ಹಾಸನ | ಕರಿಮೆಣಸು ಕೊಯ್ಲಿನ ವೇಳೆ ಹೈಟೆನ್ಷನ್ ತಂತಿಗೆ ತಗುಲಿದ ಅಲ್ಯೂಮಿನಿಯಂ ಏಣಿ ; ಮಂಗಳೂರು ಮೂಲದ ಕಾರ್ಮಿಕ ಮೃತ್ಯು

Update: 2024-04-07 11:56 GMT

ಸಮೀರ್(32)

ಅರೇಹಳ್ಳಿ : ಕಾಫಿ ತೋಟದಲ್ಲಿ ಕರಿಮೆಣಸು ಕೊಯ್ಲಿನ ವೇಳೆ ಕಬ್ಬಿಣದ ಏಣಿಯನ್ನು ಮರಕ್ಕೆ ಇಡುವ ಸಂದರ್ಭ ಹೈಟೆನ್ಷನ್ ತಂತಿಗೆ ಏಣಿ ತಗುಲಿ ಕೂಲಿ ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಅರೇಹಳ್ಳಿಯ ತಾಲೂಕಿನ  ದೊಡ್ಡಸಾಲವರ ಗ್ರಾಮದಲ್ಲಿ ನಡೆದಿದೆ.

ಮೃತ ಕೂಲಿ ಕಾರ್ಮಿಕನನ್ನು ಮಂಗಳೂರು ಮೂಲದ ಸಮೀರ್ (32) ಎಂದು ಗುರುತಿಸಲಾಗಿದ್ದು, ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳಕ್ಕೆ ತಹಶೀಲ್ದಾರ್ ಎಂ.ಮಮತಾ ಬೇಟಿ ನೀಡಿ, ತೋಟದ ಮಾಲೀಕರಿಗೆ ಹೈಟೆನ್ಷನ್ ತಂತಿ ಹಾದು ಹೋಗಿರುವ ಸ್ಥಳದಲ್ಲಿ ಮೆಣಸು ಕಟಾವು ಮಾಡುವ ವೇಳೆ ಯಾಕೆ ಕಾರ್ಮಿಕರ ಬಗ್ಗೆ ಕಾಳಜಿ ವಹಿಸಿಲ್ಲ ,ಇಂತಹ ಅಪಾಯ ಇರುವ ಸ್ಥಳದಲ್ಲಿ ನೀವು ಖುದ್ದು ಹಾಜರಿದ್ದು ಜಾಗ್ರತೆಯಿಂದ ಕೆಲಸ ಮಾಡಿಸಬೇಕಾಗಿತ್ತು.  ಮೃತರು ಬಡವರಾಗಿದ್ದು, ಅವರನ್ನೇ ನಂಬಿಕೊಂಡ ಕುಟುಂಬ ಮುಂದಿನ ಜೀವನ ಸಾಗಿಸಲು ನಿಮ್ಮಿಂದಾಗಬಹುದಾದ ಸೌಕರ್ಯ ಕಲ್ಪಿಸಿಕೊಡಿ ಎಂದು ಸೂಚಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News