ಕಲ್ಲೇಗ ಜುಮ್ಮಾ ಮಸೀದಿಯಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ

Update: 2023-11-20 06:39 GMT

ಪುತ್ತೂರು: ಹಿದಾಯ ಫೌಂಡೇಶನ್ ಮಂಗಳೂರು, ಯೆನಪೋಯ ಮೆಡಿಕಲ್ ಕಾಲೇಜ್ ಆಸ್ಪತ್ರೆ ದೇರಳಕಟ್ಟೆ ಹಾಗೂ ಎನ್‍ಆರ್ ಐ ಪ್ರವಾಸಿಗಳು ಮತ್ತು ಕಲ್ಲೇಗ ಜುಮ್ಮಾ ಮಸೀದಿ, ಕಲ್ಲೇಗ ಇದರ ಸಂಯುಕ್ತ ಆಶ್ರಯದಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಹಾಗೂ ಆರೋಗ್ಯ ಜಾಗೃತಿ ಕಾರ್ಯಕ್ರಮ ಭಾನುವಾರ ಕಲ್ಲೇಗ ಜುಮ್ಮಾ ಮಸೀದಿ ವಠಾರದಲ್ಲಿ ನಡೆಯಿತು.

ಶಿಬಿರವನ್ನು ಕಲ್ಲೇಗ ಜುಮ್ಮಾ ಮಸೀದಿ ಅಧ್ಯಕ್ಷ ಕೆ.ಪಿ. ಮುಹಮ್ಮದ್ ಹಾಜಿ ಉದ್ಘಾಟಿಸಿದರು. ಮಂಗಳೂರು ಹಿದಾಯ ಫೌಂಡೇಶನ್ ಅಧ್ಯಕ್ಷ ಜಿ. ಮುಹಮ್ಮದ್ ಹನೀಫ್ ಹಾಜಿ ಅಧ್ಯಕ್ಷತೆ ವಹಿಸಿದ್ದರು. ಕಲ್ಲೇಗ ಜುಮ್ಮಾ ಮಸೀದಿ ಮುದರ್ರಿಸ್ ಶಾಫಿ ಫೈಝಿ ಇರ್ಫಾನಿ ದುವಾ ನೆರವೇರಿಸಿದರು.ಶಾಸಕ ಅಶೋಕ್ ಕುಮಾರ್ ರೈ ಭಾಗವಹಿಸಿ ಶುಭ ಹಾರೈಸಿದರು.

ಶಿಬಿರದಲ್ಲಿ ನುರಿತ ತಜ್ಞ ವೈದ್ಯರ ತಂಡ ಭಾಗವಹಿಸಿತ್ತು. ಶಿಬಿರದಲ್ಲಿ ಸಾಮಾನ್ಯ ಪರೀಕ್ಷೆ, ದಂತ ಪರೀಕ್ಷೆ, ಕಣ್ಣು ಪರೀಕ್ಷೆ, ಕಿವಿ ಪರೀಕ್ಷೆ, ಮೂಗು ಪರೀಕ್ಷೆ, ಗಂಟಲು ಪರೀಕ್ಷೆ, ಎಲುಬು ಪರೀಕ್ಷೆ, ಹೆರಿಗೆ ಮತ್ತು ಪ್ರಸೂತಿ ಹಾಗೂ ಮಕ್ಕಳ ತಜ್ಞ ವೈದ್ಯರುಗಳು ಭಾಗವಹಿಸಿ ತಪಾಸಣೆ ನಡೆಸಿದರು, ಇದರ ಜೊತೆಗೆ ರಕ್ತದೊತ್ತಡ, ಮಧುಮೇಹ ಪರೀಕ್ಷೆ ನಡೆಸಲಾಯಿತು.

ಅಗತ್ಯವುಳ್ಳವರಿಗೆ ಕನ್ನಡಕ ಮತ್ತು ಔಷಧಿಗಳನ್ನು ಉಚಿತವಾಗಿ ನೀಡಲಾಯಿತು. ಮಹಿಳೆಯರಿಗೆ ಅತ್ಯಾಧುನಿಕ ತಂತ್ರಜ್ಞಾನದ ವ್ಯವಸ್ಥೆಗಳಾದ ಮೊಬೈಲ್ ಕ್ಲಿನಿಕ ಬಸ್ಸಿನಲ್ಲಿ ತಪಾಸಣೆ ನಡೆಸಲಾಯಿತು.

ಸಭೆಯಲ್ಲಿ ಮಾಸ್ಟರ್ ಪ್ಲಾನರಿಯ ಮೆನೇಜರ್ ಪ್ರಭಾಕರ್, ಹನೀಫ್ ಹಾಜಿ ಉದಯ, ಸುಲೈಮಾನ್ ಮೌಲವಿ ಕಲ್ಲೇಗ, ಇಸ್ಮಾಯಿಲ್ ಮುರ, ನ್ಯಾಯವಾದಿ ಕೆ.ಪಿ. ಸಿದ್ದೀಕ್, ಅಬ್ದುಲ್ ರಹಿಮಾನ್ ಮುರ, ರಶೀದ್ ಮುರ, ಕೆ.ಪಿ. ಅಬೂಬಕ್ಕರ್ ಹಾಜಿ, ಇಬ್ರಾಹಿಂ ಕಲ್ಲೇಗ, ಸಾದಿಕ್ ಮಂಗಳೂರು ಮತ್ತಿತರರು ಉಪಸ್ಥಿತರಿದ್ದರು.


ವೈದ್ಯಕೀಯ ತಪಾಸಣಾ ಶಿಬಿರದಲ್ಲಿ 635 ಮಂದಿ ಪಾಲ್ಗೊಂಡಿದ್ದರು.

ಕಲ್ಲೇಗ ಜಮಾಅತ್ ಕಮಿಟಿ ಅಧ್ಯಕ್ಷ ಬಿ.ಎ. ಶಕೂರ್ ಹಾಜಿ ಸ್ವಾಗತಿಸಿದರು. ಹಿದಾಯ ಫೌಂಡೇಶನ್‍ನ ಹಕೀಂ ಕಲಾಯಿ ವಂದಿಸಿದರು. ಹಬೀಬ್ ಗೋಳ್ತಮಜಲು ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News