ವಿಮಾನದಲ್ಲಿ ಪೇಜರ್, ವಾಕಿ-ಟಾಕಿ ನಿಷೇಧಿಸಿದ ಎಮಿರೇಟ್ಸ್

Update: 2024-10-05 15:53 GMT
PC : NDTV

ದುಬೈ : ಲೆಬನಾನ್‍ನಲ್ಲಿ ವಿಧ್ವಂಸಕ ದಾಳಿಯ ಹಿನ್ನೆಲೆಯಲ್ಲಿ ದುಬೈ ಮೂಲದ ವಿಮಾನಯಾನ ಸಂಸ್ಥೆ ವಿಮಾನದಲ್ಲಿ ಎಮಿರೇಟ್ಸ್ ಪೇಜರ್ ಗಳು ಹಾಗೂ ವಾಕಿ-ಟಾಕಿಗಳನ್ನು ನಿಷೇಧಿಸಿದೆ.

ಜತೆಗೆ, ಪ್ರಾದೇಶಿಕ ಉಲ್ಬಣದಿಂದಾಗಿ ಮಧ್ಯಪ್ರಾಚ್ಯ ಸ್ಥಳಗಳಿಗೆ ವಿಮಾನ ರದ್ದತಿಯನ್ನು ಅ. 15ರವರೆಗೆ ವಿಸ್ತರಿಸಲಾಗಿದೆ. ಆದರೆ ಜೋರ್ಡಾನ್‍ಗೆ ವಿಮಾನ ಪ್ರಯಾಣ ರವಿವಾರದಿಂದ ಪುನರಾರಂಭಗೊಳ್ಳಲಿದೆ . `ದುಬೈಯಿಂದ ಬರುವ ಅಥವಾ ದುಬೈಗೆ ಬರುವ ಎಲ್ಲಾ ಪ್ರಯಾಣಿಕರೂ ವಿಮಾನದಲ್ಲಿ ಪೇಜರ್ ಮತ್ತು ವಾಕಿ-ಟಾಕಿ ಸಾಗಿಸುವುದನ್ನು ನಿಷೇಧಿಸಲಾಗಿದೆ. ಪ್ರಯಾಣಿಕರ ಹ್ಯಾಂಡ್ ಲಗೇಜ್ ಅಥವಾ ಪರಿಶೀಲಿಸಿದ ಬ್ಯಾಗ್‍ಗಳಲ್ಲಿ ಇಂತಹ ವಸ್ತುಗಳಿದ್ದರೆ ದುಬೈ ಪೊಲೀಸರು ಜಪ್ತಿ ಮಾಡಿಕೊಳ್ಳುತ್ತಾರೆ' ಎಂದು ಎಮಿರೇಟ್ಸ್ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News