ಹಾಸನ | ಅಕ್ರಮ ಗಾಂಜಾ ಮಾರಾಟ: ಇಬ್ಬರ ಬಂಧನ

Update: 2024-02-07 14:49 GMT

ಸಾಂದರ್ಭಿಕ ಚಿತ್ರ

ಹಾಸನ: ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಯುವಕರನ್ನು ಹಾಸನ ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿರುವುದು ವರದಿಯಾಗಿದೆ. 

ಬಂಧಿತ ಆರೋಪಿಗಳನ್ನು ಒಡಿಸ್ಸಾ ಮೂಲದ ಅಡಸು ರಾಜ , ಆಕಾಶ್ ಎಂದು ಗುರುತಿಸಲಾಗಿದ್ದು, ಅವರಿಂದ 80 ಸಾವಿರ ರೂ ಮೌಲ್ಯದ 1 ಕೆಜಿ 300 ಗ್ರಾಂ ಗಾಂಜಾ ಸೊಪ್ಪಿನ ಪ್ಯಾಕೇಟ್ , 90 ಗ್ರಾಂ ತೂಕದ 6 ಚಿಕ್ಕ ಗಾಂಜಾ ಪ್ಯಾಕೇಟ್ ಹಾಗೂ  2 ಮೊಬೈಲ್ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

ಫೆ.6 ರಂದು ಬೆಳಿಗ್ಗೆ ಹೊಳೆನರಸೀಪುರ ರಸ್ತೆಯ ಕೆಐಎಡಿಬಿ ಏರಿಯಾದಲ್ಲಿರುವ  ಹಾಸ್ಟೆಲ್ ಹತ್ತಿರ ಇಬ್ಬರು ಹುಡುಗರು ಗಾಂಜಾ ಮಾರಾಟ ಮಾಡುತ್ತಿದ್ದಾರೆಂಬ ಮಾಹಿತಿ ಮೇರೆಗೆ ಡಿವೈಎಸ್‌ಪಿ ಮುರಳಿಧರ್ ಅವರ ಮಾರ್ಗದರ್ಶನದಲ್ಲಿ  ಗ್ರಾಮಾಂತರ ಠಾಣೆ ಇನ್ಸ್‌ಪೆಕ್ಟರ್ ಬಿ.ಸಿ. ಮಂಜು ಹಾಗೂ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಕೃತ್ಯದಲ್ಲಿ ತೊಡಗಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಘಟನೆ ಸಂಬಂಧ ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News