ಉಕ್ರೇನ್‍ನಲ್ಲಿ ಉತ್ತರ ಕೊರಿಯಾದ 300 ಯೋಧರು ಮೃತ್ಯು: ವರದಿ

Update: 2025-01-13 14:55 GMT

PC : NDTV

ಸಿಯೋಲ್: ರಶ್ಯವು ಉಕ್ರೇನ್‍ನಲ್ಲಿ ನಡೆಸುತ್ತಿರುವ ಯುದ್ಧದಲ್ಲಿ ರಶ್ಯದ ಪರ ಹೋರಾಡುತ್ತಿರುವ ಉತ್ತರ ಕೊರಿಯಾದ ಸುಮಾರು 300 ಯೋಧರು ಸಾವನ್ನಪ್ಪಿದ್ದು 2,700 ಯೋಧರು ಗಾಯಗೊಂಡಿರುವುದಾಗಿ ದಕ್ಷಿಣ ಕೊರಿಯಾದ ಗುಪ್ತಚರ ಏಜೆನ್ಸಿ ವರದಿ ಮಾಡಿದೆ.

ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ರಶ್ಯದ ಪರ ಹೋರಾಟ ನಡೆಸಲು 10,000ಕ್ಕೂ ಅಧಿಕ ಸಿಪಾಯಿಗಳನ್ನು ಕಳುಹಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಉತ್ತರ ಕೊರಿಯಾದ ಪರಮಾಣು ಕಾರ್ಯಕ್ರಮ, ಉಪಗ್ರಹ ಕಾರ್ಯಕ್ರಮಗಳಿಗೆ ತಾಂತ್ರಿಕ ನೆರವು ಒದಗಿಸುವುದಾಗಿ ರಶ್ಯ ಭರವಸೆ ನೀಡಿದೆ ಎಂದು ದಕ್ಷಿಣ ಕೊರಿಯಾ ಹೇಳಿದೆ.

ಉತ್ತರ ಕೊರಿಯಾದ ತುಕಡಿಗಳನ್ನು ರಶ್ಯವು ಕಸ್ರ್ಕ್ ವಲಯದಲ್ಲಿ ನಿಯೋಜಿಸಿದೆ. ಸಂಘರ್ಷದ ಸಮಯ ಉಕ್ರೇನ್ ಸೇನೆಗೆ ಶರಣಾಗುವ ಸಂದರ್ಭ ಬಂದರೆ ಆತ್ಮಹತ್ಯೆ ಮಾಡಿಕೊಳ್ಳುವಂತೆ ಇವರಿಗೆ ಆದೇಶಿಸಲಾಗಿದೆ. ಇದುವರೆಗೆ 300ಕ್ಕೂ ಅಧಿಕ ಯೋಧರು ಸಾವನ್ನಪ್ಪಿದ್ದು ಸುಮಾರು 2,700 ಯೋಧರು ಗಾಯಗೊಂಡಿದ್ದಾರೆ ಎಂದು ವರದಿ ಹೇಳಿದೆ.

ಉಕ್ರೇನ್ ಪಡೆ ಉತ್ತರ ಕೊರಿಯಾದ ಎರಡು ಯೋಧರನ್ನು ಸೆರೆಹಿಡಿದಿರುವುದಾಗಿ ಎರಡು ದಿನಗಳ ಹಿಂದೆ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್‍ಸ್ಕಿ ವೀಡಿಯೊ ಸಹಿತ ಪೋಸ್ಟ್ ಮಾಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News