ನಿದ್ದೆಗೂ ನಿಮ್ಮ ಕರುಳಿನ ಹಾನಿಕಾರಕ ಬ್ಯಾಕ್ಟೀರಿಯಾಗೂ ಸಂಬಂಧ ಇದೆಯೇ?

Update: 2023-08-06 17:03 GMT
ನಿದ್ದೆಗೂ ನಿಮ್ಮ ಕರುಳಿನ ಹಾನಿಕಾರಕ ಬ್ಯಾಕ್ಟೀರಿಯಾಗೂ ಸಂಬಂಧ ಇದೆಯೇ?

Photo: freepik.com


  • whatsapp icon

ಅಸಮಂಜಸ ನಿದ್ದೆಯ ಅಭ್ಯಾಸ ನಿಮ್ಮ ಕರುಳಿನ ಆರೋಗ್ಯಕ್ಕೆ ಮಾರಕವಾಗಬಹುದು. ಇತ್ತೀಚೆಗೆ ನಡೆಸಿದ ಸಂಶೋಧನೆಯೊಂದರ ಪ್ರಕಾರ, ಅಸಮಂಜಸ ನಿದ್ದೆ ನಿಮ್ಮ ಕರುಳಿನಲ್ಲಿ ಅಪಾಯಕಾರಿ ಸೂಕ್ಷ್ಮಾಣು ಜೀವಿಗಳ ಬೆಳವಣಿಗೆಗೆ ಕಾರಣವಾಗುತ್ತದೆ. ಯೂರೋಪಿಯನ್ ಜರ್ನಲ್ ಆಫ್ ನ್ಯೂಟ್ರೀಷನ್‍ನಲ್ಲಿ ಈ ಅಧ್ಯಯನ ವರದಿ ಪ್ರಕಟವಾಗಿದೆ. ಶಿಫ್ಟ್ ಗಳಲ್ಲಿ ಕೆಲಸ ಮಾಡುವುದು ನಮ್ಮ ಜೈವಿಕ ಗಡಿಯಾರದ ಮೇಲೆ ಪರಿಣಾಮ ಬೀರಿ, ದೇಹತೂಕ ಹೆಚ್ಚಳ, ಹೃದಯ ಸಮಸ್ಯೆಗಳು ಮತ್ತು ಮಧುಮೇಹದಂಥ ಸಮಸ್ಯೆಗೆ ಕಾರಣವಾಗುತ್ತದೆ ಎನ್ನುವುದು ತಜ್ಞರ ಅಭಿಮತ.

ಆದಾಗ್ಯೂ ನಿದ್ದೆಯ ಅಭ್ಯಾಸದಲ್ಲಿ ಆಗುವ ಸಣ್ಣ ವ್ಯತ್ಯಯಗಳು ಕೂಡಾ ಬದಲಾವಣೆಗೆ ಕಾರಣವಾಗುತ್ತದೆ ಎಂಬ ಬಗ್ಗೆ ಅರಿವಿನ ಕೊರತೆ ಇದೆ. ಅಲರಾಂ ಇಟ್ಟುಕೊಂಡು ಕೆಲಸದ ದಿನಗಳಲ್ಲಿ ಬೇಗನೇ ಏಳುವುದಕ್ಕೂ, ರಜಾದಿನಗಳಲ್ಲಿ ಅಲರಾಂ ಇಲ್ಲದೇ ಸಹಜವಾಗಿ ಎಚ್ಚರವಾಗುವುದಕ್ಕೂ ವ್ಯತ್ಯಾಸವಿದ್ದು, ಇದು ನಮ್ಮ ಜೈವಿಕ ಲಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಲಂಡನ್ ಕಿಂಗ್ಸ್ ಕಾಲೇಜಿನ ಹಿರಿಯ ಲೇಖಕ ಡಾ.ವೆಂಡ್ಲಿ ಹಾಲ್ ಪ್ರಕಾರ, ಶಿಫ್ಟ್ ಗಳಲ್ಲಿ ಕೆಲಸ ಮಾಡುವಂಥ ನಿದ್ದೆಯ ವ್ಯತ್ಯಾಸದಿಂದ ನಿಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತದೆ ಎನ್ನುವುದು ನಮಗೆ ತಿಳಿದಿದೆ. ಆದರೆ ಹಲವು ವಾರಗಳ ಕಾಲ ಸಣ್ಣ ವ್ಯತ್ಯಯ ಕೂಡಾ ಕರುಳಿನಲ್ಲಿ ಬ್ಯಾಕ್ಟೀರಿಯಾ ಬೆಳೆಯುವುದಕ್ಕೆ ಸಂಬಂಧ ಹೊಂದಿರುತ್ತದೆ ಎನ್ನುವುದನ್ನು ತಿಳಿಸುವ ಮೊದಲ ಅಧ್ಯಯನ ಇದಾಗಿದೆ. ಆಹಾರ ವ್ಯತ್ಯಾಸ ಕೂಡಾ ಇದಕ್ಕೆ ಕಾರಣವಿರಬಹುದು. ಆದರೆ ನಿಯತವಾಗಿ ನಿದ್ದೆಯ ಅವಧಿ ಸುಧಾರಿಸುವ ಮೂಲಕ ಕರುಳಿನ ಮೈಕ್ರೋಬ್‍ಗಳ ಬೆಳವಣಿಗೆ ವಿಚಾರದಲ್ಲಿ ಅನುಕೂಲಕರ ಬದಲಾವಣೆ ತರಲು ಸಾಧ್ಯವೇ ಎಂಬ ಬಗ್ಗೆ ಅಧ್ಯಯನ ನಡೆಸುವುದು ಅಗತ್ಯ ಎಂದು ಅವರು ಪ್ರತಿಪಾದಿಸುತ್ತಾರೆ.

ಕರುಳಿನ ಮೈಕ್ರೋಬ್‍ಗಳ ಸಂಯೋಜನೆಯು, ವಿಷಕಾರಕ ಅಥವಾ ಪ್ರಯೋಜನಕಾರಿ ಚಯಾಪಚಯ ಪ್ರಕ್ರಿಯೆಗೆ ಕಾರಣವಾಗುವ ಅಂಶಗಳನ್ನು ಉತ್ಪಾದಿಸಿ ಆರೋಗ್ಯದ ಮೇಲೆ ಧನಾತ್ಮಕ ಅಥವಾ ಋಣಾತ್ಮಕ ಪರಿಣಾಮ ಬೀರಬಲ್ಲದು. ಕೆಲ ನಿರ್ದಿಷ್ಟ ಮೈಕ್ರೋಬ್ ಪ್ರಬೇಧಗಳು ಮಧುಮೇಹ, ಹೃದ್ರೋಗ ಮತ್ತು ಬೊಜ್ಜಿಗೆ ಕೂಡಾ ಕಾರಣವಾಗಬಹುದು.

ಕೃಪೆ: hindustantimes.com

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News