ದಂತಕ್ಷಯಕ್ಕೆ ಕಾರಣವಾಗುವ ಆರು ಅಭ್ಯಾಸಗಳು.. ಅದರ ತಡೆ ಹೇಗೆ?
ನಮ್ಮ ಆಹಾರದ ಕಣಗಳು ಉತ್ಪಾದನೆಯಾಗುವ ಆಮ್ಲಗಳಿಂದ ಸೃಷ್ಟಿಯಾಗುವ ಬ್ಯಾಕ್ಟೀರಿಯಾಗಳಿಂದ ಉಂಟಾಗುವ ದಂತಕ್ಷಯ ಸಾಮಾನ್ಯ ಬಾಯಿ ಆರೋಗ್ಯ ಸಮಸ್ಯೆಗಳಲ್ಲೊಂದು. ಈ ಆಮ್ಲದ ಪರಿಣಾಮವಾಗಿ ನಮ್ಮ ದಂತದ ಸವಕಳಿ ಉಂಟಾಗುತ್ತದೆ. ನಿಧಾನವಾಗಿ ಇದು ನಮ್ಮ ಸುರಕ್ಷಾ ಪದರ ಎನಿಸಿದ ಎನಾಮಲ್ ಮತ್ತು ಡೆಂಟಿನ್ ಅನ್ನು ಸಂಪೂರ್ಣವಾಗಿ ಕ್ಷಯಿಸುವಂತೆ ಮಾಡುತ್ತದೆ. ದಂತಕ್ಷಯಕ್ಕೆ ಕಾರಣವಾಗುವ ಹಾಗೂ ಅದನ್ನು ತಡೆಯುವ ಆರು ವಿಧಾನಗಳನ್ನು ನೋಡೋಣ.
ದಂತಕ್ಷಯಕ್ಕೆ ಕಾರಣವಾಗುವ ಆರಂಶಗಳೆಂದರೆ ಬಾಯಿ ಆರೋಗ್ಯ ಕಳಪೆಯಾಗಿರುವುದು, ಹೆಚ್ಚು ಸಿಹಿ ಆಹಾರ ಮತ್ತು ಪಾನೀಯ ಸೇವನೆ, ದಂತವೈದ್ಯರ ಬಳಿಗೆ ಹೋಗದಿರುವುದು, ಧೂಮಪಾನ ಮತ್ತು ತಂಬಾಕು ಬಳಕೆ, ಆಲ್ಕೋಹಾಲ್ ಸೇವನೆ ಮತ್ತು ಹಲ್ಲುಗಳನ್ನು ಸಾಧನವಾಗಿ ಬಳಸುವುದು.
ಹಾಗಾದರೆ ಇಂಥ ದಂತಕ್ಷಯ ತಡೆಯುವುದು ಹೇಗೆ? ಈ ಆರು ಅಂಶಗಳು ದಂತಕ್ಷಯ ತಡೆಗೆ ಸಹಕಾರಿ:
1. ಕನಿಷ್ಠ ದಿನಕ್ಕೆ ಎರಡು ಬಾರಿ ಹಲ್ಲುಜ್ಜುವುದು
2. ಕೊಳೆ ತೆಗೆಯುವುದು (ಫ್ಲಾಸಿಂಗ್): ದವಡೆಯಾದ್ಯಂತ ಟೂಥ್‍ಬ್ರೆಷ್ ತಲುಪದ ಜಾಗಗಳನ್ನು ಸ್ವಚ್ಛಗೊಳಿಸುವ ಸಲುವಾಗಿ ಫ್ಲಾಸಿಂಗ್ ಮಾಡುವುದು. ಅಂದರೆ ನಯವಾದ ದಾರದಿಂದ ಹಲ್ಲುಗಳ ನಡುವೆ ಸಿಕ್ಕಿಕೊಂಡಿರುವ ಆಹಾರ ಕಣಗಳನ್ನು ಸ್ವಚ್ಛಗೊಳಿಸುವುದು.
3. ಸಕ್ಕರೆಯುಕ್ತ ಮತ್ತು ಆಮ್ಲಯುಕ್ತ ಆಹಾರ ಮತ್ತು ಪಾನೀಯವನ್ನು ಮಿತಗೊಳಿಸುವುದು
4. ಪದೇ ಪದೇ ತಿಂಡಿ ತಿನಸು ಸೇವನೆ ಮಾಡದಿರುವುದು
5. ಸಕ್ಕರೆ ರಹಿತ ಗಮ್ ಬಳಕೆ: ಇದರಿಂದ ಹೆಚ್ಚಿನ ಪ್ರಮಾಣದ ಜೊಲ್ಲು ಉತ್ಪಾದನೆಯಾಗಿ ಆಹಾರ ಕಣಗಳು ಬಾಯಿಯಿಂದ ಹೋಗುತ್ತವೆ.
6. ದಂತವೈದ್ಯರ ಬಳಿಗೆ ನಿಯತವಾಗಿ ಭೇಟಿ ನೀಡುವುದು.
ಕೃಪೆ: ndtv.com