ರಾಘವೇಂದ್ರ ಪ್ರಭು

Update: 2024-09-26 15:05 GMT

ಮಂಗಳೂರು: ನಗರದ ಕೆನರಾ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥರಾಗಿ ನಿವೃತ್ತಿ ಹೊಂದಿದ್ದ ನಗರದ ಅಶೋಕನಗರದ ದಂಬೆಲ್ ನಿವಾಸಿ ಪ್ರೊ.ಎಂ. ರಾಘವೇಂದ್ರ ಪ್ರಭು (83) ಗುರುವಾರ ಬೆಳಗ್ಗೆ ನಿಧನರಾಗಿದ್ದಾರೆ.

ಒಬ್ಬರು ಪುತ್ರಿ ಹಾಗೂ ಇಬ್ಬರು ಪುತ್ರರು ಮತ್ತು ಅಪಾರ ಬಂಧುಬಳಗವನ್ನು ಮೃತರು ಅಗಲಿದ್ದಾರೆ.

ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದಲ್ಲಿ ಚಿನ್ನದ ಪದಕದೊಂದಿಗೆ ಇತಿಹಾಸದಲ್ಲಿ ಎಂ.ಎ ಪದವಿ ಪಡೆದಿದ್ದ ಇವರು ಕೆನರಾ ಕಾಲೇಜಿನಲ್ಲಿ 30 ವರ್ಷ ಕರ್ತವ್ಯ ಸಲ್ಲಿಸಿದ್ದರು. ಶಿಕ್ಷಣ ಇಲಾಖೆಗಾಗಿ ಇತಿಹಾಸದ ಹಲವಾರು ಪಠ್ಯ ಪುಸ್ತಕಗಳನ್ನು ರಚಿಸಿದ್ದಾರೆ. ಅಸಂಗ ಸಹಿತ ಹಲವು ಕಥಾ ಸಂಕಲನಗಳು ಪ್ರಕಟವಾಗಿದೆ.

ಮಂಗಳೂರಿನ ಥಿಯೋಸಾಫಿಕಲ್ ಸೊಸೈಟಿಯ ಪ್ರಮುಖ ಜವಾಬ್ದಾರಿ ವಹಿಸಿದ್ದರು. ನಗರದ ರಾಮಕೃಷ್ಣ ಮಠ ಸಹಿತ ಭಾರತದ ಹಲವಾರು ಧಾರ್ಮಿಕ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತನ್ನನ್ನು ತೊಡಗಿಸಿಕೊಂಡಿದ್ದರು.

*ರಾಘವೇಂದ್ರ ಪ್ರಭು ಅವರ ನಿಧನಕ್ಕೆ ಕೆನರಾ ಹೈಸ್ಕೂಲ್ ಅಸೋಸಿಯೇಶನ್‌ನ ಪದಾಧಿಕಾರಿಗಳು , ಏಕಗಮ್ಯಾನಂದ ಸ್ವಾಮೀಜಿ, ಜಾದೂಗಾರ ಕುದ್ರೋಳಿ ಗಣೇಶ್ ಮತ್ತಿತರರು ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News

ಬಾಬು ಕೊರಗ
ಶಾಂತ ರೈ
ಇಬ್ರಾಹಿಂ
ರಾಧಾ