ಉಮ್ಮ್‌ ಅಲ್‌ ಖುವೈನ್‌ನಲ್ಲಿ ಹೊಸ ಟಾರ್ಟಿಲ್ಲಾ ತಯಾರಿಕಾ ಘಟಕ ಆರಂಭಿಸಿದ 'ಫ್ಲೋರ್‌ ಮಾಸ್ಟರ್ಸ್‌' ಬೇಕರಿ

Update: 2024-08-19 07:17 GMT

ಅಲ್‌ ರಫಾ, ಉಮ್ಮ್‌ ಅಲ್‌ ಖುವೈನ್‌, ಯುಎಇ: ಫ್ಲೋರ್‌ ಮಾಸ್ಟರ್ಸ್‌ ಬೇಕರಿ ಉಮ್ಮ್‌ ಅಲ್‌ ಖುವೈನ್‌, ಯುಎಇ ನಲ್ಲಿ ತನ್ನ ಹೊಸ ಟಾರ್ಟಿಲ್ಲಾ ತಯಾರಿಕಾ ಘಟಕವನ್ನು ಆರಂಭಿಸಿದೆ. ಫ್ಲ್ಯಾಟ್‌ಬ್ರೆಡ್‌ಗಳ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವ ಉದ್ದೇಶದೊಂದಿಗೆ ಎಚ್‌ಎಂಎಚ್‌ ಹೋಲ್ಡಿಂಗ್‌ ಕೋ ಅಡಿಯಲ್ಲಿ ಅವರ ವಿಸ್ತರಣಾ ಯೋಜನೆಯ ಭಾಗವಾಗಿ ಈ ಘಟಕವನ್ನು ಸ್ಥಾಪಿಸಲಾಗಿದೆ.

ಉದ್ಘಾಟನಾ ಸಮಾರಂಭವು ತಾಶಿನ್‌ ಆಮಿಹಾ ಹನೀಫ್‌ ಮತ್ತು ತನ್ಝೀಲಾ ಅಲೀಮಾಹ್‌ ಹನೀಫ್‌ ಅವರಿಂದ ಕುರ್‌ ಆನ್‌ ಪಠಣದೊಂದಿಗೆ ಆರಂಭಗೊಂಡಿತು. ಸಂಸ್ಥೆಯ ಸ್ಥಾಪಕರು ಮತ್ತು ಅಧ್ಯಕ್ಷರಾಗಿರುವ ಮಂಗಳೂರಿನ ಹನಿ ಎಂ ಹನೀಫ್‌ ಮತ್ತು ಸಹ-ಸ್ಥಾಪಕರಾದ ಶಹನಾಝ್‌ ಹನೀಫ್ ಅವರ ಮುಂದಾಳತ್ವದಲ್ಲಿ ಕಾರ್ಯಕ್ರಮ ನಡೆಯಿತು.

ಹೊಸ ಘಟಕವು ವಿವಿಧ ರೀತಿಯ ಟಾರ್ಟಿಲ್ಲಾಗಳನ್ನು ತಯಾರಿಸಲಿದೆ, ಈ ಟಾರ್ಟಿಲ್ಲಾಗಳಲ್ಲಿ ಗೋಧಿ, ಮಲ್ಟಿಗ್ರೈನ್‌ ಮತ್ತು ಇತರ ವಿಶೇಷ ವಿಧಗಳಿರಲಿವೆ. ಈ ಉತ್ಪನ್ನಗಳು ಗ್ರಾಹಕ ಬೇಡಿಕೆಯನ್ನು ಪೂರೈಸಲು ವಿನ್ಯಾಸಗೊಳಿಸಲಾಗಿದೆ ಹಾಗೂ ಸೂಪರ್‌ಮಾರ್ಕೆಟ್‌ಗಳು, ಕನ್ವೀನಿಯನ್ಸ್‌ ಸ್ಟೋರ್‌ಗಳು, ಬೇಕರಿಗಳು, ವಿಮಾನ ಯಾನ ಸಂಸ್ಥೆಗಳು ಮತ್ತು 'ಹೊರೆಕಾ' ( ಹೋಟೆಲ್, ರೆಸ್ಟೋರೆಂಟ್, ಕೆಫೆ / ಕ್ಯಾಟರಿಂಗ್) ಕ್ಷೇತ್ರಗಳಿಗೆ ಪೂರೈಸಲಾಗುವುದು. ಫ್ಲೋರ್‌ ಮಾಸ್ಟರ್ಸ್‌ ಬೇಕರಿಯು ಪ್ರೈವೇಟ್ ಲೇಬಲ್‌ ಸೌಲಭ್ಯಗಳನ್ನೂ ಒದಗಿಸುತ್ತಿದ್ದು ಈ ಮೂಲಕ ಆಹಾರ ಉದ್ಯಮಗಳಿಗೆ ತಮ್ಮದೇ ಬ್ರ್ಯಾಂಡ್‌ಗಳ ಅಡಿಯಲ್ಲಿ ಕಸ್ಟಮೈಸ್‌ ಮಾಡಿದ ಫ್ಲ್ಯಾಟ್‌ಬ್ರೆಡ್‌ಗಳನ್ನು ತಯಾರಿಸಿಕೊಡುತ್ತದೆ.

ಲಿವರ್‌ ಬ್ರಿಡ್ಜ್‌ ಕಂಪನಿಯ ಸ್ಥಾಪಕರು ಮತ್ತು ಎಚ್‌ಎಂಎಚ್‌ ಹೋಲ್ಡಿಂಗ್.‌ ಕೋ. ಯುಎಇ ಇದರ ಮಂಡಳಿ ಸಲಹೆಗಾರ ಶೆಹಝಾದ್‌ ಅಹಮದ್‌, ಒಮನ್‌ನ ಹೈ ಅಲ್‌ ಖಲೀಲ್‌ ಗ್ರೂಪ್‌ ಆಫ್‌ ಕಂಪನೀಸ್‌ ಇದರ ಆಡಳಿತ ನಿದೇಶಕರಾದ ಮುಹಮ್ಮದ್‌ ಎಂಕೆ, ಖತರ್‌ನ ಮೆಕ್ಟನ್‌ ಗ್ರೂಪ್‌ ಆಫ್‌ ಕಂಪನೀಸ್‌ ಆಡಳಿತ ನಿರ್ದೇಶಕ ಸಯ್ಯದ್‌ ಇಬ್ರಾಹಿಂ, LUSACI ಇಂಟರ್‌ನ್ಯಾಷನಲ್‌ ಇದರ ಕಾರ್ಯಾಚರಣೆಗಳ ನಿರ್ದೇಶಕ ಮತ್ತು ಎಚ್‌ಎಂಎಚ್‌ ಹೋಲ್ಡಿಂಗ್‌ ಕೋ ಇದರ ತಾಂತ್ರಿಕ ಸಲಹೆಗಾರರಾದ ಸಂಜಯ್‌ ಅಗರ್ವಾಲ್‌, ಮೋರೀಶ್‌ ಫುಡ್‌ ಲಿಮಿಟೆಡ್‌, ಇಂಡಿಯಾ ಇದರ ಜನರಲ್‌ ಮ್ಯಾನೇಜರ್ ಮಿರ್ಝಾ ಬೇಗ್‌, ಯುಎಇ ಯ ಅಮೆರಿಕನ್ ಸ್ಪೆಷಾಲಿಟಿ ಫುಡ್ಸ್‌ ಕೋ ಇದರ ಸೇಲ್ಸ್‌ ಜನರಲ್‌ ಮ್ಯಾನೇಜರ್ ಹಾಗೂ ಎಚ್‌ಎಂಎಚ್‌ ಹೋಲ್ಡಿಂಗ್‌ ಇದರ ಗ್ರೂಪ್‌ ಫಿನಾನ್ಶಿಯಲ್‌ ಕಂಟ್ರೋಲರ್‌ ಮಹಮ್ಮದ್‌ ರಿಯಾಝ್‌ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಎಚ್‌ ಎಂ ಎಚ್‌ ಹೋಲ್ಡಿಂಗ್‌ ಕೋ ಸಂಸ್ಥೆಯು ವಿವಿಧ ಉದ್ಯಮಗಳನ್ನು ಹೊಂದಿದ್ದು ಎಫ್‌ಎಂಸಿಜಿ, ಉತ್ಪಾದನೆ, ಇಂಟೆಲೆಕ್ಚುವಲ್ ಪ್ರಾಪರ್ಟಿ ಮತ್ತು ಕನ್ಸಲ್ಟೆನ್ಸಿ ಕ್ಷೇತ್ರಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಸಂಸ್ಥೆಯ ಎಫ್‌ಎಂಸಿಜಿ ವಿಭಾಗದಲ್ಲಿ ಅಮೆರಿಕನ್‌ ಸ್ಪೆಷಾಲಿಟಿ ಫುಡ್ಸ್‌ ಕೋ ಮತ್ತು ಅಮೆರಿಕನ್‌ ಫನ್‌ಫುಡ್ಸ್‌ನಂತರ ಖ್ಯಾತ ಬ್ರ್ಯಾಂಡ್‌ಗಳಿವೆ. ಉತ್ಪಾದನಾ ವಲಯದಲ್ಲಿ ಸಂಸ್ಥೆಯು ಫ್ಲೋರ್‌ ಮಾಸ್ಟರ್ಸ್‌ ಬೇಕರಿ ಹೊಂದಿದೆ. ಅಡ್ವಾನ್ಸ್ಡ್‌ ಬಿಸಿನೆಸ್‌ ಹೋಲ್ಡಿಂಗ್‌ ಮತ್ತು ಕನ್ಸಲ್ಟನ್ಸಿ ಸಂಸ್ಥೆಯಾದ ಫೋರ್‌ ಎಂ ರಿಸೋರ್ಸಸ್‌ ಅನ್ನು ಎಚ್‌ಎಂಎಚ್‌ ಹೋಲ್ಡಿಂಗ್ ಹೊಂದಿದೆ.

 

 

 

 

 

 

 

 

 

 

 

 

 

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News