ನೀವು ಬೆಳಿಗ್ಗೆ ಎದ್ದ ತಕ್ಷಣ ಲಿಂಬೆ ನೀರನ್ನು ಏಕೆ ಸೇವಿಸಬೇಕು ಎನ್ನುವುದಕ್ಕೆ ಕಾರಣಗಳಿಲ್ಲಿವೆ...

Update: 2023-07-28 06:20 GMT

ಸಾಂದರ್ಭಿಕ ಚಿತ್ರ (credit: yellowchilis.com)

ಲಿಂಬೆ ನೀರಿನ ಆರೋಗ್ಯ ಲಾಭಗಳಿಗೆ ಹಿಂದಿನಿಂದಲೂ ಹಲವು ಪುರಾವೆಗಳಿವೆ. ಲಿಂಬೆಹಣ್ಣಿನಲ್ಲಿ ವಿಟಾಮಿನ್ ಸಿ ಮತ್ತು ಆ್ಯಂಟಿಆಕ್ಸಿಡಂಟ್ (ಉತ್ಕರ್ಷಣ ನಿರೋಧಕ)ಗಳಂತಹ ಪೋಷಕಾಂಶಗಳಿವೆಯಾದರೂ ಒಂದು ಲೋಟ ನೀರಿನಲ್ಲಿರುವ ಲಿಂಬೆರಸದ ಪ್ರಮಾಣವು ಅದು ಎಷ್ಟು ಕ್ಯಾಲರಿಗಳನ್ನು ಒಳಗೊಂಡಿದೆ ಎನ್ನುವುದನ್ನು ನಿರ್ಧರಿಸುತ್ತದೆ.

ಬೆಳಿಗ್ಗೆ ಎದ್ದ ತಕ್ಷಣ ಲಿಂಬೆ ನೀರನ್ನು ಸೇವಿಸುವುದರ ಲಾಭಗಳಿಲ್ಲಿವೆ:

►ನಿರ್ವಿಷೀಕರಣ

ಲಿಂಬೆ ಹಣ್ಣುಗಳು ಸಸ್ಯದ ಕಣಗಳಾದ ಫ್ಲೇವನಾಯ್ಡಗಳ ಮೂಲಗಳಾಗಿವೆ. ಫ್ಲೇವನಾಯ್ಡಗಳು ಉತ್ಕರ್ಷಣ ನಿರೋಧಕ ಮತ್ತು ಉರಿಯೂತ ನಿರೋಧಕ ಗುಣಗಳ ಜೊತೆಗೆ ಪ್ರಬಲ ಉತ್ಕರ್ಷಣ ನಿರೋಧಕವಾಗಿರುವ ವಿಟಾಮಿನ್ ಸಿ ಅನ್ನು ಹೊಂದಿವೆ. ಉತ್ಕರ್ಷಣ ನಿರೋಧಕಗಳು ಶರೀರದಲ್ಲಿನ ಆಕ್ಸಿಡೇಟಿವ್ (ಉತ್ಕರ್ಷಣಶೀಲ) ಒತ್ತಡದಿಂದ ಉಂಟಾಗುವ ಹಾನಿಕಾರಕ ಮತ್ತು ರೋಗಕಾರಕ ಫ್ರೀ ರ್ಯಾಡಿಕಲ್ಗಳನ್ನು ಸ್ವಚ್ಛಗೊಳಿಸುವ ಮೂಲಕ ಶರೀರದಲ್ಲಿಯ ವಿಷಯುಕ್ತ ಅಂಶಗಳನ್ನು ನಿವಾರಿಸಲು ನೆರವಾಗುತ್ತವೆ.

►ಜೀರ್ಣಕ್ರಿಯೆಗೆ ನೆರವಾಗುತ್ತದೆ

ಬೆಳಿಗ್ಗೆ ಲಿಂಬೆ ನೀರಿನ ಸೇವನೆಯು ಗ್ಯಾಸ್ಟ್ರಿಕ್ ಜ್ಯೂಸ್ (ಹೊಟ್ಟೆಯ ವಿವಿಧ ಗ್ರಂಥಿಗಳು ಸ್ರವಿಸುವ ಆಮ್ಲೀಯ ಜೀರ್ಣಕಾರಿ ದ್ರವ)ಗಳ ಉತ್ಪಾದನೆಯನ್ನು ಉತ್ತೇಜಿಸುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸಲು ನೆರವಾಗುತ್ತದೆ.

►ಸಮೃದ್ಧ ವಿಟಾಮಿನ್ ಸಿ

ಲಿಂಬೆ ಹಣ್ಣು ಮತ್ತು ಇತರ ಸಿಟ್ರಸ್ ಹಣ್ಣುಗಳು ಹಾನಿಕಾರಕ ಫ್ರೀ ರ್ಯಾಡಿಕಲ್ಗಳಿಂದ ಕೋಶಗಳಿಗೆ ರಕ್ಷಣೆ ನೀಡುವ ಪ್ರಮುಖ ಉತ್ಕರ್ಷಣ ನಿರೋಧಕ ವಿಟಾಮಿನ್ ಸಿ ಅನ್ನು ಸಮೃದ್ಧವಾಗಿ ಒಳಗೊಂಡಿರುತ್ತವೆ. ಅಲ್ಲದೆ ಶರೀರದಲ್ಲಿ ಹಾರ್ಮೋನ್ಗಳ ಉತ್ಪಾದನೆ, ಕಬ್ಬಿಣಾಂಶ ಹೀರುವಿಕೆ ಮತ್ತು ಕೊಲಾಜನ್ ಎಂಬ ಪ್ರೋಟೀನ್ನ ಸಂಶ್ಲೇಷಣೆಗೂ ವಿಟಾಮಿನ್ ಸಿ ನೆರವಾಗುತ್ತದೆ. ಲಿಂಬೆ ಹಣ್ಣಿನಲ್ಲಿ ಸಮೃದ್ಧವಾಗಿರುವ ವಿಟಾಮಿನ್ ಸಿ ಶರೀರದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಸಾಮಾನ್ಯ ಕಾಯಿಲೆಗಳ ವಿರುದ್ಧ ರಕ್ಷಣೆಯನ್ನು ನೀಡುತ್ತದೆ.

ಹೈಡ್ರೇಷನ್

ಶರೀರದ ಹೈಡ್ರೇಷನ್ ಅಥವಾ ಜಲಸಂಚಯನದೊಂದಿಗೆ ದಿನವನ್ನು ಆರಂಭಿಸಲು ಲಿಂಬೆ ನೀರು ಉತ್ತಮ ಮಾರ್ಗವಾಗಿದೆ. ಶರೀರದಲ್ಲಿ ನೀರಿನ ಅಂಶವನ್ನು ಸೂಕ್ತವಾಗಿ ಕಾಯ್ದುಕೊಳ್ಳುವುದು ಒಟ್ಟಾರೆ ಆರೋಗ್ಯ ಮತ್ತು ಯೋಗಕ್ಷೇಮದಲ್ಲಿ ಪ್ರಮುಖ ಪಾತ್ರವನ್ನು ಹೊಂದಿದೆ. ಪ್ರತಿ ದಿನ ಸಾಕಷ್ಟು ನೀರನ್ನು ಸೇವಿಸುವುದು ಅತ್ಯಗತ್ಯವಾಗಿದೆ. ಸಾದಾ ನೀರು ಶರೀರದ ಒಟ್ಟಾರೆ ಆರೋಗ್ಯಕ್ಕೆ ವಿಶ್ವಾಸಾರ್ಹ ಮೂಲವಾಗಿದ್ದರೂ ಎಲ್ಲರೂ ಅದರ ರುಚಿಯನ್ನು ಇಷ್ಟಪಡುವುದಿಲ್ಲ. ನೀರು ಲಿಂಬೆ ಹಣ್ಣಿನ ಸುವಾಸನೆಯಿಂದ ಕೂಡಿದ್ದರೆ ನೀವು ಹೆಚ್ಚು ನೀರನ್ನು ಸೇವಿಸಿಬಹುದು.

►ತೂಕ ನಷ್ಟ

ಲಿಂಬೆ ಹಣ್ಣಿನಲ್ಲಿರುವ ಪೆಕ್ಟಿನ್ ನಾರು ಹೊಟ್ಟೆಬಾಕತನವನ್ನು ನಿಗ್ರಹಿಸಲು ಮತ್ತು ಶರೀರದ ತೂಕ ಇಳಿಕೆಯನ್ನು ಉತ್ತೇಜಿಸುತ್ತದೆ. ಜೊತೆಗೆ ಲಿಂಬೆ ನೀರು ನೈಸರ್ಗಿಕ ಹಸಿವು ನಿವಾರಕವಾಗಿಯೂ ಕೆಲಸ ಮಾಡುತ್ತದೆ. ಲಿಂಬೆ ನೀರು ಶರೀರದ ಚಯಾಪಚಯವನ್ನು ಹೆಚ್ಚಿಸಲೂ ನೆರವಾಗುತ್ತದೆ

►ಮೂತ್ರಪಿಂಡಗಳ ಆರೋಗ್ಯವನ್ನು ಹೆಚ್ಚಿಸುತ್ತದೆ

ಕೆಲವು ಸಂಶೋಧನೆಗಳು ತೋರಿಸಿರುವಂತೆ ಲಿಂಬೆ ನೀರು ಮೂತ್ರಪಿಂಡ ಕಲ್ಲುಗಳನ್ನು ನಿವಾರಿಸಲು ನೆರವಾಗಬಹುದು. ಇದು ಪೂರಕ ಪರ್ಯಾಯ ಚಿಕಿತ್ಸೆಯಾಗಬಹುದಾದರೂ ಸಾಂಪ್ರದಾಯಿಕ ಚಿಕಿತ್ಸೆಯೊಂದಿಗೆ ಲಿಂಬೆ ನೀರಿನ ಬಳಕೆ ಉತ್ತಮ ಫಲಿತಾಂಶ ನೀಡುವಂತೆ ಕಂಡು ಬರುತ್ತದೆ. ಮೂತ್ರಪಿಂಡಗಳಲ್ಲಿ ಶೇಖರಗೊಳ್ಳುವ ಖನಿಜಗಳು ಕಲ್ಲುಗಳಾಗಿ ಪರಿವರ್ತನೆಗೊಳ್ಳುತ್ತವೆ. ಅವು ಸಾಮಾನ್ಯವಾಗಿ ಕ್ಯಾಲ್ಸಿಯಂ ಆಕ್ಸೇಟ್ನ್ನು ಒಳಗೊಂಡಿರುತ್ತವೆ. ಸಿಟ್ರೇಟ್ ಹೆಚ್ಚಾಗಿ ಔಷಧಿಯಾಗಿ ಬಳಕೆಯಾಗುವ ವಸ್ತುವಾಗಿದೆ.

►ಶರೀರವನ್ನು ಕ್ಷಾರಗೊಳಿಸುತ್ತದೆ

ಲಿಂಬೆ ಹಣ್ಣು ಆಮ್ಲೀಯವಾಗಿದ್ದರೂ ಅದು ಶರೀರದ ಮೇಲೆ ಕ್ಷಾರೀಯ ಪರಿಣಾಮವನ್ನು ಬೀರುತ್ತದೆ. ಶರೀರದ ಪಿಎಚ್ ಮಟ್ಟವು ಸಮತೋಲನಗೊಳ್ಳುವುದರಿಂದ ಒಟ್ಟಾರೆ ಆರೋಗ್ಯವು ಸುಧಾರಿಸುತ್ತದೆ.

►ಉಸಿರನ್ನು ತಾಜಾ ಆಗಿಸುತ್ತದೆ

ಲಿಂಬೆ ನೀರು ನೈಸರ್ಗಿಕ ಬ್ಯಾಕ್ಟೀರಿಯಾ ನಿರೋಧಕ ಗುಣಗಳನ್ನು ಹೊಂದಿದ್ದು,ಇದು ಉಸಿರನ್ನು ತಾಜಾಗೊಳಿಸಲು ಮತ್ತು ಬ್ಯಾಕ್ಟೀರಿಯಾಗಳಿಂದ ಉಂಟಾಗುವ ಕೆಟ್ಟ ಉಸಿರನ್ನು ತಡೆಯಲು ನೆರವಾಗುತ್ತದೆ.

►ಹೃದಯರಕ್ತನಾಳ ಆರೋಗ್ಯಕ್ಕೆ ಒಳ್ಳೆಯದು

ಲಿಂಬೆ ಹಣ್ಣಿನಲ್ಲಿಯ ಉತ್ಕರ್ಷಣ ನಿರೋಧಕ ಗುಣಗಳು ಫ್ರೀ ರ್ಯಾಡಿಕಲ್ಗಳ ರಚನೆಯನ್ನು ತಡೆಯುವ ಮೂಲಕ ಹೃದಯರಕ್ತನಾಳ ರೋಗಗಳ ಅಪಾಯವನ್ನು ತಗ್ಗಿಸಲು ನೆರವಾಗುತ್ತವೆ.

►ಎಲೆಕ್ಟ್ರೋಲೈಟ್ಗಳ ಮೂಲ

ಲಿಂಬೆ ನೀರು ಹೃದಯದ ಆರೋಗ್ಯ ಮತ್ತು ಸ್ನಾಯುಗಳ ಕಾರ್ಯ ನಿರ್ವಹಣೆ ಸೇರಿದಂತೆ ದೈಹಿಕ ಕಾರ್ಯಗಳಿಗೆ ಅಗತ್ಯವಾದ ಪೊಟ್ಯಾಷಿಯಂ, ಕ್ಯಾಲ್ಸಿಯಂ ಮತ್ತು ಮ್ಯಾಗ್ನೇಷಿಯಮ್ನಂತಹ ಎಲೆಕ್ಟ್ರೋಲೈಟ್ಗಳು ಅಥವಾ ವಿದ್ಯುದ್ವಿಚ್ಛೇದ್ಯಗಳನ್ನು ಒಳಗೊಂಡಿರುತ್ತದೆ.

ಕೃಪೆ: NDTV

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News