ ಅಚ್ಚಳಿಯದ ಹೆಸರು. ದಾವಣಗೆರೆ ಮಾಯಕೊಂಡ ಕ್ಷೇತ್ರದಿಂದ 2 ಬಾರಿ ಶಾಸಕರಾಗಿ, ವಿಧಾನಸಭೆಯ ಉಪಸಭಾಪತಿಯಾಗಿದ್ದರು.

1993ರ ಮೇ 15ರಂದು ಧಾರವಾಡದ ಜಿಲ್ಲಾ ಉಸ್ತುವಾರಿಯಾಗಿ ಆಯ್ಕೆಯಾಗಿದ್ದ ಅವರು, 1993ರ ಜೂನ್ 6ರಂದು ರಾಜ್ಯ ಶಿಕ್ಷಣ ಸಚಿವೆಯಾಗಿ ಇಡೀ ಕರ್ನಾಕಟದ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಸೇವೆ ಸಲ್ಲಿಸಿದವರು. ಶಿಕ್ಷಣ ಸಚಿವರಾಗಿದ್ದಾಗ ಇವರು 1 ರಿಂದ 4 ನೇ ತರಗತಿಯವರೆಗೆ ಕನ್ನಡ ಮಾಧ್ಯಮ ಕಡ್ಡಾಯಗೊಳಿಸಿದರು. ಪ್ರಾಥಮಿಕ ಶಾಲಾ ಹಂತದಲ್ಲಿ ಮಹಿಳೆಯರಿಗೆ ಶೇಕಡಾ 50ರಷ್ಟು ಮೀಸಲಾತಿ ಸೇರಿದಂತೆ ಕೈಗೊಂಡ ಹಲವಾರು ಯೋಜನೆಗಳು ಇಂದಿಗೂ ಮಾದರಿಯಾಗಿದೆ. 

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News