ಡಾ.ದೇವದಾಸ್ ಕಾಪಿಕಾಡ್ ಗೆ ಜುಬೈಲ್ ಅಲ್ ಮುಝೈನ್ ನಲ್ಲಿ ಭವ್ಯ ಸ್ವಾಗತ

Update: 2024-09-13 06:12 GMT

ರಿಯಾದ್;  "ಕಾಪಿಕಾಡ್ ಶೋ" ಪ್ರದರ್ಶನಕ್ಕಾಗಿ ಸೌದಿ ಅರೇಬಿಯಾಕ್ಕೆ ತೆರಳಿರುವ ಖ್ಯಾತ ತುಳು ಕಲಾವಿದ, ನಟ, ನಿರ್ದೇಶಕ "ತೆಲಿಕೆದ ಬೊಳ್ಳಿ" ಡಾ. ದೇವದಾಸ್ ಕಾಪಿಕಾಡ್ ಅವರನ್ನು ಜುಬೈಲ್ ಅಲ್ ಮುಝೈನ್ ಸಂಸ್ಥೆ ವತಿಯಿಂದ ಸ್ವಾಗತಿಸಿ ಸನ್ಮಾನಿಸಲಾಯಿತು.

ಅಲ್ ಮುಝೈನ್ ಸಂಸ್ಥೆಯ ಮುಖ್ಯಸ್ಥ ಝಕರಿಯಾ ಬಜ್ಪೆ, ಸಿಇಒ ಶರೀಫ್ ಬೋಳಾರ್ ಈ ಸಂದರ್ಭ ಕಾಪಿಕಾಡ್ ದಂಪತಿಯನ್ನು ಸ್ಮರಣಿಕೆ ನೀಡಿ ಗೌರವಿಸಿದರು. ದೇವದಾಸ್ ಕಾಪಿಕಾಡ್ ಪತ್ನಿ ಶರ್ಮಿಳಾ ಕಾಪಿಕಾಡ್ ಉಪಸ್ಥಿತರಿದ್ದರು.

ಸೆಪ್ಟಂಬರ್ 14 ರ ತನಕ "ದಿ ಕಾಪಿಕಾಡ್ ಶೋ" ಐದು ಪ್ರದರ್ಶನಗಳು ಸೌದಿ ಅರೇಬಿಯಾದ ಜುಬೈಲ್ ಪುಲಿ ರೆಸ್ಟೋರೆಂಟ್ ಸಭಾಂಗಣದಲ್ಲಿ ನಡೆಯಲಿದ್ದು, ಬಹುತೇಕ ಟಿಕೆಟ್ ಗಳು ಖಾಲಿಯಾಗಿವೆ.


Delete Edit


Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News