ದುಬೈ: BCF ವತಿಯಿಂದ ಮುಮ್ತಾಝ್ ಅಲಿ ಸ್ಮರಣಾರ್ಥ ಶೋಕ ಸಭೆ

Update: 2024-10-26 15:24 GMT

ಮುಮ್ತಾಝ್ ಅಲಿ

ದುಬೈ: ಬ್ಯಾರೀಸ್ ಕಲ್ಮರಲ್ ಫೋರಮ್ (BCF) ವತಿಯಿಂದ ಮುಮ್ತಾಝ್ ಅಲಿ ನಿಧನದ ಪ್ರಯುಕ್ತ ಅವರಿಗೆ ಸಂತಾಪ ಸಭೆಯನ್ನು ದುಬೈಯ ಮಾಲಿಕ್ ಹೋಟೆಲಿನ ಸಭಾಂಗಣದಲ್ಲಿ ಏರ್ಪಡಿಸಲಾಲಾಯಿತು.

ಸುಮಾರು 22 ವರ್ಷಗಳಿಂದ BCF ನ ಸ್ಥಾಪಕ ಪೋಷಕರಾಗಿ BCF ನ ಎಲ್ಲ ಸಮಾಜ ಸೇವಾ ಕಾರ್ಯಗಳಲ್ಲಿ ಸಕ್ರಿಯರಾಗಿ ಮುಂದಾಳುತನ ವಹಿಸಿ, BCFನ ಅವಿಭಾಜ್ಯ ಅಂಗವಾಗಿದ್ದರು ಮುಮ್ತಾಝ್ ಅಲಿ. ಕರ್ನಾಟಕ, ಕರಾವಳಿ ಕರ್ನಾಟಕದ ಅಗ್ರಮಾನ್ಯ ನಾಯಕರಾಗಿದ್ದ ಮುಮ್ತಾಝ್ ಅಲಿ ಅವರು, ಮಸೀದಿ, ಮದರಸ, ಸಮಾಜ ಸೇವಾ ಸಂಸ್ಥೆಗಳು, ಸ್ಥಾಪನೆಗಳು, ಜಮಾತ್ ಗಳು ಇವೆಲ್ಲದರಲ್ಲಿ ಮುಖ್ಯವಾಹಿನಿಯಲ್ಲಿ ಇದ್ದು ಅಹರ್ನಿಶಿ ಸಾಮಾಜಿಕ ಸೇವಾ ನಾಯಕರಾಗಿದ್ದರು ಎಂದು BCF ಪ್ರಕಟನೆ ತಿಳಿಸಿದೆ.

ಬಡವ ಹೆಣ್ಣು ಮಕ್ಕಳ ವಿವಾಹ ಮೊದಲ್ಗೊಂಡು ಹಲವಾರು ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮತ್ತು ವಿಶೇಷತಾ ಸಮಾಜದ ಮಕ್ಕಳಿಗೆ ವಿದ್ಯೆ ನೀಡುವ ಕಾರ್ಯದಲ್ಲಿ ವಿಶೇಷ ಆಸಕ್ತಿ ವಹಿಸುತ್ತಿದ್ದ ಮುಮ್ತಾಝ್ ಅಲಿ ಅವರು BCF ಸ್ಕಾಲರ್ಷಿಪ್ ಯೋಜನೆಯ ರೂವಾರಿಯಾಗಿ ಕಳೆದ 22 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು ಎಂದು ಸಂತಾಪ ಸಭೆಯಲ್ಲಿ ತಿಳಿಸಿದರು.

ಕೃಷ್ಣಾ ಪುರದಲ್ಲಿ ತಾವು ಸ್ವತಃ ನಡೆಸುವ ತಮ್ಮ ಮಿಸ್‌ಬಾಹ್ ಮಹಿಳಾ ಕಾಲೇಜು ಮೂಲಕ ಅದೆಷ್ಟೋ ಬಡವ ಹೆಣ್ಣು ಮಕ್ಕಳಿಗೆ ವಿದ್ಯೆ ಕೊಡಿಸುವ ಸೇವಾ ಕಾರ್ಯ ಮಾಡುತ್ತಿದ್ದರು. ಮುಮ್ತಾಝ್ ಅಲಿ ಹೆಸರಲ್ಲಿ ದುವಾ ಮತ್ತು ದಿಕ್ರ್‌ ಕಾರ್ಯಕ್ರಮವನ್ನು BCF ತನ್ನ ಈ ಸಂತಾಪ ಸಭೆಯಲ್ಲಿ ಏರ್ಪಡಿಸಿತು.

BCF ಅಧ್ಯಕ್ಷರಾದ ಡಾ. ಬಿ ಕೆ ಯೂಸುಫ್ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಬಹುತೇಕ BCF ಸದಸ್ಯರು, ಪದಾಧಿಕಾರಿಗಳು, BCF ಮಹಿಳಾ ಮಂಡಳಿ ಸದಸ್ಯರು ಪಾಲ್ಗೊಂಡಿದ್ದರು. ಅವರ ಕುಟುಂಬಕ್ಕೆ ಮತ್ತು ಸಹವರ್ತಿಗಳಿಗೆ, ಸ್ನೇಹಿತರಿಗೆ ಅವರನ್ನು ಕಳೆದುಕೊಂಡ ನೋವನ್ನು ಸಹಿಸುವ ಶಕ್ತಿ ಸಿಗಲಿ ಎಂದು ಹಾರೈಸಲಾಯಿತು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News