ಲೈಂಗಿಕ ದೌರ್ಜನ್ಯ ಪ್ರಕರಣ | ಬಿಜೆಪಿ ಮುಖಂಡ ದೇವರಾಜೇಗೌಡಗೆ 14 ದಿನಗಳ ನ್ಯಾಯಾಂಗ ಬಂಧನ

Update: 2024-05-11 16:10 GMT

ಹೊಳೆನರಸೀಪುರ : ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದ ಹಿನ್ನೆಲೆ ಇಲ್ಲಿಯ ಜೆಎಂಎಪ್‌ಸಿ ನ್ಯಾಯಾಲಯವು ವಕೀಲ ಹಾಗೂ ಬಿಜೆಪಿ ಮುಖಂಡ ದೇವರಾಜ ಗೌಡ ಅವರನ್ನು14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಸಿದೆ.

ಪಟ್ಟಣದ ನಗರ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ಮಹಿಳೆಯೊಬ್ಬರು ವಕೀಲ ದೇವರಾಜೇಗೌಡ ವಿರುದ್ಧ ಎ.1 ರಂದು ನೀಡಿದ್ದ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಪರಸ್ಥಳಕ್ಕೆ ತೆರಳುತ್ತಿದ್ದ ವಕೀಲ ದೇವರಾಜೇಗೌಡರನ್ನು ಹಿರಿಯೂರಿನಲ್ಲಿ ಬಂಧಿಸಿ, ಶನಿವಾರ ರಾತ್ರಿ ನ್ಯಾಯಾಲಯಕ್ಕೆ ಹಾಜರು ಪಡಿಸಿಸಲಾಗಿತ್ತು.

ಇಲ್ಲಿಯ ಜೆಎಂಎಪ್‌ಸಿ ನ್ಯಾಯಧೀಶರು ಜಾಮೀನು ನಿರಾಕರಿಸಿ, ಮೇ 24ರ ವರಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಸಿದೆ.

ಸಂತ್ರಸ್ತೆ ಮಹಿಳೆ ಕಾರಿನಲ್ಲೂ ಲೈಂಗಿಕ ದೌರ್ಜನ್ಯ ನಡೆಸಿದ್ದರು ಎಂದು ದೂರು ದಾಖಲಿಸಿದ್ದ ಹಿನ್ನಲೆಯಲ್ಲಿ ಕಾರಿನ ಪಂಚನಾಮೆ ನಡೆಸಿ, ಕಾರು, ಕಾರಿನಲ್ಲಿದ್ದ ಬ್ಯಾಗ್ ಮತ್ತು ಮೊಬೈಲ್ ವಶಪಡಿಸಿಕೊಂಡರು. ವರಾಜೇಗೌಡರನ್ನು ನ್ಯಾಯಾಂಗಕ್ಕೆ ಒಳಪಡಿಸುವ ಮುನ್ನ ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಯಿತು.

ಎ.1 ರಂದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ವಕೀಲ ದೇವರಾಜೇಗೌಡನ ಮೇಲೆ ಮಹಿಳೆ ನೀಡಿದ್ದ ದೂರನ್ನಾಧರಿಸಿ ಪ್ರಕರಣ ದಾಖಲಾಗಿತ್ತು. ಸಂತ್ರಸ್ತೆಯ ಪತಿ ಕೂಡ ಜಾತಿ ನಿಂದನೆ ಆರೋಪ ಮೇಲೆ ಇದೇ ಪಟ್ಟಣದ ಠಾಣೆಗೆ ಮಾರ್ಚ್ 31 ರಂದು ದೂರು ನೀಡಿದ್ದರು. ಇತ್ತೀಚೆಗೆ ಪ್ರಜ್ವಲ್ ಪೆನ್‌ ಡ್ರೈವ್ ಪ್ರಕರಣದಲ್ಲಿ ಹಲವು ಹೇಳಿಕೆ ನೀಡಿದ್ದ ವಕೀಲ ದೇವರಾಜೇಗೌಡ ವಿರುದ್ಧ ಪ್ರಕರಣಗಳು ದಾಖಲಾಗಿದ್ದು, ಬಂಧನದ ಭೀತಿಯಿಂದ ಪರಾರಿಯಾಗಲು ಯತ್ನಿಸಿದ್ದ ವೇಳೆ ಖಚಿತ ಮಾಹಿತಿ ಮೇರೆಗೆ ಹಿರಿಯೂರು ಸಮೀಪ ಗುರುವಾರ ರಾತ್ರಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News