ಅಲ್ ಖಾಯಿದಾ ಯಮನ್ ಘಟಕದ ಮುಖ್ಯಸ್ಥನಾಗಿ ಅಲ್-ಅವ್ಲಾಕಿ

Update: 2024-03-28 18:32 GMT

ಸಾನಾ: ಜಾಗತಿಕ ಉಗ್ರಗಾಮಿ ಸಂಘಟನೆ ಅಲ್ ಖಾಯಿದ ಯಮನ್ ಘಟಕವಾದ ಎಕ್ಯೂಎಪಿಯ ನಾಯಕತ್ವವನ್ನು ಸಾದ್ ಅಲ್ ಅವ್ಲಾಕಿ ವಹಿಸಿಕೊಂಡಿದ್ದಾನೆ. ಸಂಘಟನೆಯ ಮಾಜಿ ನಾಯಕ ಖಾಲಿದ್ ಬತಾರ್ಫಿಯ ನಿ‘ನದ ಬಳಿಕ ಆತ ಸಂಘಟನೆಯ ಮುಖ್ಯಸ್ಥನಾಗಿದ್ದಾನೆ.

ಸಂಘರ್ಷಪೀಡಿತ ಯಮನ್ನ ದಕ್ಷಿಣ ‘ಭಾಗವನ್ನು ನೆಲೆಯಾಗಿಸಿ ಕಾರ್ಯನಿರ್ವಹಿಸುತ್ತಿರುವ ಎಕ್ಯುಎಪಿಯಯನ್ನು ಅಲ್ ಖಾಯಿದ ಉಗ್ರಗಾಮಿ ಜಾಲದ ಅತ್ಯಂತ ಅಪಾಯಕಾರಿ ಶಾಖೆಯೆಂದು ಅಮೆರಿಕ ಆಡಳಿತ ಪರಿಗಣಿಸಿದೆ. ಅಮೆರಿಕ ಹಾಗೂ ಯುರೋಪ್ನಲ್ಲಿ ಅದು ಹಲವಾರು ‘ಭಯೋತ್ಪಾದಕ ದಾಳಿಗಳನ್ನು ನಡೆಸಿತ್ತು. 2015ರಲ್ಲಿ 12 ಮಂದಿ ಸಾವನ್ನಪ್ಪಿದ ‘ಚಾರ್ಲಿ ಹೆಬ್ಡೊ’ ಪತ್ರಿಕೆಯ ಕಾರ್ಯಾಲಯದ ನಡೆದ ದಾಳಿ ಪ್ರಕರಣದಲ್ಲಿಯೂ ಈ ಗುಂಪಿನ ಕೈವಾಡವಿರುವುದಾಗಿ ಶಂಕಿಸಲಾಗಿದೆ.

ದೀರ್ಘಕಾಲದ ಅಸ್ವಾಸ್ಥ್ಯದಿಂದ ಖಾಲಿದ್ ನಿಧನದ ಬಳಿಕ ಆತನ ಉತ್ತರಾಧಿಕಾರಿಯಾಗಿ ಅವ್ಲಾಕಿಯನ್ನು ಆಯ್ಕೆ ಮಾಡಲಾಗಿದೆʼ ಎಂದು ಎಕ್ಯೂಎಪಿ ಘೋಷಿಸಿದೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News