ಬಿಎಂ ಪ್ರಭಾಕರ ದೈವಗುಡ್ಡೆ

Update: 2024-11-23 17:21 GMT

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲಾ ಟೂರಿಸ್ಟ್ ಕಾರು ಚಾಲಕ-ಮಾಲಕರ ಸಂಘದ ಗೌರವಾಧ್ಯಕ್ಷ ಬಿ ಎಂ ಪ್ರಭಾಕರ ದೈವಗುಡ್ಡೆ (71) ಅವರು ಅಲ್ಪ ಕಾಲದ ಅನಾರೋಗ್ಯದಿಂದ ಶನಿವಾರ ರಾತ್ರಿ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ಬಂಟ್ವಾಳದಲ್ಲಿ ಸಮಾನ ಮನಸ್ಕ ಸಂಘಟನೆಗಳ ಸಮನ್ವಯ ಸಮಿತಿ ರಚಿಸಿ ಆ ಮೂಲಕ ತಾಲೂಕಿನಲ್ಲಿ ಜನಪರ ಸಮಸ್ಯೆ ಗಳ ಬಗ್ಗೆ ಹೋರಾಟ ಸಂಘಟಿಸಿ ಜನಾನುರಾಗಿಯಾಗಿದ್ದ ಹಿರಿಯ ಸಂಘಟಕರಾಗಿದ್ದ ಪ್ರಭಾಕರ ದೈವಗುಡ್ಡೆ ಅವರು ರೈತ ಪರ ಚಳುವಳಿ, ಟೋಲ್ ಗೇಟ್ ಅವ್ಯವಸ್ಥೇಯ ವಿರುದ್ದ ಹೋರಾಟ, ಎತ್ತಿನ ಹೊಳೆ ಯೋಜನೆಯ ವಿರೋಧಿ ಹೋರಾಟ ಗಳಲ್ಲಿ ಸಕ್ರಿಯರಾಗಿದ್ದ ಇವರು ಸಮಾನ ಮನಸ್ಕರನ್ನು ಒಟ್ಟುಗೂಡಿಸಿ ಹಲವು ಹೋರಾಟಗಳನ್ನು ನಡೆಸಿದ್ದರು.

ಮೃತರು ಪತ್ನಿ, ಪುತ್ರಿ ಸಹಿತ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇವರ ನಿಧನಕ್ಕೆ ತಾಲೂಕಿನ ವಿವಿಧ ಸಂಘಟನೆಗಳ ಪ್ರಮುಖರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News

ಡಾ. ಆಶಾ ಭಟ್