ಸಕಲೇಶಪುರ| ದಲಿತ ಕುಟುಂಬ ಬೆಳೆದಿದ್ದ ಕಾಫಿ, ಬಾಳೆ ಗಿಡಗಳನ್ನು ನಾಶ ಮಾಡಿ ಜಾತಿ ನಿಂದನೆ; ಆರೋಪ

Update: 2023-11-28 17:58 GMT

ಸಕಲೇಶಪುರ: ದಲಿತ ಕುಟುಂಬ ಬೆಳೆದಿದ್ದ ಕಾಫಿ ಮತ್ತು ಬಾಳೆ ಗಿಡವನ್ನು ನಾಶ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ 7 ಸವರ್ಣೀಯರ ವಿರುದ್ಧ ಯಸಳೂರು ಪೊಲೀಸ್ ಠಾಣೆಯಲ್ಲಿ ಅಟ್ರಾಸಿಟಿ ಪ್ರಕರಣ ದಾಖಲಾಗಿದೆ.

ಘಟನೆ ವಿವರ: ವನಗೂರು ಎಸ್ಟೇಟ್ ಸರ್ವೇ ನಂ.2ರಲ್ಲಿ ವೆಂಕಟೇಶ್ ಬಿನ್ ನಿಂಗಯ್ಯ ಎಂಬವರಿಗೆ 4 ಎಕರೆ ಜಮೀನು ಸರಕಾರದಿಂದ ಮಂಜೂರಾಗಿತ್ತು. ವೆಂಕಟೇಶ್ ಅವರ ಮಗ ಅಭಿಜಿತ್ ಮನೆ ಎದುರು ಇದ್ದ ಖಾಲಿ ಜಾಗವನ್ನು ಉಳುಮೆ ಮಾಡಿ ಕಾಫಿ ಗಿಡ ಮತ್ತು ಬಾಳೆ ಗಿಡಗಳನ್ನು ಹಾಕಿದ್ದರು. ಆದರೆ, ಮಕ್ಕಳು ಆಟ ಆಡಲು ಈ ಜಾಗವನ್ನು ಮೀಸಲಿಡಲು ತೀರ್ಮಾನ ಮಾಡಲಾಗಿತ್ತು ಎಂದು ಗ್ರಾಮಸ್ಥರ ವಾದವಾಗಿದೆ.

ಅಭಿಜಿತ್ ಇತ್ತೀಚೆಗೆ ತಹಶೀಲ್ದಾರ್, ಆರ್.ಐ ಮತ್ತು ಗ್ರಾಮ ಲೆಕ್ಕಾಧಿಕಾರಿಯನ್ನು ಸಂಪರ್ಕಿಸಿ ನಾಲ್ಕು ಎಕರೆ ಜಾಗವನ್ನು ಗುರುತಿಸಿ ಕೊಡುವಂತೆ ಮನವಿ ಸಲ್ಲಿಸಿದರು. ಈ ಹಿನ್ನೆಲೆಯಲ್ಲಿ ಆರ್ ಐ, ವಿಎ. ಮತ್ತು ಶಾಸಕ ಸಿಮೆಂಟ್ ಮಂಜು ಸ್ಥಳ ಪರಿಶೀಲನೆ ಮಾಡಿದ್ದರು. ಆದರೆ ಕೆಲವು ಗ್ರಾಮಸ್ಥರು ಅಧಿಕಾರಿಗಳನ್ನು ಲೆಕ್ಕಿಸದೆ ಅಭಿಜಿತ್ ಹಾಕಿರುವ ಕಾಫಿ ಗಿಡ ಮತ್ತು ಬಾಳೆ ಗಿಡಗಳನ್ನು ಕಡಿದು ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಯಸಳೂರು ಪೊಲೀಸ್ ಠಾಣೆ ಯಲ್ಲಿ 7 ಜನರ ಮೇಲೆ ಅಟ್ರಾಸಿಟಿ ಕೇಸ್ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News