ದುಬೈ: 'ಅಝ್ಹರ್ ಫೆಸ್ಟ್ UAE', ಗಣ್ಯರಿಗೆ ಸನ್ಮಾನ ಕಾರ್ಯಕ್ರಮ

Update: 2024-03-20 17:33 GMT

ದುಬೈ: ಅಂತರಾಷ್ಟ್ರೀಯ ಅಲ್ ಅಝ್ಹರ್ ಮದ್ರಸಾದ ಐದನೇ ವರ್ಷದ 'ಅಝ್ಹರ್ ಫೆಸ್ಟ್ UAE' ಹಾಗು ಗಣ್ಯರಿಗೆ ಸನ್ಮಾನ ಕಾರ್ಯಕ್ರಮ ದುಬೈನ ಅಲ್-ತವರ್ ನಲ್ಲಿ ರವಿವಾರ ನಡೆಯಿತು.

ಕಾರ್ಯಕ್ರಮದಲ್ಲಿ ದುಬೈ ನ ಅರಫಾ ಗ್ರೂಪ್ ಮಾಲಕ ಹಾಜಿ ಮುಹಮ್ಮದ್ ಯೂಸುಫ್ ಮೂಳೂರು ಅವರಿಗೆ 'ಫಾದರ್ ಆಫ್ ಮದರಸ' ಪ್ರಶಸ್ತಿ ನಿಡಿ ಗೌರವಿಸಲಾಯಿತು.

ಈ ಸಂಧರ್ಭ ಕರ್ನಾಟಕ ರಾಜ್ಯ ಹಜ್ ಸಮಿತಿಗೆ ಅಯ್ಕೆಯಾದ ಜಾಮಿಯಾ ಮಜ್ಲಿಸ್ ಅಲ್-ಶಿಫಾ ಫೌಂಡೇಶನ್ ನ ಅಧ್ಯಕ್ಷ ಶರಫುಸ್ಸಾದಾತ್ ಸೈಯದ್ ಮುಹಮ್ಮದ್ ಅಶ್ರಫ್ ಅಸ್ಸಕಾಫ್ ತಂಙಲ್ ಗೆ ಹಾಗು ಅಝರ್ ಮದ್ರಸಾದ ಸ್ಥಾಪಕ ಡಾ. ಮುಹಮ್ಮದ್ ಅಝ್ಹರಿ ಕೂಳೂರು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಆಲವಿ ಸಖಾಫಿ ಕೊಳತ್ತೂರ್, ಮರ್ಕಝ್ ದುಬೈ ನ ಮುಖ್ಯಸ್ಥ ಕಟ್ಟಿಪ್ಪಾರ ಉಸ್ತಾದ್, ಹಾಜಿ ಅಬ್ದುಲ್‌ ಹಮೀದ್ ಉಮರ್ ಮೂಳೂರು, ಹಾಜಿ ಇಲ್ಯಾಸ್ ಉಮರ್ ಮೂಳೂರು, ಹಾಜಿ ಇಸ್ಮಾಯಿಲ್ ಮೂಳೂರು, ಹಾಜಿ ಅಬ್ದುಲ್‌ ರಶೀದ್, ಮುಹಮ್ಮದ್ ಆಸಿಫ್ ಬಿ.ಸಿ.ರೋಡ್, ಶಮೀಮ್, ರಿಯಾಝ್, ಶಂಷುದ್ದೀನ್, ಸಿರಾಜ್, ಸೈಪುಲ್ಲಾ, ನಾಸಿರ್, ನಿಯಾಝ್, ಶಮೀರ್, ಸಮದ್ ಬಿರ್ಲಿ, ಅನ್ವರ್, ಖಾಲಿದ್, ಉಸ್ಮಾನ್ ಖುರೈಶಿ ಹಾಗು ಇತರ ಗಣ್ಯರು ಉಪಸ್ಥಿತರಿದ್ದರು.

ಕಳೆದ ಐದು ವರ್ಷಗಳಿಂದ ಅಲ್ ಅಝ್ಹರ್ ಮದ್ರಸವು ಆನ್ ಲೈನ್ ಮೂಲಕ ವಿವಿಧ ದೇಶಗಳಲ್ಲಿ ನೆಲೆಸಿರುವವರಿಗೆ 1ರಿಂದ 12ನೇ ತರಗತಿವರೆಗಿನ ಧಾರ್ಮಿಕ ವಿದ್ಯಾಭ್ಯಾಸವನ್ನು ನೀಡುತ್ತಿದೆ.

ಇದೇ ತಿಂಗಳ 28ಕ್ಕೆ ಸೌದಿ ಅರೇಬಿಯಾದ ಜುಬೈಲ್ ನಲ್ಲೂ 'ಅಝ್ಹರ್ ಫೆಸ್ಟ್' ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.















 


Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News