ಬೇಲೂರು| ಕಾಡಾನೆ ತುಳಿತಕ್ಕೆ ಕಾರ್ಮಿಕ ಸಾವು

Update: 2024-01-05 18:04 GMT
ಸಾಂದರ್ಭಿಕ ಚಿತ್ರ

ಬೇಲೂರು: ಕಾಫಿ ತೋಟದಲ್ಲಿ ಕೆಲಸ ಮುಗಿಸಿ ಮನೆಗೆ ಬರುವ ಸಂದರ್ಭದಲ್ಲಿ ಏಕಾಏಕಿ ಕಾಡಾನೆಯೊಂದು ಕಾಫಿ ತೋಟದ ಕೂಲಿ ಕಾರ್ಮಿಕನ ಮೇಲೆ ದಾಳಿ ಮಾಡಿದ್ದರಿಂದ ವ್ಯಕ್ತಿ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ.

ತಾಲೂಕಿನ ಬಿಕ್ಕೋಡು ಹೋಬಳಿ ಮತ್ತಾವರ ಗ್ರಾಮದ ವಸಂತ ಬಿನ್ ಈರಯ್ಯ (48)  ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಜೊತೆಗೆ ಇದ್ದ ಇನ್ನೊಬ್ಬ ಕಾಡಾನೆಯಿಂದ ತಪ್ಪಿಸಿಕೊಂಡಿದ್ದಾರೆ. ಕಾಡಾನೆಯ ದಾಳಿಯ ಬಗ್ಗೆ ಬೆಳೆಗಾರರು ತೀವ್ರ ಆತಂಕದಲ್ಲಿ ಶಾಶ್ವತ ಪರಿಹಾರ ನೀಡುವಂತೆ  ಆಗ್ರಹಿಸಿದ್ದಾರೆ.

ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಕಾಂಗ್ರೆಸ್ ‌ಮುಖಂಡ ಗ್ರಾನೈಟ್ ರಾಜಶೇಖರ್, ಮಲೆನಾಡಿನಲ್ಲಿ ಮಾನವ - ಪ್ರಾಣಿ ಸಂಘರ್ಷ ಮುಂದುವರೆದ ಪರಿಣಾಮದಿಂದ ಈಗಾಗಲೇ ಏಳೆಂಟು ಮನುಷ್ಯರ ಧಾರುಣ ಸಾವು ನಿಜಕ್ಕೂ ಶೋಚನೀಯ. ಸರ್ಕಾರದ ಮತ್ತು ಸಂಬಂಧಿಸಿದ ಅರಣ್ಯ ಇಲಾಖೆ ಈ ಬಗ್ಗೆ ಕಾರ್ಯೋಮ್ಮುಖವಾಗಬೇಕಿದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News