ಕೇರಳದ ಸಾಂಪ್ರದಾಯಿಕ ಆಹಾರಗಳ ಚಿತ್ರದೊಂದಿಗೆ ಓಣಂ ಶುಭಾಶಯ ಕೋರಿದ ದುಬೈ ಯುವರಾಜ
Update: 2023-08-30 17:28 GMT
ದುಬೈ: ದುಬೈನ ಯುವರಾಜ ಮತ್ತು ದುಬೈ ಎಕ್ಸಿಕ್ಯೂಟಿವ್ ಕೌನ್ಸಿಲ್ ಅಧ್ಯಕ್ಷ ಶೇಖ್ ಹಮ್ದಾನ್ ಬಿನ್ ಮುಹಮ್ಮದ್ ಬಿನ್ ರಶೀದ್ ಅಲ್ ಮಖ್ತೂಮ್ ಅವರು ಕೇರಳದ ಜನಪ್ರಿಯ ಹಬ್ಬವಾದ ಓಣಂಗೆ ಎಲ್ಲರಿಗೂ ಶುಭ ಹಾರೈಸಿದ್ದಾರೆ.
ಆಗಸ್ಟ್ 29 ರಂದು, ದುಬೈ ಯುವರಾಜ ತಮ್ಮ Instagram ಸ್ಟೋರಿಯಲ್ಲಿ ಬಾಳೆ ಎಲೆಯ ಮೇಲೆ ಬಡಿಸಿರುವ ಸಾಂಪ್ರದಾಯಿಕ ಓನಸಧ್ಯದ (ಓಣಂ ಹಬ್ಬದ ಆಹಾರ) ಚಿತ್ರವನ್ನು ಹಂಚಿಕೊಂಡಿದ್ದಾರೆ.
ದುಬೈ ರಾಜಕುಮಾರ ಹಂಚಿಕೊಂಡಿರುವ ಚಿತ್ರದಲ್ಲಿ ಅನ್ನ, ಸಾಂಬಾರ್, ಪರಿಪ್ಪು ಕರಿ, ಕೇರಳದ ಸಾಂಪ್ರದಾಯಿಕ ಖಾದ್ಯಗಳಾದ ಅವಿಯಲ್, ತೋರನ್, ಬೀಟ್ರೂಟ್ ಪಚಡಿ, ಓಲನ್, ನಿಂಬೆ ಉಪ್ಪಿನಕಾಯಿ, ಮಾವಿನ ಉಪ್ಪಿನಕಾಯಿ, ಶರ್ಕರ ವೆರಟ್ಟಿ (ಬೆಲ್ಲದಲ್ಲಿ ಬಾಳೆಹಣ್ಣು), ಬಾಳೆ ಚಿಪ್ಸ್, ಹಪ್ಪಳ, ಪಾಯಸ, ಮಜ್ಜಿಗೆ ಸೇರಿದಂತೆ 24 ವಿವಿಧ ಆಹಾರ ಪದಾರ್ಥಗಳಿವೆ.