ಹಾಸನ: ಕೆ.ಐ.ಎ.ಡಿ.ಬಿ. ಕಛೇರಿ ಮುಂದೆ ಜಿಲ್ಲಾ ದಲಿತ ಉದ್ದಿಮೆದಾರರ ಸಂಘದವತಿಯಿಂದ ಅನಿರ್ಧಿಷ್ಟವಧಿ ಧರಣಿ
ಹಾಸನ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ 24 ಹಾಗೂ ಸಾಮಾನ್ಯ ವರ್ಗದ 12 ಸೇರಿ ಒಟ್ಟು 38 ಉದ್ಯಮದಾರರಿಗೆ ಕೈಗಾರಿಕೆಗಳನ್ನು ಸ್ಥಾಪಿಸಲು ಎದುರಾಗುತ್ತಿರುವ ನಿವೇಶನದ ತೊಂದರೆಯನ್ನು ಸರಿಪಡಿಸಿಕೊಡದ ಜಿಲ್ಲಾಡಳಿತ ಮತ್ತು ಕೆ.ಐ.ಎ.ಡಿ.ಬಿ. ರವರಿಂದ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ಅನಿರ್ಧಿಷ್ಟವಧಿ ಕಾಲ ಧರಣಿಯನ್ನು ಕಛೇರಿ ಮುಂದೆ ಹಾಸನ ಜಿಲ್ಲಾ ದಲಿತ ಉದ್ದಿಮೆದಾರರ ಸಂಘದವತಿಯಿಂದ ಪ್ರಾರಂಭಿಸಿದರು.
ಧರಣಿಯಲ್ಲಿ ಆರ್.ಪಿ.ಐ. ಪಕ್ಷದ ಮುಖಂಡರಾದ ಶ್ರೀಧರ್ ಕಲವೀರ್ ಮತ್ತು ಕರ್ನಾಟಕ ದಲಿತ ಉದ್ದಿಮೆದಾರರ ಸಂಘದ ರಾಜ್ಯಾ ಕಾರ್ಯಾಧ್ಯಕ್ಷರಾದ ಸಿ.ಜಿ. ಶ್ರೀನಿವಾಸ್ ಮಾತನಾಡಿದರು.
ಕರ್ನಾಟಕ ದಲಿತ ಉದ್ದಿಮೆದಾರರ ಸಂಘದ ರಾಜ್ಯಾ ಕಾರ್ಯಾಧ್ಯಕ್ಷರಾದ ಸಿ.ಜಿ. ಶ್ರೀನಿವಾಸ್, ಭೀಮ್ ಆರ್ಮಿಯ ಪ್ರಸನ್ನ, ರಾಜ್ಯಾಧ್ಯಕ್ಷ ರಾಜಗೋಪಾಲ್, ಆರ್.ಪಿ.ಐ. ರಾಜ್ಯಾಧ್ಯಕ್ಷ ಸತೀಶ್, ವೆಂಕಟೇಶ್ ಹಾಗೂ ರಾಜ್ಯ ಪದಾಧಿಕಾರಿಗಳು, ಕರ್ನಾಟಕ ರಾಜ್ಯ ದಲಿತ ಉದ್ದಿಮೆದಾರರ ಸಂಘದ ಎಲ್ಲಾ ಜಿಲ್ಲೆಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.