ದುಬೈಯಲ್ಲಿ ಸಜ್ಜನ ಪ್ರತಿಷ್ಠಾನ ವತಿಯಿಂದ ಕನ್ನಡಿಗರ ಸಮ್ಮಿಲನ ಮತ್ತು ‌ಸ್ನೇಹಕೂಟ

Update: 2023-10-22 06:23 GMT

ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ಮತ್ತು ಬಿಎಫ್ಎ ಇದರ ಆಶ್ರಯದಲ್ಲಿ ದುಬೈಯಲ್ಲಿ ಸಜ್ಜನ ಸ್ನೇಹಕೂಟ ಮತ್ತು ಕನ್ನಡಿಗರ ಸಮ್ಮಿಲನ ಕಾರ್ಯಕ್ರಮ ಸೆ.13ರಂದು ದುಬೈಯ ಶಾರ್ಜದ ಮಜಾಸ್ ನಲ್ಲಿರುವ ಬಾಬಲ್ ಟವರ್ ನಡೆಯಿತು.

ಕಾರ್ಯಕ್ರಮವನ್ನು ಯು ಎ ಇ ಅಲ್ ಫರ್ದಾನ್ ಗ್ರೂಪ್ ನ ಸಿಇಒ ತಾರನಾಥ ರೈ ಉದ್ಘಾಟಿಸಿದರು. ಸಜ್ಜನ ಪ್ರತಿಷ್ಠಾನ ಅಧ್ಯಕ್ಷ ಡಾ.ಉಮ್ಮರ್ ಬೀಜದಕಟ್ಟೆ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಅಶೋಕ ಪಾಲನ್ ಬೈಲೂರು,ಹಿರಿಯ ಉದ್ಯಮಿ ರಹೀಂ ಪೇರಡ್ಕ,ಶಾರ್ಜದ ಹಿರಿಯ ಉದ್ಯಮಿ ಹಮೀದ್ ಜಟ್ಟಿಪಳ್ಳ, ಮಹಮ್ಮದ್ ಇಂಜಿನಿಯರ್ ಮೇನಾಲ, ಅಲ್ ಮದೀನಾ ಸಂಸ್ಥೆಯ ಲತೀಫ್ ತಿಂಗಳಾಡಿ, ಅನ್ವರ್ ಶಿರೂರ್,ಟ್ರೇಮೊಂಟಿನ ಸಂಸ್ಥೆ ಯ ವ್ಯವಸ್ಥಾಪಕ ಬದ್ರುದ್ದೀನ್ ಗೂನಡ್ಕ ,ಪಲ್ಲವಿ ರಾನಡೆ,ಆಸೀಫ್ ಸೊಂಕಾಲ್,ಪೈಜಲ್ ಬೀಜದಕಟ್ಟೆ, ಅಸೀಫ್ ದೊಡ್ಡಡ್ಕ,ಬಶೀರ್ ಅರಂಬೂರು,ನಾಸೀರ್ ಪಟೇಲ್,ಝಕರಿಯ ಕೂರ್ನಡ್ಕ,ತಂಝಿಲ್ ಮಂಗಳೂರು, ಸುಹೈಲ್ ಶಿರೂರ್, ಮೊದಲಾದವರು ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಇನ್ನಿತರ ಆಟೋಟ ಸ್ಪರ್ಧೆ ಏರ್ಪಡಿಸಲಾಗಿತ್ತು. ಇದೇ ಸಂದರ್ಭದಲ್ಲಿ ಸಜ್ಜನ ಲಕ್ ಪತಿ ಕಾರ್ಯಕ್ರಮದ ಟೀಝರ್ ಬಿಡುಗಡೆ ಗೊಳಿಸಲಾಯಿತು.

ದುಬೈಯಲ್ಲಿ ವಿವಿಧ ರೀತಿಯಲ್ಲಿ ಉದ್ಯೋಗದಲ್ಲಿ ತೊಡಗಿಸಿಕೊಂಡರಿರುವ ಸಮಾಜ ಸೇವಕರನ್ನು ಗೌರವಿಸಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ರಿಫಾಯಿ ಪಟೇಲ್ ಸ್ವಾಗತಿಸಿ, ಆಯಿಶಾ ಶಫಾನ, ಶಿಫಾ ರಹ್ಮತುಲ್ಲಾ, ಬದ್ರುದ್ದೀನ್ ಗೂನಡ್ಕ, ಅಸೀಫ್ ದೊಡ್ಡಡ್ಕ ಕಾರ್ಯಕ್ರಮ ನಿರೂಪಿಸಿ,ಅನ್ವರ್ ಶಿರೂರ್ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News