ಆರೋಗ್ಯಕರ ಲಿವರ್, ಸೋಂಕು ತಡೆಗೆ ಹಲವು ಸೂತ್ರಗಳು

Update: 2023-08-03 09:27 GMT

ಸಾಂದರ್ಭಿಕ ಚಿತ್ರ (Credit: yashodahealthcare.com)

ಮಳೆಗಾಲ ನಿಮಗೆ ಅಸಾಧ್ಯ ಸೆಖೆಯಿಂದ ಆರಾಮ ನೀಡಬಹುದು; ಆದರೆ ತನ್ನ ಜತೆಗೆ ಹಲವು ಆರೋಗ್ಯ ಅಪಾಯಗಳನ್ನೂ ತರುತ್ತದೆ. ಸುಧೀರ್ಘ ಕಾಲದ ಮಳೆ ಬ್ಯಾಕ್ಟೀರಿಯಾ ಹಾಗೂ ವೈರಸ್‍ಗಳನ್ನು ಹರಡುತ್ತದೆ. ಈ ಕಾಲಘಟ್ಟದಲ್ಲಿ ನಮ್ಮ ಲಿವರ್ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಕೂಡಾ ಮುಖ್ಯ ಎನ್ನುತ್ತಾರೆ ಮುಂಬೈ ಗ್ಲೋಬಲ್ ಹಾಸ್ಪಿಟಲ್ಸ್‍ನ ಹೆಪಟಾಲಜಿ ಹಾಗೂ ಲಿವರ್ ಟ್ರಾನ್ಸ್‍ಪ್ಲಾಂಟ್ ಘಟಕದ ತಜ್ಞ ವೈದ್ಯ ಡಾ.ಅಮೀತ್ ಮನ್‍ದೋತ್.

ಹೆಪಟೈಟಿಸ್ ಎ ಮತ್ತು ಬಿ ನಿರೋಧಕ ಲಸಿಕೆ ಹಾಕಿಸುವುದು, ಸುರಕ್ಷಿತ ಲೈಂಗಿಕತೆ ಅನುಸರಿಸುವುದು ಹಾಗೂ ಈ ಮೂಲಕ ಹೆಪಟೈಟಿಸ್ ಬಿ ಮತ್ತು ಸಿ ಸೇರಿದಂತೆ ಲೈಂಗಿಕ ಸೋಂಕು ತಡೆಯುವುದು, ವೈಯಕ್ತಿಕ ಬಳಕೆಯ ವಸ್ತುಗಳಾದ ಟೂಥ್‍ಬ್ರೆಷ್, ರೇಜರ್ ಅಥವಾ ರಕ್ತದ ಜತೆ ಸಂಪರ್ಕ ಹೊಂದಿದ ವಸ್ತುಗಳನ್ನು ಇತರರ ಜತೆ ಹಂಚಿಕೊಳ್ಳದಿರುವುದು ಸೇರಿದಂತೆ ಹಲವು ಸೂತ್ರಗಳನ್ನು ಅವರು ನೀಡಿದ್ದಾರೆ.

ಉತ್ತಮ ನೈಮಲ್ಯ ಕಾಪಾಡಿಕೊಳ್ಳುವುದು, ಟ್ಯಾಟೂ ಹಾಕುವ ಸಾಧನಗಳ ಸಲಕರಣೆಗಳನ್ನು ಸೂಕ್ತವಾಗಿ ಕುದಿಯುವ ನೀರಿನಲ್ಲಿ ಶುದ್ಧಗೊಳಿಸಿ ಬಳಸುವುದು ಹಾಗೂ ಲೈಸನ್ಸ್ ಪಡೆದ ವೃತ್ತಿಪರರ ಸೇವೆ ಪಡೆಯುವುದು, ಆರೋಗ್ಯಕರ ಮತ್ತು ಸಮತೋಲಿತ ಆಹಾರ ಕ್ರಮ ಅನುಸರಿಸುವುದು ಕೂಡಾ ಅಗತ್ಯ ಎಂದು ಅವರು ಸಲಹೆ ನೀಡುತ್ತಾರೆ. ಹಣ್ಣು, ತರಕಾರಿ, ಇಡಿಯ ಕಾಳುಗಳು ಮತ್ತು ಕ್ಷೀಣ ಪ್ರೊಟೀನ್‍ಗಳನ್ನು ಬಳಸುವುದು ಅಗತ್ಯ ಹಾಗೂ ಕೊಬ್ಬು ಹಾಗೂ ಸಕ್ಕರೆ ಅಂಶ ಅಧಿಕ ಇರುವ ಆಹಾರ ಬಳಸುವುದನ್ನು ನಿಯಂತ್ರಿಸುವುದು ಸೂಕ್ತ.

ನಿಯತವಾಗಿ ವ್ಯಾಯಾಮ ಮಾಡುವುದು, ಚುಚ್ಚುಮದ್ದಿನ ಸೂಜಿಗಳನ್ನು ಹಂಚಿಕೊಳ್ಳದಿರುವುದು, ಔಷಧಗಳನ್ನು ವೈದ್ಯರ ಸಲಹೆ ಮೇರೆಗೆ ಮಾತ್ರವೇ ಸೇವಿಸುವುದು, ನಿಯತವಾಗಿ ಆರೋಗ್ಯ ತಪಾಸಣೆ ಮಾಡಿಸುವುದು ಮತ್ತು ಆಹಾರವನ್ನು ಸುರಕ್ಷಿತವಾಗಿ ನಿರ್ವಹಿಸುವುದು ಕೂಡಾ ಅಗತ್ಯ ಎನ್ನುವುದು ಅವರ ಸಲಹೆ.

ಕೃಪೆ: hindustantimes.com

Tags:    

Writer - ವಾರ್ತಾಭಾರತಿ

contributor

Editor - Mushina

A staff reporter

Web Editor at VarthaBharati

Byline - ವಾರ್ತಾಭಾರತಿ

contributor

Similar News