ಕರ್ನಾಟಕ ಖಾಝಿಯಾಗಿ ಆಯ್ಕೆಯಾದ ಇಂಡಿಯನ್ ಗ್ರಾಂಡ್ ಮುಫ್ತಿ ಕಾಂತಪುರಂ ಉಸ್ತಾದ್‌ರಿಗೆ ಕೆಸಿಎಫ್ ವತಿಯಿಂದ ಸನ್ಮಾನ

Update: 2024-10-13 18:45 GMT

ಅಬುಧಾಬಿ: ಇಂಡಿಯನ್ ಗ್ರಾಂಡ್ ಮುಫ್ತಿ ಶೈಖುನಾ ಕಾಂತಪುರಂ ಉಸ್ತಾದ್ ಅವರನ್ನು ದಕ್ಷಿಣ ಕನ್ನಡ ಮತ್ತು ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಸಂಯುಕ್ತ ಜಮಾತ್ ಗಳ ಖಾಝಿಯಾಗಿ ನೇಮಕಗೊಂಡ ನೆಲೆಯಲ್ಲಿ ಇತ್ತೀಚೆಗೆ ಕೆಸಿಎಫ್‌ ಯುಎಇ ರಾಷ್ಟ್ರೀಯ ಸಮಿತಿ ಮತ್ತು ಅಬುಧಾಬಿ ಸಮಿತಿಯ ಜಂಟಿ ಆಶ್ರಯದಲ್ಲಿ ಅಬುಧಾಬಿ ಕೆಸಿಎಫ್ ಸಭಾ ಭವನದಲ್ಲಿ ಸನ್ಮಾನಿಸಲಾಯಿತು.

ಕೆಸಿಎಫ್ ರಾಷ್ಟ್ರೀಯ ಸಮಿತಿಯ ಪರವಾಗಿ ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಇಬ್ರಾಹಿಂ ಸಖಾಫಿ ಕೆದುಂಬಾಡಿ, ಕೋಶಾಧಿಕಾರಿ ಇಬ್ರಾಹಿಂ ಬ್ರೆಟ್, ಸಂಘಟನಾ ವಿಭಾಗದ ಕೆ ಎಚ್ ಮುಹಮ್ಮದ್ ಸಖಾಫಿ ಪಬ್ಲಿಕೇಶನ್ ವಿಭಾಗದ ಹಕೀಂ ತುರ್ಕಳಿಕೆ ಹಾಗೂ ಅಬುಧಾಬಿ ಸಮಿತಿ ಪರವಾಗಿ ಸಮಿತಿಯ ಅಧ್ಯಕ್ಷ ಹಸೈನಾ‌ರ್ ಅಮಾನಿ, ಕೋಶಾಧಿಕಾರಿ ನವಾಝ್ ಹಾಜಿ ಕೋಟೆಕಾರ್ ಮತ್ತು ಶಿಕ್ಷಣ ವಿಭಾಗದ ಅಶ್ರಫ್ ಮುಸ್ಲಿಯಾರ್ ಕನ್ಯಾಡಿ ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿಯ ನಾಯಕರಾದ ಅಬ್ದುಲ್ ಹಮೀದ್ ಸಅದಿ, ಪಿ ಎಂ ಎಚ್ ಹಮೀದ್ ಸಾಹಿಬ್, ಕರ್ನಾಟಕ ರಾಜ್ಯ ಎಸ್.ಎಸ್.ಎಫ್ ಅಧ್ಯಕ್ಷ ಹಾಫೀಝ್ ಸೂಫ್ಯಾನ್ ಸಖಾಫಿ ಸೇರಿದಂತೆ ಇತರ ಸುನ್ನೀ ಸಂಘ ಸಂಸ್ಥೆಗಳ ನಾಯಕರು ಭಾಗವಹಿಸಿದ್ದರು.



Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News