ಬಾಂಗ್ಲಾದೇಶ: ಹಸೀನಾ, ಕುಟುಂಬದ ವಿರುದ್ಧ ಭ್ರಷ್ಟಾಚಾರ ಪ್ರಕರಣ ದಾಖಲು
Update: 2025-01-13 15:53 GMT
ಢಾಕ : ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಹಾಗೂ ಅವರ ಕುಟುಂಬದ (ಬ್ರಿಟನ್ ಸಚಿವೆ, ವಿಶ್ವಸಂಸ್ಥೆಯ ಹಿರಿಯ ಅಧಿಕಾರಿ ಸೇರಿದಂತೆ) ವಿರುದ್ಧ ಬಾಂಗ್ಲಾದೇಶದ ಭ್ರಷ್ಟಾಚಾರ ವಿರೋಧಿ ಆಯೋಗವು ಪ್ರಕರಣ ದಾಖಲಿಸಿದೆ ಎಂದು ಆಯೋಗದ ಮುಖ್ಯಸ್ಥರು ಸೋಮವಾರ ಹೇಳಿದ್ದಾರೆ.
ರಾಜಧಾನಿ ಢಾಕಾದಲ್ಲಿ ನಡೆದ ಬೃಹತ್ ಭೂಹಗರಣಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಕೆಲವು ಅಧಿಕಾರಿಗಳ ಸಹಯೋಗದೊಂದಿಗೆ ಶೇಖ್ ಹಸೀನಾ ತನಗೆ ಮತ್ತು ತನ್ನ ಕುಟುಂಬದ ಸದಸ್ಯರಿಗೆ ನಿವೇಶನಗಳನ್ನು ಹಂಚಿಕೆ ಮಾಡಿದ್ದರು ಎಂದು ಆಯೋಗದ ಮಹಾನಿರ್ದೇಶಕ ಅಖ್ತರ್ ಹುಸೇನ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಹಸೀನಾ ಅವರ ಸೊಸೆ, ಬ್ರಿಟನ್ ಸರಕಾರದಲ್ಲಿ ಸಚಿವೆಯಾಗಿರುವ ಟುಲಿಪ್ ಸಿದ್ದಿಕ್, ಹಸೀನಾ ಅವರ ಪುತ್ರಿ, ವಿಶ್ವ ಆರೋಗ್ಯ ಸಂಸ್ಥೆಯ ಆಗ್ನೇಯ ಏಶ್ಯಾ ಮುಖ್ಯಸ್ಥೆ ಸೈಮಾ ವಾಝೆದ್ ಕೂಡಾ ಪಟ್ಟಿಯಲ್ಲಿದ್ದಾರೆ ಎಂದವರು ಹೇಳಿದ್ದಾರೆ