ಕಳೆದ ಮೂರು ವಾರಗಳಲ್ಲಿ ರಫಾ ತೊರೆದ 10 ಲಕ್ಷ ನಾಗರಿಕರು!

Update: 2024-05-29 18:16 GMT

ಸಾಂದರ್ಭಿಕ ಚಿತ್ರ PC : NDTV

ರಫಾ : ಇಸ್ರೇಲ್ ಸೇನೆಯ ಭೀಕರ ಶೆಲ್ ದಾಳಿಗೆ ಸಾಕ್ಷಿಯಾದ ರಫಾ ನಗರಕ್ಕೆ ಬುಧವಾರ ಇಸ್ರೇಲ್ ಸೇನೆಯು, ಟ್ಯಾಂಕ್‌ಗಳು ಹಾಗೂ ಮೆಶಿನ್‌ಗನ್‌ಗಳೊಂದಿಗೆ ಕವಚಾವೃತ ವಾಹನಗಳೊಂದಿಗೆ ಪ್ರವೇಶಿವೆ. ರಫಾದ ಮೇಲೆ ಇಸ್ರೇಲ್ ತನ್ನ ದಾಳಿಯನ್ನು ತೀವ್ರಗೊಳಿಸಿರುವುದರಿಂದ ಕಳೆದ ಮೂರು ವಾರಗಳಲ್ಲಿ ನಗರವನ್ನು ತೊರೆದ ಫೆಲೆಸ್ತೀನ್ ನಾಗರಿಕರ ಸಂಖ್ಯೆ 10 ಲಕ್ಷಕ್ಕೇರಿದೆ ಎಂದು ನಿರಾಶ್ರಿತರ ಏಜೆನ್ಸಿಯೊಂದು ತಿಳಿಸಿದೆ.

ರಫಾದ ಪಶ್ಚಿಮಭಾಗದಲ್ಲಿ ಇಸ್ರೇಲ್ ಸೇನೆ ಹಾಗೂ ಹಮಾಸ್ ನಡುವೆ ಗುಂಡಿನ ಕಾಳಗ ತೀವ್ರಗೊಂಡಿರುವುದಾಗಿ ವರದಿಯಾಗಿದೆ. ಕಳೆದ 24 ತಾಸುಗಳಲ್ಲಿ ಗಾಝಾದಲ್ಲಿ ನಡೆದ ಸಂಘರ್ಷದಲ್ಲಿ ಕನಿಷ್ಠ 46 ಮಂದಿ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.

ವಾರ್ತಾ ಭಾರತಿ ವಾಟ್ಸ್ ಆ್ಯಪ್ ಚಾನೆಲ್ ಗೆ ಸೇರಲು https://whatsapp.com/channel/0029VaA8ju86LwHn9OQpEq28 ಈ ಲಿಂಕ್ ಕ್ಲಿಕ್ ಮಾಡಿ, Follow ಮಾಡುವ ಮೂಲಕ ಕ್ಷಣಕ್ಷಣದ ಅಪ್ಡೇಟ್ ಪಡೆಯಿರಿ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News