ಪಾಕಿಸ್ತಾನ | ಧರ್ಮನಿಂದನೆ ಆರೋಪ, ಓರ್ವನ ಹತ್ಯೆ; ಠಾಣೆಗೆ ಬೆಂಕಿ

Update: 2024-06-21 22:10 IST
ಪಾಕಿಸ್ತಾನ | ಧರ್ಮನಿಂದನೆ ಆರೋಪ, ಓರ್ವನ ಹತ್ಯೆ; ಠಾಣೆಗೆ ಬೆಂಕಿ

PC : NDTV 

  • whatsapp icon

ಇಸ್ಲಮಾಬಾದ್ : ಪಾಕಿಸ್ತಾನದ ಖೈಬರ್ ಪಖ್ತೂಂಕ್ವಾದಲ್ಲಿ ಧರ್ಮ ನಿಂದನೆ ಆರೋಪದಲ್ಲಿ ಓರ್ವ ವ್ಯಕ್ತಿಯನ್ನು ಥಳಿಸಿ ಹತ್ಯೆಗೈದಿರುವುದಾಗಿ ವರದಿಯಾಗಿದೆ.

ಖೈಬರ್ ಪಖ್ತೂಂಕ್ವಾದ ಮದ್ಯನ್ ನಗರದ ಹೋಟೆಲ್ ಒಂದರಲ್ಲಿ ತಂಗಿದ್ದ ಪ್ರವಾಸಿ ಮುಹಮ್ಮದ್ ಇಸ್ಮಾಯಿಲ್ ಎಂಬಾತ ಧರ್ಮನಿಂದನೆ ಎಸಗಿದ್ದಾನೆ ಎಂದು ಆರೋಪಿಸಿದ ಕೆಲವರು ಆತನ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಆಗ ಸ್ಥಳೀಯ ಪೊಲೀಸರು ಮುಹಮ್ಮದ್‍ನನ್ನು ಅಲ್ಲಿಂದ ರಕ್ಷಿಸಿ ಠಾಣೆಗೆ ಕರೆತಂದಿದ್ದಾರೆ. ಆಕ್ರೋಶಗೊಂಡಿದ್ದ ಗುಂಪು ಠಾಣೆಗೆ ಬೆಂಕಿಹಚ್ಚಿ, ಮುಹಮ್ಮದ್‍ನನ್ನು ಹೊರಗೆ ಎಳೆದು ತಂದು ಥಳಿಸಿ ಹತ್ಯೆಗೈದಿದೆ ಎಂದು ವರದಿಯಾಗಿದೆ. ಬಳಿಕ ನಗರದಲ್ಲಿ ಹಲವೆಡೆ ನಡೆದ ಹಿಂಸಾಚಾರದಲ್ಲಿ 8 ಮಂದಿ ಗಾಯಗೊಂಡ ಹಿನ್ನೆಲೆಯಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ್ ನಡೆಸಲಾಗಿದ್ದು ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News