ಪುಟಿನ್ ಗೆ ಕದನ ವಿರಾಮ ಬೇಕಿಲ್ಲ, ಆದರೆ ಟ್ರಂಪ್ ಗೆ ಹೇಳಲು ಹೆದರುತ್ತಾರೆ: ಝೆಲೆನ್‍ಸ್ಕಿ
Update: 2025-03-14 20:03 IST
ಝೆಲೆನ್‍ಸ್ಕಿ | PTI
ಕೀವ್: ಪ್ರಸ್ತಾವಿತ ಕದನ ವಿರಾಮಕ್ಕೆ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ವಿರೋಧಾತ್ಮಕ ಪ್ರತಿಕ್ರಿಯೆ ಅವರ ಕುತಂತ್ರವನ್ನು ಪ್ರದರ್ಶಿಸಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್‍ಸ್ಕಿ ಖಂಡಿಸಿದ್ದಾರೆ.
ಯಾವುದನ್ನೂ ಜಟಿಲಗೊಳಿಸುವಂತಹ ಷರತ್ತುಗಳನ್ನು ನಾವು ಮುಂದಿರಿಸಬಾರದು. ಆದರೆ ರಶ್ಯ ಇದನ್ನು ಮಾಡುತ್ತಿದೆ. ವಾಸ್ತವವಾಗಿ ಪುಟಿನ್ ನಿರಾಕರಣೆಗೆ ಸಿದ್ಧವಾಗಿದ್ದರು. ಆದರೆ ಯುದ್ಧವನ್ನು ಮುಂದುವರಿಸಲು ಬಯಸಿರುವುದಾಗಿ ಅಧ್ಯಕ್ಷ ಟ್ರಂಪ್‍ರಲ್ಲಿ ನೇರವಾಗಿ ಹೇಳಲು ಪುಟಿನ್ ಹೆದರಿದ್ದಾರೆ' ಎಂದು ಝೆಲೆನ್‍ಸ್ಕಿ ಪ್ರತಿಪಾದಿಸಿದ್ದಾರೆ. ಕದನ ವಿರಾಮ ಪ್ರಸ್ತಾಪವನ್ನು ಉಕ್ರೇನ್ ಒಪ್ಪಿಕೊಂಡಿದೆ.