ನಾನು ಸಭಾಪತಿಯಾಗಿರುವಾಗಲೇ 11 ಮಂದಿ ವಿಧಾನ ಪರಿಷತ್ ಸದಸ್ಯರು ರಾಜೀನಾಮೆ: ಬಸವರಾಜ ಹೊರಟ್ಟಿ

Update: 2024-03-21 14:53 IST
ನಾನು ಸಭಾಪತಿಯಾಗಿರುವಾಗಲೇ 11 ಮಂದಿ ವಿಧಾನ ಪರಿಷತ್ ಸದಸ್ಯರು ರಾಜೀನಾಮೆ: ಬಸವರಾಜ ಹೊರಟ್ಟಿ
  • whatsapp icon

ಹುಬ್ಬಳ್ಳಿ: ನನ್ನ ಸಭಾಪತಿ ಅಧಿಕಾರದ ಅವಧಿಯಲ್ಲಿಯೇ 11 ಜನ ವಿಧಾನ ಪರಿಷತ್ ಸದಸ್ಯರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದು, ಇದು ಕರ್ನಾಟಕ ಇತಿಹಾಸದಲ್ಲಿಯೇ ಮತ್ತೊಂದು ದಾಖಲೆಯಾಗಿದೆ. ಅಲ್ಲದೇ ಎರಡು ಮೂರು ದಿನದಲ್ಲಿ ಮತ್ತೊಬ್ಬ ಸದಸ್ಯ ರಾಜೀನಾಮೆ ನೀಡಲಿದ್ದಾರೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ

ಗುರುವಾರ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಈಗಾಗಲೇ ಎಂಟು ಬಾರಿ ಗೆಲುವು ಸಾಧಿಸಿ ದಾಖಲೆ ಮಾಡಿದ್ದೇನೆ. ಆದರೆ ಈಗ ನಾನು ಸಭಾಪತಿ ಆಗಿರುವಾಗಲೇ ಹನ್ನೊಂದು ಜನ ವಿಧಾನ ಪರಿಷತ್ ಸದಸ್ಯರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದರು.

2018ರಲ್ಲಿ ವಿ.ಎಸ್.ಉಗ್ರಪ್ಪ, 2021ರಲ್ಲಿ ಶ್ರೀನಿವಾಸ ಮಾನೆ, ಸಿ.ಆರ್.ಮನೋಹರ, 2022ರಲ್ಲಿ ಸಿ.ಎಂ.ಇಬ್ರಾಹಿಂ, 2023ರಲ್ಲಿ ಪುಟ್ಟಣ್ಣ, ಬಾಬುರಾವ್ ಚಿಂಚನಸೂರ್, ಆರ್.ಶಂಕರ್, ಲಕ್ಷ್ಮಣ ಸವದಿ, ಆಯನೂರು ಮಂಜುನಾಥ್, 2024ರಲ್ಲಿ ಜಗದೀಶ್ ಶೆಟ್ಟರ್, ಮರಿತಿಬ್ಬೇಗೌಡ ಸೇರಿದಂತೆ ಒಟ್ಟು ಹನ್ನೊಂದು ಜನರು ರಾಜೀನಾಮೆ ನೀಡಿದ್ದಾರೆ. ಇನ್ನೂ ಎರಡು ದಿನಗಳಲ್ಲಿ ಇನ್ನೊಬ್ಬ ಸದಸ್ಯ ರಾಜೀನಾಮೆ ನೀಡಲಿದ್ದಾರೆ. ಅದು ಮಾತ್ರ ಶತಸಿದ್ಧ ಎಂದು ಅವರು ಮಾಹಿತಿ ನೀಡಿದರು.


Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News