MGT ಕೇಂದ್ರ ಸಮಿತಿ| ಸೌದಿ ಅರೇಬಿಯಾದ ಅಧ್ಯಕ್ಷರಾಗಿ ಅಬ್ದುಲ್ ಸತ್ತಾರ್ ಜಯಪುರ ಪುನರಾಯ್ಕೆ

Update: 2024-01-17 04:56 GMT

ರಿಯಾದ್: ಮಲ್ನಾಡ್ ಗಲ್ಪ್ ಟ್ರಸ್ಟ್ (MGT) ಇದರ ಕೇಂದ್ರ ಸಮಿತಿಯ 2023ನೇ ಸಾಲಿನ ವಾರ್ಷಿಕ ಮಹಾಸಭೆಯು ರಿಯಾದ್ ನ ಲೋರಾನ್ ರೆಸಾರ್ಟ್ ನಲ್ಲಿ ಶುಕ್ರವಾರ ಮಧಾಹ್ನ ನಡೆಯಿತು.

ಹಿರಿಯ ಸದಸ್ಯರಾದ ಅಶ್ರಫ್ JVC ಅವರ ಖಿರಾಅತ್ ಮೂಲಕ ಆರಂಭಗೊಂಡ ಸಭೆಯನ್ನು ಜುಬೈಲ್ ಘಟಕದ ಅಧ್ಯಕ್ಷರಾದ ಶಮೀಮ್ ಮೂಡಿಗೆರೆ ಸ್ವಾಗತಿಸಿದರು. ನಂತರ MGT ಸೆಂಟ್ರಲ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ಇರ್ಶಾದ್ ಚಕ್ಮಕ್ಕಿ ಅವರು 2023ರ ಸಾಲಿನ ವಾರ್ಷಿಕ ವರದಿ ಮತ್ತು ಲೆಕ್ಕ ಪತ್ರಗಳನ್ನು ಸಭೆಯಲ್ಲಿ ಮಂಡಿಸಿದರು. ಅವೆರಡನ್ನು ಮಂಜೂರು ಮಾಡಲಾಯಿತು.

ನಂತರ ನಾಲ್ಕು ವಲಯಗಳ ಅಧ್ಯಕ್ಷರುಗಳಾದ ನಝೀರ್ ಜಯಪುರ (ರಿಯಾದ್), ಶಮೀಮ್ ಮೂಡಿಗೆರೆ (ಜುಬೈಲ್), ಅಫ್ಝಲ್ ಸಮದ್ ಕೊಪ್ಪ (ದಮಾಮ್ - ಕೋಬಾರ್) ಹಾಗು ಇಕ್ಬಾಲ್ ಗಬ್ಗಲ್ (ಜಿದ್ದಾ) - ಇವರುಗಳು ಮಾತನಾಡಿ ತಮ್ಮ ತಮ್ಮ ವಲಯಗಳ ಮುಂದಿನ ಯೋಜನೆಗಳ ಬಗ್ಗೆ ತಿಳಿಸಿದರು.

ತದನಂತರ ಅಧ್ಯಕ್ಷರಾದ ಅಬ್ದುಲ್ ಸತ್ತಾರ್ ಅವರು ಕಳೆದ ಎರಡು ವರ್ಷಗಳಲ್ಲಿ ತನ್ನ ಅಧ್ಯಕ್ಷತೆಯಲ್ಲಿ MGTಯ ಯಶಸ್ಸಿಗಾಗಿ ಶ್ರಮಿಸಿದ ಹಾಗು ಸಹಕಾರ ನೀಡಿದ ಎಲ್ಲಾ ಹಿರಿಯ / ಕಿರಿಯ ಸದಸ್ಯರುಗಳಿಗೆ ಧನ್ಯವಾದಗಳನ್ನು ತಿಳಿಸಿ ಸಮಿತಿಯನ್ನು ಬರ್ಖಾಸ್ತುಗೊಳಿಸಿದರು.

ನಂತರ ಹೊಸ ಸಮಿತಿಯನ್ನು ರಚಿಸಲು ಬಶೀರ್ ಬಾಳುಪೇಟೆ ಹಾಗು ಅಬೂಬಕ್ಕರ್ ಹಂಡುಗುಳಿ ಮೂಡಿಗೆರೆ ಅವರನ್ನು ನೇಮಕ ಮಾಡಲಾಯಿತು.

ಅಬ್ದುಲ್ ಸತ್ತಾರ್ ಅವರನ್ನೇ ಮುಂದಿನ ಒಂದು ವರ್ಷದ ಅವಧಿಗೆ ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಪುನರಾಯ್ಕೆ ಮಾಡಲಾಯಿತು. ಹಾಗೆಯೇ ಅಬೂಬಕ್ಕರ್ ಹಂಡುಗುಳಿ ಮೂಡಿಗೆರೆ ಅವರನ್ನು ಗೌರವಾಧ್ಯಕ್ಷರಾಗಿ, ನಝೀರ್ ಜಯಪುರ ಮತ್ತು ಜಲಾಲ್ ಬೇಗ್ ರನ್ನು ಕ್ರಮವಾಗಿ ಪ್ರಧಾನ ಕಾರ್ಯದರ್ಶಿ ಹಾಗು ಖಜಾಂಚಿಗಳನ್ನಾಗಿ ಆಯ್ಕೆ ಮಾಡಲಾಯಿತು.

ಹಿರಿಯ ಸದಸ್ಯರುಗಳಾದ ಶರೀಫ್ ಸ್ಯಾಂಕನ್, ಫಾರೂಕ್ ಅರಬ್ ಎನರ್ಜಿ ಹಾಗು ಬಶೀರ್ ಬಾಳುಪೇಟೆಯವರು ಸಂದರ್ಭೋಚಿತವಾಗಿ ಮಾತನಾಡಿ, ಹೊಸ ಸಮಿತಿಗೆ ಶುಭ ಹಾರೈಸಿ, ನೂತನ ಸದಸ್ಯರನ್ನು ಹುರಿದುಂಬಿಸಿದರು.

ನಂತರ ರಮಝಾನ್ ಕಲೆಕ್ಷನ್ 2024ನ್ನು ಅಧಿಕೃತವಾಗಿ ಶರೀಫ್ ಸ್ಯಾಂಕನ್ ರವರಿಂದ ಉದ್ಘಾಟಿಸಲಾಯಿತು. ಪವಿತ್ರ ರಮಝಾನ್ ನಲ್ಲಿ ಗರಿಷ್ಠ ಕಿಟ್ ಗಳನ್ನು ಸಂಗ್ರಹಿಸುವ ಯೋಜನೆಗೆ ಎಲ್ಲಾ ನಾಲ್ಕು ವಲಯಗಳೂ ಶ್ರಮಿಸಲು ಪಣತೊಡಲಾಯಿತು.

ನೂತನ ಪ್ರಧಾನ ಕಾರ್ಯದರ್ಶಿ ನಝೀರ್ ಜಯಪುರ ಅವರು ವಂದಿಸಿದರು.





































 

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News