ನಿಮಗೆ ಒತ್ತಡದ ಅನುಭವವಾದಾಗ ಏನು ಮಾಡಬೇಕು?: ತಜ್ಞರ ಸಲಹೆ ಇಲ್ಲಿದೆ…

Update: 2023-08-20 03:37 GMT

Photo: freepik.com

ನಿಮಗೆ ಒತ್ತಡದ ಅನುಭವವಾದಾಗ ಏನು ಮಾಡಬೇಕು?: ತಜ್ಞರ ಸಲಹೆ ಇಲ್ಲಿದೆ…

ಕೆಲವೊಮ್ಮೆ ಒತ್ತಡ ನಮ್ಮ ದೈನಂದಿನ ಜೀವನದ ಮೇಲೆ ಪರಿಣಾಮ ಬೀರಬಹುದು. ಇದು ನಮ್ಮ ಕೆಲಸದ ಮೇಲೆ ಪರಿಣಾಮ ಬೀರುವ ಜತೆಗೆ ಸಂಬಂಧಗಳಿಗೂ ಧಕ್ಕೆ ತರಬಹುದು. ಆದ್ದರಿಂದ ಮೂಲ ಸಮಸ್ಯೆಗಳನ್ನು ಪರಿಹರಿಸುವುದು ಮುಖ್ಯ. ತಕ್ಷಣಕ್ಕೆ ಒತ್ತಡದಿಂದ ಮುಕ್ತಿ ಪಡೆಯುವ ಕೆಲ ಸರಳ ಮಾರ್ಗಗಳನ್ನು ನೀವು ಅನುಸರಿಸಬಹುದು. ನಿರಂತರ ಒತ್ತಡದಿಂದ ನಿಮ್ಮ ಮನಸ್ಸು ಮತ್ತು ದೇಹ ಪರಿಣಾಮಕಾರಿಯಾಗಿ ಸಮನ್ವಯ ಸಾಧಿಸಲು ಸಾಧ್ಯವಿಲ್ಲ. ಒತ್ತಡ ಜೀವನದ ಅವಿಭಾಜ್ಯ ಅಂಗವಾಗಿದ್ದು, ನಮಗೆ ಸ್ಫೂರ್ತಿ ಹಾಗೂ ಚಾಲನೆ ನೀಡಲು ಇದು ಮುಖ್ಯವಾದರೂ, ಅಧಿಕವಾದಾಗ ಪರಿಸ್ಥಿತಿಯನ್ನು ನಿಭಾಯಿಸಲು ಕಷ್ಟಪಡಬೇಕಾಗುತ್ತದೆ.

ನಿದ್ರಾ ತರಬೇತಿದಾರರಾದ ಮಾನ್ಸಿ ಗಾಂಧಿ ಹೇಳುವಂತೆ ಒತ್ತಡವು ನಮ್ಮನ್ನು ಅತಿಕ್ರಮಿಸಿ ನಮ್ಮ ಮೆದುಳಿನ ತಾರ್ಕಿಕ ಚಿಂತನೆಗೆ ಶಾರ್ಟ್ ಸಕ್ರ್ಯೂಟ್ ಆಗಿ ಪರಿಣಮಿಸಬಹುದು. ಈ ಒತ್ತಡ ನಿವಾರಣೆಗೆ ಅವರು ಏಳು ಸರಳ ಸೂತ್ರಗಳನ್ನು ನೀಡುತ್ತಾರೆ.

ಒಂದು ಕ್ಷಣ ನಿಂತು ವಿಶ್ರಾಂತಿ ಪಡೆಯುವುದು

ಸಂಪೂರ್ಣ ಭಿನ್ನವಾದ್ದನ್ನು ಮಾಡಿ

ಏನಾದರೂ ಮಾತನಾಡಿ

ಓದು

ಯೋಗ

ನಿಯತಕಾಲಿಕ

ಪ್ರಾತಿನಿಧ್ಯ

ಫೋರ್ಟಿಸ್ ಆಸ್ಪತ್ರೆಯ ಪ್ರಸೂತಿಶಾಸ್ತ್ರಜ್ಞೆ ಡಾ.ಸುಷ್ಮಾ ಥೋಮರ್ ಹೇಳುವಂತೆ, ಯೋಗ, ಧ್ಯಾನ ಅಥವಾ ಧೀರ್ಘ ಶ್ವಾಸದಂಥ ಒತ್ತಡ ನಿವಾರಣೆ ಕ್ರಮಗಳು, ನಿಯತವಾದ ದೈಹಿಕ ಚಟುವಟಿಕೆಗಳು, ಸಾಕಷ್ಟು ನಿದ್ದೆ, ಆರೋಗ್ಯಕರ ಆಹಾರ ಸಏವನೆ, ಸ್ನೇಹಿತರು ಮತ್ತು ಪ್ರೀತಿಪಾತ್ರರ ಜತೆ ಸಂಪರ್ಕ ಹಾಗೂ ವೃತ್ತಿಪರ ನೆರವು ಪಡೆಯುವುದು ಕೂಡಾ ಅಗತ್ಯ.


ಕೃಪೆ: indianexpress.com

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News