ಮಲೇರಿಯಾ, ಡೆಂಗ್ಯೂ ಜ್ವರದಿಂದ ನಿಮ್ಮ ಮಕ್ಕಳನ್ನು ಕಾಪಾಡುವುದು ಹೇಗೆ?

Update: 2023-08-05 13:45 GMT

ಸಾಂದರ್ಭಿಕ ಚಿತ್ರ | Photo: NDTV 

ಮಳೆಗಾಲ ದೊಡ್ಡವರನ್ನು ಮಾತ್ರವಲ್ಲದೇ ಪುಟ್ಟ ಮಕ್ಕಳನ್ನೂ ಕಾಡುತ್ತದೆ. ತಾಪಮಾನದಲ್ಲಿ ದಿಢೀರ್ ಕುಸಿತ, ಅಧಿಕ ತೇವಾಂಶ ಮತ್ತು ನಿಂತ ನೀರು ಮಲೇರಿಯಾ, ಡೆಂಗ್ಯೂ, ಡಿಹೈಡ್ರೇಷನ್, ಟೈಫಾಯ್ಡ್, ಚಿಕೂನ್‍ಗುನ್ಯಾ, ಗ್ಯಾಸ್ಟ್ರೊಎಂಟರ್ಟೈಸ್, ಕಲ್ಹಾರ, ಲೆಪ್ಟೋಸ್ಪಿರೋಸಿಸ್, ಕಾಮಾಲೆಯಂಥ ಕಾಯಿಲೆಗಳಿಗೆ ಕಾರಣವಾಗಬಹುದು.

ಈ ರೋಗಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ರೋಗಲಕ್ಷಣವೆಂದರೆ ಅಧಿಕ ಜ್ವರ, ತೀವ್ರ ಮೈಕೈ ನೋವು, ಗುಳ್ಳೆಗಳು, ವಾಂತಿ ಮತ್ತು ಹೊಟ್ಟೆನೋವು ಎಂದು ತಜ್ಞರು ಹೇಳುತ್ತಾರೆ. ನವಿ ಮುಂಬೈ ಮೆಡಿಕವರ್ ಆಸ್ಪತ್ರೆಯ ಮಕ್ಕಳ ತೀವ್ರ ನಿಗಾ ಘಟಕದ ಮುಖ್ಯ ವೈದ್ಯ ಡಾ.ನರಜೋಹನ್ ಮೆಶ್ರಾಮ್ ಅವರು ಮಕ್ಕಳನ್ನು ಕಾಡುವ ಈ ಕಾಯಿಲೆಗಳನ್ನು ತಡೆಯಲು ಸರಳ ಸೂತ್ರಗಳನ್ನು ಮುಂದಿಟ್ಟಿದ್ದಾರೆ.

ಕಲುಷಿತ ನೀರು ಮತ್ತು ಆಹಾರದಿಂದ ಸೋಂಕುಗಳು ಹರಡಬಹುದು. ಇದಲ್ಲದೇ ಕಫ, ಶೀತ ಮತ್ತು ಫ್ಲೂನಂಥ ಸಮಸ್ಯೆಯೂ ಕಾಡಬಹುದು. ಈ ಎಲ್ಲ ಸಂದರ್ಭಗಳಲ್ಲಿ ಮಕ್ಕಳಿಗೆ ಸಕಾಲಿಕವಾಗಿ ವೈದ್ಯಕೀಯ ತಪಾಸಣೆ ಪಡೆಯುವುದು ಅಗತ್ಯ. ವೈದ್ಯರು ನೀಡಿದ ಸೂಚನೆಗಳಿಗೆ ಅನುಸಾರವಾಗಿಯೇ ಪೋಷಕರು ಮಕ್ಕಳ ಆರೈಕೆ ಮಾಡಬೇಕು ಎಂದು ಅವರು ಕಿವಿಮಾತು ಹೇಳುತ್ತಾರೆ.

ಸುತ್ತಮುತ್ತಲ ಪರಿಸರವನ್ನು ಸ್ವಚ್ಛ ಹಾಗೂ ಸೊಳ್ಳೆಗಳಿಂದ ಮುಕ್ತವಾಗಿರುವಂತೆ ನೋಡಿಕೊಳ್ಳುವುದು, ಸೊಳ್ಳೆ ನಿರೋಧಕಗಳ ಬಳಕೆ, ಮಕ್ಕಳಿಗೆ ಸೂಕ್ತವಾದ ಉಡುಗೆ ತೊಡುಗೆ, ಮನೆಯಲ್ಲಿ ಸ್ವಚ್ಛತೆಯನ್ನು ಕಾಪಾಡುವುದು, ಕೈಗಳ ನೈರ್ಮಲ್ಯಕ್ಕೆ ಆದ್ಯತೆ ನೀಡುವುದು ಹಾಗೂ ಮಕ್ಕಳು ಚೆನ್ನಾಗಿ ಆಹಾರ ಸೇವನೆ ಮಾಡುವಂತೆ ನೋಡಿಕೊಳ್ಳುವುದು ಅಗತ್ಯ ಎಂದು ಅವರು ಸಲಹೆ ನೀಡಿದ್ದಾರೆ.

ಕೃಪೆ: hindustantimes.com

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News