ಮಕ್ಕಾದಲ್ಲಿ ಈ ಬಾರಿ 98 ಭಾರತೀಯ ಹಜ್ ಯಾತ್ರಿಗಳು ಮೃತ್ಯು : ಕೇಂದ್ರ ಸರಕಾರ

Update: 2024-06-21 15:37 GMT

Photo: Twitter 

ಹೊಸದಿಲ್ಲಿ : ಈ ವರ್ಷ ಸೌದಿ ಅರೇಬಿಯಾದಲ್ಲಿ ಹಜ್ ಯಾತ್ರೆಯ ಸಂದರ್ಭ 98 ಭಾರತೀಯ ಹಜ್ ಯಾತ್ರಿಗಳು ಮೃತಪಟ್ಟಿದ್ದಾರೆ. ಈ ಎಲ್ಲಾ ಸಾವುಗಳು ಸಹಜ ಕಾಯಿಲೆ ಹಾಗೂ ವೃದ್ಧಾಪ್ಯದಿಂದ ಸಂಭವಿಸಿವೆ ಎಂದು ಕೇಂದ್ರ ಸರಕಾರ ಶುಕ್ರವಾರ ಹೇಳಿದೆ.

‘‘ಪ್ರತಿ ವರ್ಷ ಹಲವು ಭಾರತೀಯ ಯಾತ್ರಿಗಳು ಹಜ್‌ಗೆ ಭೇಟಿ ನೀಡುತ್ತಾರೆ. ಈ ವರ್ಷ ಇದುವರೆಗೆ 1,75,000 ಭಾರತೀಯ ಯಾತ್ರಿಗಳು ಹಜ್‌ಗೆ ಭೇಟಿ ನೀಡಲು ಸೌದಿ ಅರೇಬಿಯಾಕ್ಕೆ ತೆರಳಿದ್ದರು. ಜುಲೈ 9ರಿಂದ 22ರ ವರೆಗೆ ಇದುವರೆಗೆ 98 ಭಾರತೀಯ ಹಜ್ ಯಾತ್ರಿಗಳು ಸಾವನ್ನಪ್ಪಿದ್ದಾರೆ. ಸಹಜ ಕಾಯಿಲೆ ಹಾಗೂ ವೃದ್ಧಾಪ್ಯ ಈ ಸಾವುಗಳಿಗೆ ಕಾರಣ’’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಕಳೆದ ವರ್ಷ 187 ಹಜ್ಜ್ ಯಾತ್ರಿಗಳು ಮೃತಪಟ್ಟಿದ್ದರು ಎಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News