ಪೇಜರ್, ವಾಕಿ ಟಾಕಿಗಳ ಸ್ಫೋಟ : ವಿಮಾನಗಳಲ್ಲಿ ಪೇಜರ್, ವಾಕಿಟಾಕಿಯನ್ನು ನಿಷೇಧಿಸಿದ ಲೆಬನಾನ್

Update: 2024-09-19 14:18 GMT

PC : deccanherald.com

ಬೈರೂತ್: ಈ ವಾರ ಹಿಜ್ಬುಲ್ಲಾ ಸಂಘಟನೆಯ ಮೇಲೆ ನಡೆದ ಮಾರಣಾಂತಿಕ ದಾಳಿಯಲ್ಲಿ ಪೇಜರ್, ವಾಕಿ ಟಾಕಿಗಳು ಸ್ಫೋಟಿಸಿರುವ ಹಿನ್ನೆಲೆಯಲ್ಲಿ, ವಿಮಾನಗಳಲ್ಲಿ ಪೇಜರ್, ವಾಕಿ ಟಾಕಿ ಕೊಂಡೊಯ್ಯುವುದನ್ನು ಲೆಬನಾನ್ ಪ್ರಾಧಿಕಾರಗಳು ನಿಷೇಧಿಸಿವೆ ಎಂದು National News Agency ವರದಿ ಮಾಡಿದೆ.

ಬೈರೂತ್ ನಿಂದ ವಿಮಾನದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಮುಂದಿನ ಸೂಚನೆಯವರೆಗೆ ವಿಮಾನಗಳಲ್ಲಿ ಪೇಜರ್ ಮತ್ತು ವಾಕಿ ಟಾಕಿ ಬಳಕೆಯನ್ನು ನಿಷೇಧಿಸಲಾಗಿದೆ ಎಂದು ಲೆಬನಾನ್ ನಾಗರಿಕ ವಿಮಾನ ಯಾನ ನಿರ್ದೇಶನಾಲಯವು ಸೂಚಿಸಿದೆ. ಅಂತಹ ಸಾಧನಗಳನ್ನು ವಿಮಾನಗಳಲ್ಲಿ ಸಾಗಣೆ ಮಾಡುವುದನ್ನೂ ನಿಷೇಧಿಸಲಾಗಿದೆ ಎಂದು ಲೆಬನಾನ್ ಸರಕಾರಿ ಮಾಧ್ಯಮ ಸಂಸ್ಥೆ ವರದಿ ಮಾಡಿದೆ.

ಮಂಗಳವಾರ ಮತ್ತು ಗುರುವಾರ ಒಂದರ ಹಿಂದೆ ಒಂದರಂತೆ ನಡೆದ ಪೇಜರ್ ಮತ್ತು ವಾಕಿ ಟಾಕಿ ಸ್ಫೋಟಗಳಲ್ಲಿ ಇದುವರೆಗೆ ಕನಿಷ್ಠ ಪಕ್ಷ 37 ಮಂದಿ ಮೃತಪಟ್ಟಿದ್ದು, 3,000ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News