ಹಜ್ ಯಾತ್ರೆಯ ಸಂದರ್ಭ 1,300 ಮಂದಿ ಮೃತ್ಯು: ವರದಿ
Update: 2024-06-24 16:38 GMT
ರಿಯಾದ್ : ಈ ವರ್ಷದ ಹಜ್ ಯಾತ್ರೆಯ ಸಂದರ್ಭದಲ್ಲಿ ಬಿಸಿಲ ಬೇಗೆ ಹಾಗೂ ಶಾಖ ಸಂಬಂಧಿತ ಸಮಸ್ಯೆಗಳಿಂದ 1,300ಕ್ಕೂ ಅಧಿಕ ಹಜ್ ಯಾತ್ರಾರ್ಥಿಗಳು ಮೃತಪಟ್ಟಿದ್ದಾರೆ ಎಂದು ಸೌದಿ ಅರೆಬಿಯಾ ಸೋಮವಾರ ದೃಢಪಡಿಸಿದೆ.
ಸಾವನ್ನಪ್ಪಿದವರಲ್ಲಿ ಅಮೆರಿಕ, ಇಂಡೊನೇಶ್ಯಾ, ಭಾರತ, ಈಜಿಪ್ಟ್, ಜೋರ್ಡಾನ್ ಸೇರಿದಂತೆ 10 ದೇಶಗಳ ಯಾತ್ರಾರ್ಥಿಗಳು ಸೇರಿದ್ದಾರೆ. `ಈ ವರ್ಷ 1,75,000 ಭಾರತೀಯರು ಹಜ್‍ಗೆ ಭೇಟಿ ನೀಡಿದ್ದು ಯಾತ್ರೆಯ ಸಂದರ್ಭ ನೈಸರ್ಗಿಕ ಕಾರಣಗಳಿಂದ 98 ಭಾರತೀಯರು ಮರಣ ಹೊಂದಿದ್ದಾರೆ' ಎಂದು ಭಾರತದ ವಿದೇಶಾಂಗ ಇಲಾಖೆಯ ವಕ್ತಾರ ರಣಧೀರ್ ಜೈಸ್ವಾಲ್ ಕಳೆದ ವಾರ ಸುದ್ಧಿಗೋಷ್ಟಿಯಲ್ಲಿ ಹೇಳಿದ್ದರು. ಹವಾಮಾನ ಬದಲಾವಣೆಯಿಂದ ಹಜ್ ಯಾತ್ರಾರ್ಥಿಗಳು ತೀವ್ರ ಪರಿಣಾಮ ಎದುರಿಸುತ್ತಿದ್ದಾರೆ. ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸುವ ಸ್ಥಳದಲ್ಲಿ ಪ್ರತೀ ದಶಕದಲ್ಲಿ 0.4 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಏರಿದೆ ಎಂದು ಅಧ್ಯಯನ ವರದಿಯೊಂದು ಹೇಳಿದೆ.