ಗಾಝಾ ಶಾಲೆ ಮೇಲೆ ಇಸ್ರೇಲ್‌ ವಾಯು ದಾಳಿ: 100 ಮಂದಿ ಬಲಿ

Update: 2024-08-10 05:56 GMT

ಸಾಂದರ್ಭಿಕ ಚಿತ್ರ (PTI)

ಗಾಝಾ: ಗಾಝಾ ನಗರದ ಶಾಲೆಯೊಂದರ ಮೇಲೆ ಇಸ್ರೇಲ್ ನಡೆಸಿದ ವಾಯು ದಾಳಿಯಲ್ಲಿ 90ರಿಂದ 100 ಜನರು ಸಾವನ್ನಪ್ಪಿದ್ದಾರೆಂದು ಗಾಝಾದ ಸಿವಿಲ್‌ ಡಿಫೆನ್ಸ್‌ ಏಜನ್ಸಿ ಹೇಳಿದೆ. ಆದರೆ ಈ ಕಟ್ಟಡ ಹಮಾಸ್‌ ಕಮಾಂಡ್‌ ಕೇಂದ್ರವಾಗಿತ್ತು ಎಂದು ಇಸ್ರೇಲಿನ ಮಿಲಿಟರಿ ಹೇಳಿದೆ.

ಗಾಝಾದ ಅಲ್-ಸಹಬ ಪ್ರದೇಶದ ಅಲ್-ತಬಾಯೀನ್‌ ಶಾಲೆಯ ಮೇಲೆ ದಾಳಿಯಲ್ಲಿ ಅಪಾರ ಸಾವು ನೋವು ಸಂಭವಿಸಿದೆ. ಅನೇಕರು ಗಾಯಗೊಂಡಿದ್ದಾರೆ.” ಎಂದು ಏಜನ್ಸಿ ವಕ್ತಾರ ಮಹಮೌದ್‌ ಬಸಲ್‌ ಹೇಳಿದ್ದಾರೆ ಹಾಗೂ ಇದೊಂದು ಭೀಭತ್ಸ ನರಮೇಧ, ಹಲವಾರು ಮೃತದೇಹಗಳು ಬೆಂಕಿ ಹತ್ತಿಕೊಂಡು ಸುಟ್ಟಿವೆ ಎಂದು ಹೇಳಿದ್ದಾರೆ.

ಆದರೆ ಈ ಶಾಲೆಯಲ್ಲಿ ಹಮಾಸ್‌ ಕಮಾಂಡ್‌ ಮತ್ತು ಕಂಟ್ರೋಲ್‌ ಸೆಂಟರ್‌ ಇತ್ತು ಅದರ ಮೇಲೆ ನಿಖರ ದಾಳಿ ನಡೆದಿದೆ ಎಂದು ಇಸ್ರೇಲ್‌ ಹೇಳಿಕೊಂಡಿದೆ.

ಗುರುವಾರ ಗಾಝಾ ನಗರದ ಎರಡು ಶಾಲೆಗಳ ಮೇಲಿನ ದಾಳಿಯಲ್ಲಿ 18ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆಂದು ಏಜನ್ಸಿ ಹೇಳಿತ್ತು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News