ಜನದಟ್ಟಣೆಯ ಕಡೆಗಳಲ್ಲಿ ಕೆಂಗಣ್ಣು ಹರಡದಂತೆ ತಡೆಯುವುದು ಹೇಗೆ?

Update: 2023-08-03 15:37 GMT

ಸಾಂದರ್ಭಿಕ ಚಿತ್ರ. | Photo: NDTV 

ನಿರಂತರ ಜಿಟಿಜಿಟಿ ಮಳೆ ಕೆಂಗಣ್ಣಿನಂಥ ಸಾಂಕ್ರಾಮಿಕ ಹರಡಲು ಪೂರಕ ವಾತಾವರಣವನ್ನು ನಿರ್ಮಿಸುತ್ತದೆ. ದೆಹಲಿ, ಚಂಡೀಗಢ, ಗುಜರಾತ್ ಹಾಗೂ ಕರ್ನಾಟಕ ಸೇರಿದಂತೆ ಹಲವು ಕಡೆಗಳಲ್ಲಿ ಈ ಸಾಂಕ್ರಾಮಿಕ ವ್ಯಾಪಕವಾಗಿ ಹರಡಿದೆ. ಇದು ಕಣ್ಣಿನ ಬಿಳಿಯ ಹೊರಪದರದ ಉರಿಯೂತದಿಂದ ಸಂಭವಿಸುತ್ತದೆ ಎಂದು ಹೈದರಾಬಾದ್ ಯಶೋಧಾ ಆಸ್ಪತ್ರೆಯ ತಜ್ಞ ವೈದ್ಯ ಡಾ.ದಿಲೀಪ್ ಗುಡೆ ಹೇಳುತ್ತಾರೆ.

ಸಾಮಾನ್ಯವಾಗಿ ಇದು ಸೋಂಕು ಹೊಂದಿರುವ ವ್ಯಕ್ತಿಗಳ ಕೈಗಳು, ಬೆರಳುಗಳ ಮೂಲಕ ಹರಡುತ್ತದೆ. ಕಣ್ಣುಗಳನ್ನು ಉಜ್ಜುವುದು ಕೂಡಾ ಇದಕ್ಕೆ ಕಾರಣವಾಗುತ್ತದೆ. ಜತೆಗೆ ಗಾಳಿಯ ಮೂಲಕವೂ ಇದು ಹರಡುವ ಸಾಧ್ಯತೆ ಇದೆ ಎನ್ನುವುದು ಅವರ ಅಭಿಪ್ರಾಯ.

ಸಾಮಾನ್ಯವಾಗಿ ಸಾರ್ವಜನಿಕ ಸಾರಿಗೆ, ಶಾಲೆ, ಮಾಲ್‍ಗಳು ಅಥವಾ ಸಭೆ ಸಮರಂಭಗಳು ಹೀಗೆ ಜನದಟ್ಟಣೆ ಅಧಿಕ ಇರುವ ಪ್ರದೇಶಗಳಲ್ಲಿ ಇದು ಹರಡುವ ಸಾಧ್ಯತೆ ಅಧಿಕ ಎಂದು ಪ್ರಿಮಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ನೇತ್ರತಜ್ಞ ಡಾ.ಸೌರಭ್ ವರ್ಷಿಣಿ ಹೇಳುತ್ತಾರೆ.

ಉತ್ತಮ ನೈರ್ಮಲ್ಯ ಕಾಪಾಡಿಕೊಳ್ಳುವುದು, ಸೋಂಕಿತ ವ್ಯಕ್ತಿಗಳ ಸಂಪರ್ಕ ಹೊಂದದಿರುವುದು, ವೈಯಕ್ತಿಕ ಬಳಕೆಯ ವಸ್ತುಗಳನ್ನು ಹಂಚಿಕೊಳ್ಳದಿರುವುದು, ಹ್ಯಾಂಡ್ ಸ್ಯಾನಿಟೈಸರ್‍ಗಳ ಬಳಕೆ, ಕನ್ನಡಕ ಧರಿಸುವುದು, ಕಣ್ಣುಗಳನ್ನು ಉಜ್ಜದಿರುವುದು, ಸೋಂಕು ತಗುಲಿದ ಸಂದರ್ಭದಲ್ಲಿ ಮನೆಯಿಂದ ಹೊರಗೆ ಹೋಗದಿರುವುದು ಹಾಗೂ ವೈದ್ಯಕೀಯ ಸಲಹೆಯನ್ನು ಪಾಲಿಸುವ ಮೂಲಕ ಇದು ಹರಡುವುದನ್ನು ತಡೆಯಬಹುದಾಗಿದೆ.

ಕೃಪೆ: indianexpress.com

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News