ಬೆಳದರ ಶಾಲೆ ಕಾಂಪೌಂಡ್ ಗೋಡೆ ಧ್ವಂಸ ಪ್ರಕರಣ : ಕ್ರಮ ಕೈಗೊಳ್ಳದ ಎಸ್ಪಿ ನಡೆಗೆ ವಿವಿಧ ಸಂಘಟನೆಗಳ ಆಕ್ರೋಶ

Update: 2024-03-17 18:11 GMT

ತುಮಕೂರು: ತಾಲೂಕಿನ ಬೆಳದರ ಸರಕಾರಿ ಶಾಲೆಯ ಕಾಂಪೌಂಡ್ ಗೋಡೆ ಕೆಡವಿದ ವಿಚಾರವಾಗಿ ಸ್ಥಳ ಪರಿಶೀಲನೆಗೆ ಆಗಮಿಸಿದ್ದ ಜಿಲ್ಲಾ ಎಸ್ಪಿಯ ಎದುರು ಶಾಲೆಯ ಕಾಂಪೌಂಡ್ ಗೋಡೆ ಕೆಡವಿದ್ದು ನಾನೇ ಎಂದು ಆರೋಪಿ ಒಪ್ಪಿಕೊಂಡರೂ ಆತನ ವಿರುದ್ದ ಕ್ರಮ ಕೈಗೊಳ್ಳದೆ ತೆರಳಿರುವುದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ ಎಂದು ನೈಜ ಹೋರಾಟಗಾರರ ವೇದಿಕೆಯ ವೆಂಕಟೇಶ ದೂರಿದ್ದಾರೆ.

ಬೆಳದರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಾಂಪೌಂಡ್ ಗೋಡೆ ಹಾಗು ಶಾಲೆಯ ಆವರಣದಲ್ಲಿ ಹಾಕಿದ್ದ ಗಿಡಗಳನ್ನು ಜೆಸಿಬಿ ಬಳಸಿ ಕಿತ್ತು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನೈಜ ಹೋರಾಟಗಾರರ ವೇದಿಕೆ ಲೋಕಾಯುಕ್ತಕ್ಕೆ ದೂರು ನೀಡಿದ್ದರು.

ಸದರಿ ದೂರಿನ ಅನ್ವಯ ಲೋಕಾಯುಕ್ತ ನ್ಯಾಯಾಧೀಶ ಪಣಿಂದ್ರ ಅವರ ಸೂಚನೆಯ ಮೇರೆಗೆ ಮಾ.16ರಂದು ಸ್ಥಳ ಪರಿಶೀಲನೆಗೆ ಆಗಮಿಸಿದ್ದ ವೇಳೆ ಜಿಲ್ಲಾ ಎಸ್ಪಿ ಎದುರು ಕಾಂಪೌಂಡ್ ಗೋಡೆ ಕೆಡವಿದ್ದು, ನಾನೆ ಎಂದು ಕಲ್ಯಾಣ ಮಂಟಪದ ಮಾಲಕ ಚಂದ್ರಪ್ಪ ಒಪ್ಪಿಕೊಂಡರೂ ಅವರ ವಿರುದ್ಧ ಯಾವುದೇ ಕಾನೂನು ಕ್ರಮ ಜರುಗಿಸದೆ ಇರುವುದು ಖಂಡನೀಯ ಎಂದು ನೈಜ ಹೋರಾಟಗಾರರ ವೇದಿಕೆ, ತುಮಕೂರು ಕಾಳಜಿ ಫೌಂಡೇಶನ್, ಭೀಮ್ ಆರ್ಮಿ ಸಂಘಟನೆ ಇನ್ನಿತರ ಸಂಘಟನೆಗಳು ಖಂಡಿಸಿವೆ.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News